ಬೆಳಗಾವಿ- ಬೆಳಗಾವಿಯ ಸುವರ್ಣವಿಧಾನಸೌಧದ ಅಸೆಂಬ್ಲಿ ಸಭಾಂಗಣದಲ್ಲಿ ನಾಳೆ ಏಳು ಜನ ಮಹಾಪುರುಷರ ಭಾವಚಿತ್ರಗಳು ಅನಾವರಣಗೊಳ್ಳಲಿದ್ದು ಈ ಏಳು ಪೋಟೋಗಳನ್ನು ಪರದೆಯಿಂದ ಮುಚ್ಚಲಾಗಿದ್ದು ಏಳು ಜನ ಮಹಾಪುರುಷರು ಯಾರು ? ಎನ್ನುವ ಪ್ರಶ್ನೆ ಈಗ ಎಲ್ಲರನ್ನು ಕಾಡುತ್ತಿದೆ.
ಮಹಾತ್ಮಾ ಗಾಂಧಿ,ವಿಶ್ವರತ್ನ ಬಾಬಾಸಾಹೇಬ್ ಅಂಬೇಡ್ಕರ್,ಜಗಜ್ಯೋತಿ ಬಸವೇಶ್ವರ,ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಗಳು ಇವೆ ಎಂದು ಹೇಳಲಾಗಿದ್ದು ಇವರ ಜೊತೆ ಸಾವರ್ಕರ್ ಪೋಟೋ ಕೂಡಾ ಇದೆ ಎಂದು ದೃಶ್ಯ ಮಾದ್ಯಮಗಳಲ್ಲಿ ಸುದ್ದಿ ಪ್ರಸಾರ ಆಗಿದ್ದು,ನಿಜವಾಗಿಯೂ ಪರದೇ ಕೇ ಪೀಚೇ ಕ್ಯಾ ಹೈ ಎನ್ನುವ ಅನುಮಾನ ಈಗ ಎಲ್ಲರನ್ನು ಕಾಡುತ್ತಿದೆ.
ಸಾವರ್ಕರ್ ಅವರ ಪೋಟೋ ಅನಾವರಣ ಕಾರ್ಯಕ್ರಮಕ್ಕೆ ನೀವು ಹೋಗ್ತೀರಾ ? ಎಂದು ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಮಾದ್ಯಮ ಪ್ರತಿನಿಧಿಗಳು ಪ್ರಶ್ನೆ ಮಾಡಿದಾಗ,ಅದರ ಬಗ್ಗೆ ನಮಗೆ ಗೊತ್ತಿಲ್ಲ,ಗೊತ್ತಿಲ್ಲದ ವಿಷಯದ ಬಗ್ಗೆ ನಾನು ಮಾತಾಡೋದಿಲ್ಲ.ಮಹಾತ್ಮಾ ಗಾಂಧಿ ಮತ್ತು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಹಾಕುವ ಬಗ್ಗೆ ಮಾಹಿತಿ ಇದೆ ಅದನ್ನು ಸ್ವಾಗತ ಮಾಡ್ತೀವಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಾಳೆ ಸೋಮವಾರದಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು ಆರಂಭದಲ್ಲಿ ವಿಧಾನಸಭೆಯ ಸಭಾಂಗಣದಲ್ಲಿ ಹಾಕಲಾಗಿರುವ ಒಟ್ಟು ಏಳು ಜನ ಮಹಾಪುರುಷರ ಪೋಟೋಗಳು ಅನಾವರಣಗೊಳ್ಳಲಿವೆ ಎಂದು ಹೇಳಲಾಗುತ್ತಿದೆ.