ಬೆಳಗಾವಿ- ಬೆಳಗಾವಿ ಜಿಲ್ಲೆಯ ಸೊಂಕಿತ ಪ್ರದೇಶಗಳನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದ್ದು,ಸರ್ಕಾರ ಆದೇಶಿಸಿದರೆ ಸಂಪೂರ್ಣ ಜಿಲ್ಲೆಯನ್ನು ಸೀಲ್ ಡೌನ್ ಮಾಡಲು ಬೆಳಗಾವಿ ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕುವ ಕೆಲಸ ಭರದಿಂದ ಸಾಗಿದೆ.ಅನವಶ್ಯಕವಾಗಿ ಸುತ್ತಾಡುತ್ತಿರುವವರ ಮೇಲೆ ಪೋಲೀಸರು ಮತ್ತೆ ಲಾಠಿ ಬೀಸಲು ಆರಂಭಿಸಿದ್ದಾರೆ.
ಕೊರೋನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವದರಿಂದ ಬೆಳಗಾವಿ ಜಿಲ್ಲಾಡಳಿ ಸೊಂಕಿತ ಪ್ರದೇಶಗಳಾದ ,ಹಿರೇಬಾಗೇವಾಡಿ,ರಾಯಬಾಗ ಕುಡಚಿ,ಬೆಳಗುಂದಿ ಮತ್ತು ಬೆಳಗಾವಿ ಕ್ಯಾಂಪ್ ಪ್ರದೇಶವನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಿದೆ.
ಇಡೀ ಜಿಲ್ಲೆಯನ್ನು ಸೀಲ್ ಡೌನ್ ಮಾಡಲು ಬೆಳಗಾವಿ ಜಿಲ್ಲಾಡಳಿತ ಸರ್ಕಾರದ ಆದೇಶವನ್ನು ಕಾಯುತ್ತದೆ.ಸರ್ಕಾರ ಜಿಲ್ಲೆಯನ್ನೇ ಸೀಲ್ ಡೌನ್ ಮಾಡಲು ಆದೇಶಿಸಿದರೆ ಅದಕ್ಕೆ ಬೇಕಾಗುವ ಎಲ್ಲ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ.
ಬೆಳಗಾವಿ ಜಿಲ್ಲೆಯಲ್ಲಿ ಲಾಕ್ ಡೌನ್ ಇದ್ದರೂ ಜನ ಬೇಕಾಬಿಟ್ಟಿಯಾಗಿ ಓಡಾಡುವದನ್ನು ನಿಲ್ಲಿಸಲು ಜಿಲ್ಲಾಡಳಿತ ಸೀಲ್ ಡೌನ್ ಮಾಡುವ ತಯಾರಿ ಮಾಡಿಕೊಂಡಿದೆ.ಸರ್ಕಾರ ಯಾವ ಜಿಲ್ಲೆಗಳನ್ನು ಸೀಲ್ ಡೌನ್ ಮಾಡಬೇಕು ಎನ್ನುವದರ ಬಗ್ಗೆ ಚರ್ಚೆ ನಡೆಸಿದ್ದು ,ಮದ್ಯಾಹ್ನದ ಹೊತ್ತಿಗೆ ಈ ಕುರಿತು ಸ್ಪಷ್ಟ ನಿರ್ಧಾರ ಹೊರಬರಲಿದೆ.