Breaking News

ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ರೆ ಕರದಂಟು, ದುಬೈನಲ್ಲೂ ಸಿಗುತ್ತೆ.

ಬೆಳಗಾವಿ-ಬೆಳಗಾವಿ ಕುಂದಾ ಜೊತೆ ಗೋಕಾಕ್ ಕರದಂಟು ಚೆನ್ನಾಗಿರುತ್ತದೆ ಎಂಬ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ವಿಚಾರ ಈಗ ಮತ್ತೆ ಚರ್ಚೆಗೆ ಗುರಿಯಾಗಿದೆ ಯಾಕಂದ್ರೆಈ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಇವತ್ತು ಈ ಕುರಿತು ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಬೆಳಗಾವಿಯ ಭೂತರಾಮನಹಟ್ಟಿ ರಾಣಿ ಚನ್ನಮ್ಮ ಝೂನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಕರದಂಟು ಬೇಕಾದರೆ ಗೋಕಾಕ್‌ನಲ್ಲೂ ಸಿಗುತ್ತೆ, ಬೆಳಗಾವಿಯಲ್ಲೂ ಸಿಗುತ್ತೆ,ಮೆಜೆಸ್ಟಿಕ್ ನಲ್ಲಿಯೂ ಸಿಗುತ್ತೆ, ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ರೆ ದುಬೈನಲ್ಲೂ,ಗೋಕಾಕಿನ ಪ್ರಸಿದ್ಧ ಕರದಂಟು ಸಿಗುತ್ತದೆ ಎಂದು,ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ಬಗ್ಗೆ ಸತೀಶ್ ಜಾರಕಿಹೊಳಿ‌ ಹಾಸ್ಯ ಪಟಾಕಿ ಸಿಡಿಸಿದ್ದಾರೆ..

ಗೋಕಾಕ್‌ನಲ್ಲಿ ರಮೇಶ್ ಸೋಲಿಸಲು ನನ್ನದು ಹಾಗೂ ಸತೀಶ್‌ರವರ ಜಾಯಿಂಟ್ ವೆಂಚರ್ ಎಂಬ ಹೆಬ್ಬಾಳ್ಕರ್ ಹೇಳಿಕೆ ವಿಚಾರ, ನಾವು ಹೆಚ್ಚು ಸೀಟ್ ಗೆಲ್ಲುವುದು ಜಾಯಿಂಟ್ ವೆಂಚರ್, ಗೋಕಾಕ್ ಸೇರಿ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗೆಲ್ಲೋದು ನಮ್ಮ ಪ್ಲ್ಯಾನ್,ಅದನ್ನ ಜಾಯಿಂಟ್ ವೆಂಚರ್ ಅಂತಾ ಹೇಳಿರಬಹುದಷ್ಟೇ ಅದರಲ್ಲೇನು ತಪ್ಪಿದೆ ಎಂದರು ಸಾಹುಕಾರ್ ಸತೀಶ್.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕರನ್ನ ಕಡೆಗಣಿಸಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ‌ ಸರ್ಕಾರಿ ಸಭೆ ವಿಚಾರ, ಅಂತವು ಯಾವುದಾದರೂ ಸಭೆ ಆಗಿದ್ರೆ ಲಿಸ್ಟ್ ಮಾಡಿ ಕೆಡಿಪಿ ಸಭೆ ಕರೀತಾರೆ,ಕೆಡಿಪಿ ಸಭೆಯಲ್ಲಿ ನಾವು ಕೇಳುವ ಅಧಿಕಾರ ಇರುತ್ತೆ.ಎಂದರು

ಲಿಂಗಾಯತ ಮುಖಂಡರನ್ನು ಗೋಕಾಕ್ ಅಷ್ಟೇ ಅಲ್ಲ ಇಂಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಆಹ್ವಾನ ಮಾಡ್ತಿದ್ದೇವೆ,ಬಹಳಷ್ಟು ಜನ ಕಾಂಗ್ರೆಸ್‌ ಪಕ್ಷಕ್ಕೆ ಬರ್ತಾರೆ ಎಂದು ಸತೀಶ್ ಜಾರಕಿಹೊಳಿ‌ ಹೇಳಿದರು.

ರಾಜ್ಯ ಕಾಂಗ್ರೆಸ್‌ನಲ್ಲಿ ಡಿಕೆಶಿ, ಸಿದ್ದರಾಮಯ್ಯ ಎಂದು ಎರಡು ಗುಂಪು ವಿಚಾರ,ಅದು ಬೆಂಗಳೂರು ಲೆವೆಲ್, ನಮ್ಮ ಜಿಲ್ಲೆಗೇನು ಸಂಬಂಧ? ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಪ್ರಶ್ನೆ ಮಾಡಿದ್ರು.ಗುದ್ದಾಟ ಅಂತಾ ಏನೂ ಇಲ್ಲ, ಕೆಲವು ಘಟನೆ ಆಗ್ತಾ ಇರ್ತಾವೆ,ಅದಕ್ಕೆ ಅವರ ಫೇಲ್ಯೂರ್, ಇವರು ಸಕ್ಸಸ್ ಅಂತಾ ಹೇಳಕ್ಕಾಗಲ್ಲ,ಸಿದ್ದರಾಮಯ್ಯರನ್ನ ಮೂಲೆಗುಂಪು ಮಾಡಲಾಗುತ್ತಿದೆ ಎಂಬ ವಿಚಾರ,ಯಾರನ್ಯಾರು ಮೂಲೆಗುಂಪು ಮಾಡೋಕೆ ಆಗಲ್ಲ, ಆ ರೀತಿ ಯಾರೂ ಇಲ್ಲ ಇಲ್ಲಿ,ಬೆಳಗಾವಿ ಕಾಂಗ್ರೆಸ್ ಶಾಸಕರು ನಿಮಗೆ ಸಾಥ್ ಕೊಡ್ತಿಲ್ಲವೇ ಎಂದು ಸತೀಶ್‌ಗೆ ಪ್ರಶ್ನೆ ಮಾಡಿದಾಗ, ಬೆಳಗಾವಿ ಕಾಂಗ್ರೆಸ್ ಶಾಸಕರು ಅವರವರ ಕ್ಷೇತ್ರಕ್ಕೆ ಸೀಮಿತವಾಗಿದ್ದು ನಿಜ ಜಿಲ್ಲೆಯಲ್ಲಿ ಮೀಟಿಂಗ್ ಕರೆದಾಗ ಬಂದಿರ್ತಾರೆ, ನಾವು ಬರ್ತೀವಿ ಅಂತಾ ಬರಲಿಕ್ಕಾಗಲ್ಲ, ನಾವು ಓವರ್‌ಆಲ್ ಡಿಸ್ಟ್ರಿಕ್ಟ್, ಮುಂಬೈ ಕರ್ನಾಟಕ ಹೋಗ್ತೀವಿ
ನಮ್ಮ ರೀತಿ ಮಾಡಬೇಕೆಂದರೆ ಅವರು ಅಸಹಾಯಕರಿರುತ್ತಾರೆ ತಮ್ಮ ಕ್ಷೇತ್ರಗಳಿಗೆ ಸೀಮಿತರಿರುತ್ತಾರೆ, ಅವರ ಕ್ಷೇತ್ರಗಳಿಗೆ ಹೋದರೆ ನಮ್ಮ ಜೊತೆಗಿರ್ತಾರೆ ಎಂದುಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಹೇಳಿದರು…

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *