ಬೆಳಗಾವಿಯಲ್ಲಿ ಇಂದಿನಿಂದ ಹತ್ತು ದಿನಗಳ ಕಾಲ ರಾಜಧಾನಿಯ ಕಳೆ..!!

ಬೆಳಗಾವಿ-ರಾಜ್ಯದ ಎರಡನೇಯ ರಾಜಧಾನಿ ಆಗಲಿರುವ ಬೆಳಗಾವಿ ಮಹಾನಗರ ಇಂದಿನಿಂದ ಹತ್ತು ದಿನಗಳ ಕಾಲ ರಾಜಧಾನಿಯ ಸ್ವರೂಪ ಪಡೆಯಲಿದೆ.ರಾಜ್ಯಸರ್ಕಾರ ಗಂಟು ಮೂಟೆ ಕಟ್ಟಿಕೊಂಡು ಬೆಳಗಾವಿಗೆ ಶಿಪ್ಟ್ ಆಗಿದೆ.

ಇಂದು ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ಶುರುವಾಗಲಿದೆ.ಅದಕ್ಕಾಗಿ ಅಭೂತಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದ್ದು,ಇಂದಿನಿಂದ ಕಲಾಪಗಳು ಆರಂಭವಾಗಲಿವೆ.

ಇಂದು ಅಧಿವೇಶನದ ಪ್ರಥಮ ದಿನ,ಅಧಿವೇಶನದ ಕಲಾಪಗಳು ಶುರು ಆಗುವ ಮುನ್ನ ವಿಧಾನಸಭೆಯ ಸಭಾಂಗಣದಲ್ಲಿ ಅಳವಡಿಸಿರುವ ಏಳು ಜನ ಮಹಾತ್ಮರ ಭಾವಚಿತ್ರಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಈ ಏಳು ಜನ ಮಹಾತ್ಮರ ಭಾವಚಿತ್ರಗಳಲ್ಲಿ ವೀರ ಸಾವರ್ಕರ್ ಅವರ ಭಾವ ಚಿತ್ರವೂ ಇರೋದ್ರಿಂದ ಕಾಂಗ್ರೆಸ್ ಪಕ್ಷ ಈ ಕಾರ್ಯಕ್ರಮದಿಂದ ದೂರ ಉಳಿಯಲು ನಿರ್ಧರಿಸಿದ್ದು ನೇರವಾಗಿ ಕಲಾಪಗಳಲ್ಲಿ ಭಾಗವಹಿಸಲು ಕಾಂಗ್ರೆಸ್ ನಾಯಕರು, ಭಾನುವಾರ ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಸಂಜೆ ನಡೆದ ಕಾಂಗ್ರೆಸ್ ಚುನಾವಣಾ ಸ್ಕ್ಯಾನೀಂಗ್ ಕಮೀಟಿಯ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದಾರೆ.ಎನ್ನುವ ಮಾಹಿತಿ ಸಿಕ್ಕಿದೆ.

ಇಂದು ಅಧಿವೇಶನದ ಮೊದಲ ಇರುವದರಿಂದ ಆರಂಭದಲ್ಲಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಗುತ್ತದೆ.ಬೆಳಗಾವಿ ಜಿಲ್ಲೆಯ ಹಿರಿಯ ನಾಯಕ, ಉಮೇಶ್ ಕತ್ತಿ,ಹಾಗೂ ಉಒ ಸಭಾಪತಿ ಮಾಮನಿ ಅವರು ಸೇರಿದಂತೆ ಅಗಲಿದ ಎಲ್ಲ ಗಣ್ಯರಿಗೆ ಇಂದು ಸದನದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಗುತ್ತದೆ.

ಬೆಳಗಾವಿಗೆ ಈಗಾಗಲೇ ಸಿದ್ರಾಮಯ್ಯ,ಡಿಕೆ ಶಿವಕುಮಾರ್,ಹೆಚ್ ಕೆ ಪಾಟೀಲ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಬೆಳಗಾವಿಗೆ ಆಗಮಿಸಿದ್ದು ಇಂದು ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಸರ್ಕಾರದ ಮಂತ್ರಿಮಂಡಲವೇ ಬೆಳಗಾವಿಗೆ ಆಗಮಿಸಲಿದೆ.

ಅಧಿವೇಶನದ ಮೊದಲ ದಿನವೇ ಸರ್ಕಾರಕ್ಕೆ ಪ್ರತಿಭಟನೆಗಳ ಬಿಸಿ ತಟ್ಟುವ ಜೊತೆಗೆ ನಾಡದ್ರೋಹಿ ಎಂಇಎಸ್ ಕಿರಿಕ್ ಮಾಡಲಿದೆ.ಅಧಿವೇಶನಕ್ಕೆ ಪ್ರತಿಯಾಗಿ ಎಂಇಎಸ್ ಬೆಳಗಾವಿಯಲ್ಲಿ ಮರಾಠಿ ಮಹಾ ಮೇಳಾವ್ ನಡೆಸಲಿದೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *