Breaking News

ರಮೇಶ್ ಜಾರಕಿಹೊಳಿಗೆ ಮಂತ್ರಿ ಭಾಗ್ಯ..ಕರದಂಟು ನಗರಕ್ಕೆ ಕಾಂಕ್ರೀಟ್ ಭಾಗ್ಯ…ತಾಲೂಕಿನ ರಸ್ತೆಗಳಿಗೆ..ಸೌಭಾಗ್ಯ..!

 

ಬೆಳಗಾವಿ- ಅಂಕಲಗಿ ರಸ್ತೆಯ ಮೂಲಕ ಗೋಕಾಕಿಗೆ ಹೋಗಬೇಕೆಂದರೆ ಕೈಯಲ್ಲಿ ಜೀವ ಹಿಡಿದುಕೊಂಡು ಹೊಂಡು ತುಂಬಿದ ರಸ್ತೆ ದಾಟುವಾಗ ಎಲ್ಲರೂ ಜಾರಕಿಹೊಳಿ ಕುಟುಂಬದ ಕಡೆ ಬೊಟ್ಟು ಮಾಡಿ ಇವರು ಮಂತ್ರಿ ಆಗುತ್ತಾರೆ ಈ ರಸ್ತೆ ಸುಧಾರಿಸಲು ಇವರಿಗೇನು ಧಾಡಿ ಎಂದು ರಾಗ ತೆಗೆಯುವದು ಸಾಮಾನ್ಯವಾಗಿತ್ತು

ಆದರೆ ರಮೇಶ ಜಾರಕಿಹೊಳಿ ಅವರಿಗೆ ಮಂತ್ರಿ ಪಟ್ಟ ಸಿಗುತ್ತಿದ್ದಂತೆಯೇ ಗೋಕಾಕ ತಾಲೂಕಿನ ರಸ್ತೆಗಳ ಅದೃಷ್ಟ ಖುಲಾಯಿಸಿದೆ ತಾಲೂಕಿನ ಮುಖ್ಯ ರಸ್ತೆಗಳು ಹೊಂಡಗಳಿಂದ ಮುಕ್ತವಾಗಿದ್ದು ಅಂಕಲಗಿ- ಗೋಕಾಕ ರಸ್ತೆಗೆ ಹಲವಾರು ದಶಕಗಳ ಬಳಿಕ ಅಭಿವೃದ್ಧಿಯ ಭಾಗ್ಯ ಒದಗಿ ಬಂದಿದ್ದು ಈ ರಸ್ತೆ ಈಗ ಸಂಪೂರ್ಣವಾಗಿ ಸುಧಾರಣೆ ಆಗಿದೆ
ಅಂಕಲಗಿ- ಪಾಶ್ಚಾಪೂರ ರಸ್ತೆ ,ಮಮದಾಪೂರ- ಗೋಕಾಕ ರಸ್ತೆ ಸೇರಿದಂತೆ ತಾಲೂಕಿನ ಪ್ರಮುಖ ರಸ್ತೆಗಳ ಸುಧಾರಣಾ ಕಾಮಗಾರಿಗಳು ಭರದಿಂದ ಸಾಗಿವೆ

ಹಲವಾರು ದಶಕಗಳ ಬಳಿಕ ಕರದಂಟಿನ ನಾಡು ಜಲಪಾತದ ಬೀಡು ಗೋಕಾಕ ನಗರದ ರಸ್ತೆಗಳು ಅಗಲೀಕರಣಗೊಂಡು ಕಾಂಕ್ರೀಟ್ ರಸ್ತೆಗಳಾಗಿ ಪರಿವರ್ತನೆ ಆಗುತ್ತಿವೆ ಗೋಕಾಕ ನಗರದಲ್ಲಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣದ ಕಾಮಗಾರಿಗಳು ಯುದ್ದೋಪಾದಿಯಲ್ಲಿ ನಡೆದಿವೆ
ರಮೇಶ ಜಾರಕಿಹೊಳಿ ಅವರು ಮಂತ್ರಿಯಾದ ಬಳಿಕ ತಾಲೂಕಿನ ಅಭಿವೃದ್ಧಿಗೆ ಮತ್ತು ಗೋಕಾಕ ನಗರದ ಸುಂದರೀಕರಣಕ್ಕೆ ಚಾಲನೆ ಸಿಕ್ಕಿದ್ದು ರಮೇಶ ಜಾರಕಿಹೊಳಿ ಹೆಚ್ಚು ಮಾತನಾಡದೇ ಪ್ರಚಾರ ಬಯಸದೇ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ವ್ಯೆಕ್ತಿ ಅಂತಾರೆ ಗೋಕಾಕ ತಾಲೂಕಿನ ಜನ

ಹದಗೆಟ್ಟು ಹೋಗಿದ್ದ ಗೋಕಾಕ ತಾಲೂಕಿನ ರಸ್ತೆಗಳನ್ನು ಸುಧಾರಣೆ ಮಾಡಿ ರಮೇಶ ಜಾರಕಿಹೊಳಿ ಅವರು ತಾಲೂಕಿನ ಮಾನ ಕಾಪಾಡಿದ್ದಾರೆ ಅಂಕಲಗಿ ಗ್ರಾಮದಲ್ಲಿ ಬಸ್ ನಿಲ್ಧಾಣದ ಕಾಮಗಾರಿ ತಾಲೂಕಿನ ಪ್ರಮುಖ ಕೆರೆಗಳ ಹೂಳೆತ್ತುವದು ಸೇರಿದಂತೆ ಗೋಕಾಕ ತಾಲೂಕಿನಲ್ಲಿ ಈಗ ಅಭಿವೃದ್ಧಿಯ ಪರ್ವ ಆರಂಭವಾಗಿದೆ

ಗೋಕಾಕ ನಗರ ಬೆಳಗಾವಿ ನಗರದಂತೆ ಅಭಿವೃದ್ಧಿ ಆಗಬೇಕು ಎಂದು ಕನಸು ಕಂಡಿರುವ ಗೋಕಾಕ ಶಾಸಕ ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಅವರು ಗೋಕಾಕ ನಗರ ಸಭೆಯ ಸದಸ್ಯರ ಜೊತೆ ಸಭೆ ನಡೆಸಿ ಗೋಕಾಕ ನಗರದ ಸ್ವಚ್ಛತೆ ಬಗ್ಗೆ ನಿಗಾ ವಹಿಸುವದರ ಜೊತೆಗೆ ಗೋಕಾಕ ನಗರದಲ್ಲಿ ಅತ್ಯಾಧುನಿಕ ಮಾದರಿಯ ಸ್ವಿಮಿಂಗ್ ಫೂಲ್ ನಿರ್ಮಾಣ ಮಾಡಲು ಯೋಜನೆ ರೂಪಿಸುವಂತೆ ಸೂಚಿಸಿದ್ದಾರೆ
ರಮೇಶ ಜಾರಕಿಹೊಳಿ ಅವರಿಗೆ ಮಂತ್ರಿ ಭಾಗ್ಯ.ತಾಲೂಕಿಗೆ ಅಭಿವೃದ್ಧಿಯ ಭಾಗ್ಯ ಇದು ತಾಲೂಕಿನ ಜನರ ಸೌಭಾಗ್ಯ ಅಂತೀದ್ದಾರೆ ಗೋಕಾಕಿನ ಜನ

 

Check Also

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ರಮೇಶ್ ಕತ್ತಿ…

ಬೆಳಗಾವಿ-ಬೆಳಗಾವಿ ಜಿಲ್ಲೆಯ ಪಾಲಿಗೆ ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ.ಬೆಳಗಾವಿ ಡಿಸಿಸಿ ಬ್ಯಾಂಕ್ ನಲ್ಲಿ ನಡೆದ ಮಹತ್ತರ ಬೆಳವಣಿಗೆಯಿಂದಾಗಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.