ಬೆಳಗಾವಿ- ನಗರದ ಹೃದಯ ಭಾಗದಲ್ಲಿರುವ ಸರ್ಧಾರ ಮೈದಾನದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಫಿರೋಜ್ ಸೇಠ ಭಾನುವಾರ ಬೆಳಗ್ಗೆ ಚಾಲನೆ ನೀಡಿದರು
ನಗರೋಥ್ಥಾನ ಅನುದಾನದ ೧.೫ ಕೋಟಿ ರೂ ವೆಚ್ಚದಲ್ಲಿ ಪೆವೆಲಿಯನ್ ನಿರ್ಮಾಣದ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಾಯಿತು
ಸರ್ಧಾರ ಮೈದಾನ ನಗರ ಪ್ರದೇಶದ ಕ್ರೀಡಾ ಪ್ರೇಮಿಗಳ ಜೀವನಾಡಿಯಾಗಿದೆ ಒಂದು ಕೋಟಿ ರೂ ವೆಚ್ಚದಲ್ಲಿ ಪೆವೆಲಿಯನ್ ನಿರ್ಮಾಣ ಹಾಗು ಪಿಚ್ ಯಾರ್ಡ ಹಾಗು ಗ್ಯಾಲರಿ ನಿರ್ಮಿಸಲಾಗುವದು ಒಟ್ಟು ೧.೫ ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಸೇಠ ಹೇಳಿದರು
ತಾವು ಶಾಸಕರಾದನಂತರ ನಗರದಲ್ಲಿ ಕ್ರೀಡಾ ಚಟವಟಿಕೆಗಳಿಗೆ ಉತ್ರೇಜನ ನೀಡಲು ನಗರದಲ್ಲಿ ಈಜುಕೋಳಗಳ ನಿರ್ಮಾಣ ಕ್ರೀಡಾಂಗಣಗಳ ಅಭಿವೃದ್ಧಿ ಒಳಾಂಗಣ ಕ್ರೀಡಾಂಗಣದ ನಿರ್ಮಾಣಕ್ಜೆ ಕ್ರಮ ಕೈಗೊಂಡಿದ್ದೇನೆ ಎಂದು ಶಾಸಕ ಸೇಠ ಹೇಳಿದರು
ಬೆಳಗಾವಿ ಉತ್ತರ ಮತಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳು ಕಾಲಮಿತಿಯಲ್ಲಿ ಪೂರ್ಣಗೊಳ್ಳಲಿವೆ ಒಂದು ವರ್ಷದಲ್ಲಿ ಕ್ಷೇತ್ರದ ಚಿತ್ರಣ ಬದಲಾಗಲಿದೆ ಎಂದು ಶಾಸಕ ಸೇಠ ಹೇಳಿದರು
ಪಾಲಿಕೆಯ ಮುಖ್ಯ ಅಭಿಯಂತರ ಆರ್ ಎಸ್ ನಾಯಕ ಹಿರೇಮಠ ಹಾಗು ನೂರಾರು ಜನ ಯುವಕರು ಪಾಲ್ಗೊಂಡಿದ್ದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ