ಬೆಳಗಾವಿ- ಸಾವಿರಾರು ಬಡ,ಪ್ರತಿಭಾವಂತ ವಿಧ್ಯಾರ್ಥಿಗಳ ಬಾಳಲ್ಲಿ ಭರವಸೆಯ ಬೆಳಕು ಮೂಡಿಸಿರುವ ಬೀದರ್ ಜಿಲ್ಲೆಯ ಶಾಯೀನ್ ವಿದ್ಯಾ ಸಂಸ್ಥೆ ತನ್ನ ಸೇವೆಯನ್ನು ಬೆಳಗಾವಿ ಜಿಲ್ಲೆಗೂ ವಿಸ್ತರಿಸಿದೆ,ಬೆಳಗಾವಿ ಜಿಲ್ಲೆಯ ವಿಧ್ಯಾರ್ಥಿ ಗಳಿಗೂ ಎಲ್ಲ ರೀತಿಯ ಸಹಾಯ ಸವಲತ್ತುಗಳನ್ನು ನೀಡಲು ಈ ಸಂಸ್ಥೆ ನಿರ್ಧರಿಸಿದ್ದು,ಬೆಳಗಾವಿಯಲ್ಲಿ lkg ಯಿಂದ ಹತ್ತನೇಯ ತರಗತಿಯವರೆಗೆ ಇಂಗ್ಲೀಷ್ ಮಾದ್ಯಮ ಶಾಲೆಯನ್ನು ಆರಂಭಿಸುವ ಚಿಂತನೆ ನಡೆಸಿದೆ.
ಇಂದು ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಾಯೀನ್ ವಿದ್ಯಾ ಸಂಸ್ಥೆಯ ಅದ್ಯಕ್ಷರು ನೀಟ್ ಪರೀಕ್ಷೆ ತೇರ್ಗಗಡೆಯಲ್ಲಿ ಎಡವುತ್ತಿರುವ ವಿದಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೀದರ್ ಜಿಲ್ಲೆಯ ಶಾಹೀನ್ ಗ್ರುಪ್ ಆಫ್ ಇನ್‌ಸ್ಟಿಟ್ಯೂಶನ್ಸ್ ವತಿಯಿಂದ ಉಚಿತ ಶಿಷ್ಯವೇತನ ಯೋಜನೆ ಹಮ್ಮಿಕೊಳ್ಳಲಾಗಿದೆ. ಅಂತಹ ವಿದ್ಯಾರ್ಥಿಗಳಿಗೆ ಒಟ್ಟು 5 ಕೋಟಿ ರೂ. ಶಿಷ್ಯವೇತನ ನೀಡಲು ನಿರ್ಧರಿಸಲಾಗಿದೆ ಎಂದು ಶಾಹೀನ್ ಗ್ರುಪ್ ಆಫ್ ಇನ್‌ಸ್ಟಿಟ್ಯೂಶನ್ಸ್ ಅಧ್ಯಕ್ಷ ಡಾ.ಅಬ್ದುಲ್ ಖಾದೀರ ಹೇಳಿದರು.
ಬೀದರ್‌ನಲ್ಲಿ ಆರಂಭಗೊಂಡಿರುವ ಶಿಕ್ಷಣ ಸಂಸ್ಥೆ ಸದ್ಯ ದೇಶದ 42 ಕಡೆಗಳಲ್ಲಿ ಶಾಖೆಗಳನ್ನು ಹೊಂದಿದೆ. ವಿಶೇಷವಾಗಿ ರ‍್ಯಾಂಕ್ ವಿದ್ಯಾರ್ಥಿಗಳಿಗೆ ನೀಡುವ ಅದ್ಯತೆಯಂತೆ ಕಲಿಕಾಸಕ್ತಿ ಹೊಂದಿದ್ದರೂ ಆರ್ಥಿಕ ಸಮಸ್ಯೆಗಳಿಂದ ಹಿಂದುಳಿಯುತ್ತಿರುವ ಎಲ್ಲ ಧರ್ಮ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆ ಮೊದಲ ಆದ್ಯತೆ ನೀಡುತ್ತ ಬರುತ್ತಿದೆ. ಅದೇ ರೀತಿ ಈಗ ನೀಟ್ ಪರೀಕ್ಷೆ ತೇರ್ಗಡೆ ಪ್ರಯತ್ನ ಮಾಡಿದರೂ ವಿಫಲರಾಗಿರುವ ಪ್ರತಿಭಾವಂತ ರಿಪೀಟರ್ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಶಿಷ್ಯವೇತನದೊಂದಿಗೆ ವಿಶೇಷ ತರಬೇತಿ ನೀಡಿಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಇದಕ್ಕಾಗಿ ಒಟ್ಟು 5 ಕೋಟಿ ರೂ.ಮೀಸಲಿರಿಸಲಾಗಿದ್ದು ದೇಶಾದ್ಯಂತ ಒಟ್ಟು 3000 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅಲ್ಲದೆ, ಕೊರೊನಾ ಕಾರಣದಿಂದ ಪಾಲಕ-ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೂ ಉಚಿತ ನೀಟ್ ಪರೀಕ್ಷೆ ತರಭೇತಿ ನೀಡಲಾಗುವುದು. ಶಿಷ್ಯವೇತನ ಯೋಜನೆಗಾಗಿ ಆಸಕ್ತ ವಿದ್ಯಾರ್ಥಿಗಳು ಸಂಸ್ಥೆ ವೆಬ್‌ಸೈಟ್ ಮೂಲಕ ನ.15ರೊಳಗಗಿ ಹೆಸರು ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಟೋಲ್ ಫ್ರೀ ನಂ.18001216235ಗೆ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಶಾಹೀನ್ ಸಾಧನೆ: ನೀಟ್ ಪರೀಕ್ಷೆ ಮೂಲಕ 2020ರ ಸಾಲಿನ ದೆಹಲಿಯ ಎಎಐಎಂಎಸ್‌ನ ವೈದ್ಯಕೀಯ ಶಿಕ್ಷಣ ತರಬೇತಿಗೆ ಆಯ್ಕೆಗೊಂಡ ರಾಜ್ಯದ ಇಬ್ಬರು ವಿದ್ಯಾರ್ಥಿಗಳು ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ಕಲಿತವರು. ಬೀದರ್‌ನ ಕಾರ್ತಿಕ ರೆಡ್ಡಿ 9ನೇ ರ‍್ಯಾಂಕ್ ಮತ್ತು ಬಸವಕಲ್ಯಾಣದ ಅರ್ಬಾಜ್ ಅಹ್ಬದ್ 85ನೇ ರ‍್ಯಾಂಕ್ ಪಡೆದುಕೊಂಡು ಪ್ರತಿಷ್ಠಿತ ಎಎಐಎಂಎಸ್ ವೈದ್ಯಕೀಯ ಶಿಕ್ಷಣ ತರಬೇತಿಗೆ ಆಯ್ಕೆಗೊಂಡಿದ್ದಾರೆ. ಈ ಸಲದ ನೀಟ್ ಪರೀಕ್ಷೆಯಲ್ಲಿ ಸಂಸ್ಥೆಯಿಂದ ಒಟ್ಟು 1800 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರೆ ಆ ಪೈಕಿ 1600 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 400 ವಿದ್ಯಾರ್ಥಿಗಳು ಉಚಿತ ವೈದ್ಯಕೀಯ ಪ್ರವೇಶ ಪಡೆದಿದ್ದಾರೆ ಎಂದು ಡಾ.ಅಬ್ದುಲ್ ಖಾದೀರ್ ತಿಳಿಸಿದರು.
ಬೆಳಗಾವಿಯಲ್ಲೂ ಎರಡು ವರ್ಷಗಳಿಂದ ಶಾಹೀನ್ ಪದವಿ ಪೂರ್ವ ಕಾಲೇಜು ಆರಂಭಗೊಂಡಿದ್ದು ಕನ್ನಡ ಮಾಧ್ಯಮದ ಬಡ ವಿದ್ಯಾರ್ಥಿಗಳ ಪ್ರವೇಶಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಎಂದು ಹೇಳಿದರು.
ನಿಯಾಜ್ ಸೌದಾಗರ. ಬೆಳಗಾವಿ ಶಾಖೆ ವ್ಯವ್ಯಸ್ಥಾಪಕರು.ಸೇರಿದಂತೆ ಶಾಯೀನ್ ವಿದ್ಯಾ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
—