ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಸತೀಶ್ ಜಾರಕಿಹೊಳಿ ಚಾಲನೆ ನೀಡಿದರು.ಕೆಪಿಸಿಸಿ ಕಾರ್ಯಾದ್ಯಕ್ಷರಾಗಿರುವ ಸತೀಶ್ ಜಾರಕಿಹೊಳಿ ಅವರು ತಮ್ಮ ಯಮಕನಮರಡಿ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸುತ್ತಿದ್ದಾರೆ ಜೊತೆಗೆ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಪಕ್ಷದ ಸಂಘಟನೆಯಲ್ಲೂ ಸಕ್ರೀಯವಾಗಿದ್ದಾರೆ.
ಬೆಳಗಾವಿ : ಶಾಸಕರ ಅನುದಾನದಲ್ಲಿ ಯಮಕನಮರಡಿ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿನ ರಸ್ತೆ ಹಾಗೂ ಕಟ್ಟಡ ಕಾಮಗಾರಿಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಗುರುವಾರ ಚಾಲನೆ ನೀಡಿದರು.
ಹೆಬ್ಬಾಳ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿನ ಜಿನರಾಳ ಗ್ರಾಮದಲ್ಲಿ 12 ಲಕ್ಷ ವೆಚ್ಚದ ಸಿಸಿ ರಸ್ತೆಗೆ ಮೊದಲು ಚಾಲನೆ ನೀಡಿದರು. ಬಳಿಕ ಅರ್ಜುನವಾಡ ಗ್ರಾಮದಲ್ಲಿ ಪೈಪಲೈನ್ ಹಾಗೂ ಅಂಗನವಾಡಿ ಕಟ್ಟಡ, ಕುರಣಿವಾಡಿ ಗ್ರಾಮದಲ್ಲಿ ರಂಗ ಮಂದಿರ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದರು. ತದನಂತರ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕುರ್ಚಿ, ಸೌಂಡ್ ಸಿಸ್ಟಮ್, ವಾಲ್ಮೀಕಿ ಭವನಕ್ಕೆ ಕುರ್ಚಿ ವಿತರಿಸಿದರು.
ಹೆಬ್ಬಾಳ ಜಿಲ್ಲಾ ಪಂಚಾಯತಿ ಸದಸ್ಯ ಮಹಾಂತೇಶ ಮಗದುಮ್ಮ, ಪ್ರಕಾಶ ಬಸ್ಸಾಪುರಿ, ಪಪ್ಪುಗೌಡ ಪಾಟೀಲ, ಇಲಾಯಿ ಇನಾಮಾದಾರ, ಮಾರುತಿ ಕುಂದಿ, ಆನಂದ ಕುಲಕರ್ಣಿ, ಮಂಜುನಾದ ದೇಶಪ್ಪಗೋಳ, ಚಂದು ಪೂಜೇರಿ, ಪರಮೇಶ್ವರ ಖೋತ್, ಸಂಜು ಗಡರೋಳ್ಳಿ, ಆನಂದಸ್ವಾಮಿ ತವಗಮಠ, ಅಕ್ಕಪ್ಪ ಪಾಟೀಲ, ಶಂಕರ ಆಡಿ, ಸುರೇಶ ಹುದ್ದಾರ, ಬಾಳು ಕೋಳಿ, ಸಿದ್ದಣ ಗಿಡಗಾರ, ರಾವಸಾಹೇಬ ಗುಡಸಿ, ಅಶೋಕ ಮಾಳಗಿ, ಹನಮಂತ ಶೇಖನವರ ಇತರರು ಇದ್ದರು.