ಬೆಳಗಾವಿ- ಮರಾಠಾ ಸಮಾಜದ ಮೀಸಲಾತಿಗಾಗಿ ಮರಾಠಾ ಕ್ರಾಂತಿ ಮೋರ್ಚಾ ಆಯೋಜನೆ ಮಾಡುತ್ತೇವೆ ಎಂದು ಪೋಲೀಸರಿಗೆ ಮಾತು ಕೊಟ್ಟಿದ್ದ ನಾಡ ವಿರೋಧಿ ಎಂಈಎಸ್ ತನ್ನ ಹಳೇಯ ಚಾಳಿಯನ್ನು ಬಿಡದೇ ಮೋರ್ಚಾದಲ್ಲಿ ಗಡಿ ಕ್ಯಾತೆಯನ್ನು ತುರುಕುವ ಪುಂಡಾಟಿಕೆ ನಡೆಸಿದೆ
ಐದು ಜನ ಕಾಲೇಜು ವಿಧ್ಯಾರ್ಥಿಗಳು ಭಾಷಣ ಮಾಡಿದರು ಇವರೆಲ್ಲರೂ ಕರ್ನಾಟಕ ಸರ್ಕಾರದ ವಿರುದ್ಧ ಹರಿಹಾಯ್ದು ಬೆಳಗಾವಿ ಮರಾಠಿಗರ ಮೇಲೆ ದಬ್ಬಾಳಿಕೆ ನಡೆಸಿದರೇ ಮೌನ ಮುರಿಯುತ್ತೇವೆ ಎನ್ನುವ ಪುಂಡಾಟಿಕೆಯ ಎಚ್ಚರಿಕೆಯನ್ನು ಎಂಈಎಸ್ ನಾಯಕರು ನೀಡಿ ಕಿತಾಪತಿ ನಡೆಸಿ ಮೋರ್ಚಾದಲ್ಲಿ ಭಾಗವಹಿಸಿದ್ದ ಕೆಲವು ಸಾಮಾನ್ಯ ಮರಾಠಿಗರ ಆಕ್ರೋಶಕ್ಕೆ ಗುರಿಯಾದರು
ಬಾಲಕಿಯೊಬ್ಬಳು ತನ್ನ ಭಾಷಣ ಮುಗಿಸಿದ ಬಳಿಕ ಝಾಲಾಚ್ ಪಾಯಿಜೆ ಎಂದು ಘೋಷಣೆ ಕೂಗಿದಕ್ಕೆ ಅಲ್ಲಿದ್ದ ಕೆಲವು ಹಿರಿಯರು ಬಾಲಕಿಯನ್ನು ತರಾಟೆಗೆ ತೆಗೆದುಕೊಂಡಾಗ ಖಾನಾಪೂರ ಎಂಈಎಸ್ ಶಾಸಕ ಅರವಿಂದ ಪಾಟೀಲ ಬಾಲಕಿಯ ನೆರವಿಗೆ ನಿಂತಾಗ ಶಿವಸೇನೆಯ ಪ್ರಕಾಶ ಶಿರೋಡಕರ ಹಿರಿಯ ವ್ಯೆಕ್ತಿಯ ಪರವಾಗಿ ನಿಂತರು
ಈ ಸಂಧರ್ಭದಲ್ಲಿ ಶಾಸಕ ಅರವಿಂದ ಪಾಟೀಲ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಕಾಶ ಶಿರೋಡ್ಕರ್ ನೀವು ಪ್ರತಿಷ್ಠೆಗಾಗಿ ರಾಜಕಾರಣ ಮಾಡಬೇಡಿ ಇದು ಸಮಾಜದ ಕಾರ್ಯಕ್ರಮ ಇಲ್ಲಿ ನಿಮ್ಮ ನಾಟಕ ನಡೆಯುವದಿಲ್ಲ ಎಂದು ಏಕ ವಚನದಲ್ಲಿ ತರಾಟೆಗೆ ತೆಗೆದುಕೊಂಡರು
ಕೆಲ ಕಾಲ ಇಬ್ಬರ ನಡುವೆ ವಾಗ್ವಾದ ನಡೆಯಿತು ಶಿವಸೇನೆ ಮತ್ತು ಎಂಈಎಸ್ ನಡುವಿಣ ರಾಜಕೀಯ ಕಚ್ಚಾಟ ನೋಡಿದ ಕೆಲವು ಹಿರಿಯರು ಮದ್ಯಪ್ರವೇಶಿಸಿ ಇಬ್ಬರನ್ನು ಸಮಾಧಾನ ಪಡಿಸಿದರು
ಎಂಈಎಸ್ ನಾಯಕರು ಮರಾಠಾ ಸಮಾಜದ ಕ್ರಾಂತಿ ಮೋರ್ಚಾವನ್ನು ಹೈಜೆಕ್ ಮಾಡುವ ಪ್ರಯತ್ನ ಮಾಡಿದರು ಆದರೆ ಇದಕ್ಕೆ ಕೆಲವು ಮರಾಠಾ ಸಮಾಜದ ಮುಖಂಡರು ಅವಕಾಶ ಕೊಡಲಿಲ್ಲಿ ಎಂಈಎಸ್ ಕುತಂತ್ರ ಫಲಿಸಲಿಲ್ಲ