ಬೆಳಗಾವಿ- ಹತ್ತು ಹಲವು ಅವಘಡಗಳನ್ನು ಎದುರಿಸಿ ಎಲ್ಲ ತೊಡಕುಗಳನ್ನ ನಿವಾರಿಸಿ ಸ್ಮಾರ್ಟ್ ಸಿಟಿ ಯೋಜನೆಯನ್ನು ಕೊನೆಗೂ ದಡ ಸೇರಿಸುವಲ್ಲಿ ಪಾಲಿಕೆ ಅಧಿಕಾರಿ ಯೋಜನೆಯ ವಿಶೇಷ ಅಧಿಕಾರಿ ಶಶಿಧರ ಕುರೇರ ಯಶಸ್ಸು ಕಂಡಿದ್ದಾರೆ
ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳನ್ನು ಆರಂಭಿಸಲು ಕೇಂದ್ರ ಸರ್ಕಾರ 200 ಕೋಟಿ ರಾಜ್ಯ ಸರ್ಕಾರ 200 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದು ಈ ಅನುದಾನದಲ್ಲಿ ಮೊದಲ ಕಾಮಗಾರಿಯನ್ನು ಕೈಗೆತ್ತಿಕೊಂಡ
ಮಹಾನಗರ ಪಾಲಿಕೆ ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ,76 ಕೋಟಿ ರೂ ವೆಚ್ವದಲ್ಲಿ ಕಮಾಂಡ್ ಕಂಟ್ರೋಲ್ ಸೆಂಟರ್ ನಿರ್ಮಿಸಲು ಟೆಂಡರ್ ಕರೆಯಲಾಗಿದೆ
ಪಾಲಿಕೆಯ ಎಲ್ಲ ಕಾರ್ಯ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಮತ್ತು ಪಾಲಿಕೆಯ ಎಲ್ಲ ಕಾಮಗಾರಿಗಳ ನಿರ್ವಹಣೆಯ ಮೇಲೆ ನಿಗಾ ವಹಿಸುವ ಈ ಕಮಾಂಡ್ ಕಂಟ್ರೋಲ್ ಸೆಂಟರ್ ನಿರ್ಮಿಸಲು ಹಿಂಡಲಗಾ ಪಂಪ್ ಹೌಸ್ ಬಳಿ ಜಾಗೆಯನ್ನು ಗುರುತಿಸಲಾಗಿದ್ದು ಕಮಾಂಡ್ ಕಂಟ್ರೋಲ್ ರೂಮ್ 76 ಕೋಟಿ ಅನುದಾನದಲ್ಲಿ ನಿರ್ಮಾಣ ಆಗಲಿದೆ
ರಾಜ್ಯದಲ್ಲಿ ಮೊದಲ ಬಾರಿಗೆ ಬೆಳಗಾವಿಯಲ್ಲಿ ನಿರ್ಮಾಣ ಆಗುತ್ತಿರುವ ಕಮಾಂಡ್ ಕಂಟ್ರೋಲ್ ರೂಮ್ ನಗರದ ನೀರು ಸರಬರಾಜು. ವಿದ್ಯುತ್ತ ಪೂರೈಕೆ ಟ್ರಾಫಿಕ್, ಪಾರ್ಕಿಂಗ್ ಸ್ವಚ್ಛತಾ ಕಾಮಗಾರಿಗಳ ನಿರ್ವಹಣೆಯ ಮೇಲೆ ಸ್ಮಾರ್ಟ್ ಕಣ್ಣಿಡಲಿದೆ
ಕಮಾಂಡ್ ಕಂಟ್ರೋಲ್ ಸೆಂಟರ್ ನಿರ್ಮಾಣ ಅದ ಬಳಿಕ ಸ್ಮಾರ್ಟ ವಾಟರ್ ಸಪ್ಲಾಯ್ ಸ್ಮಾರ್ಟ್ ಕ್ಲೀನ್ ಸೇರಿದಂತೆ ಪಾಲಿಕೆಯ ಎಲ್ಲ ನಿರ್ವಹಣೆಗಳು ಸ್ಮಾರ್ಟ್ ಆಗಲಿವೆ
ಸ್ಮಾರ್ಟ್ ಸಿಟಿ ಕೆಲಸ ಆರಂಭ ಆಗೋದು ಯಾವಾಗ ಎಂದು ಕಾಯುತ್ತಿದ್ದ ಬೆಳಗಾವಿ ಜನತೆಗೆ ಶಶಿಧರ ಕುರೇರ ಸಿಹಿ ಸುದ್ಧಿ ನೀಡಿದ್ದಾರೆ