ಬೆಳಗಾವಿ: ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ
ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸಭೆ ನಡೆಯಿತು ಸಭೆಯಲ್ಲಿ ಸಂಸದ ಸುರೇಶ ಅಂಗಡಿ, ಶಾಸಕರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ ಅಭಯ ಪಾಟೀಲ್, ಅನಿಲ ಬೆನಕೆ, ಮೇಯರ್ ಬಸಪ್ಪ ಚಿಕ್ಕಲದಿನ್ನಿ ಭಾಗವಹಿಸಿದ್ದರು
ಪಾಲಿಕೆ ಆಯುಕ್ತ ಶಶಿಧರ ಕುರೇರ್ ಸಭಗೆ ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದ್ರು
ಸ್ಮಾರ್ಟ್ ಸಿಟಿಗೆ ರಾಜ್ಯ ಕೇಂದ್ರದಿಂದ 396 ಕೋಟಿ ರೂ. ಬಿಡುಗಡೆಯಾಗಿದೆ. ನಾಲ್ಕು ಜನ ಹೆಚ್ಚುವರಿ ಡೈರೆಕ್ಟರ್ ಪಾಲಿಕೆ ಸದಸ್ಯರ ಆಯ್ಕೆ ಮುಂದಿನ ಮೀಟಿಂಗ್ ನಲ್ಲಿ ನಿರ್ಧಾರ.
ಸ್ಮಾರ್ಟ್ ಸಿಟಿ ಕಾರ್ಪೊರೇಶನ್ ಪ್ರೈ.ಲಿ.
30ರ ಪೈಕಿ ಡಿ, ಇತರೆ ಸಿಬ್ಬಂದಿ ಹುದ್ದೆ ಖಾಲಿ ಇದೆ. ಸಹಾಯಕ ಎಂಜಿನಿಯರ್ ಸೇರಿ 2 ಮುಖ್ಯ ಹುದ್ದೆ ಖಾಲಿ.
3871 ಕೋಟಿ ರೂ. ಸ್ಮಾರ್ಟ್ ಸಿಟಿಯ ಒಟ್ಟೂ ಯೋಜನೆ ಮೊತ್ತ. ಎಂದು ಸಭೆಗೆ ತಿಳಿಸಿದರು
ಅಭಯ ಪಾಟೀಲ್ ಮಾತನಾಡಿ
ಎಬಿಡಿ ಏರಿಯಾ ಉತ್ತರದಲ್ಲೇ ಇವೆ. ದಕ್ಷಿಣಕ್ಕೆ ಅನ್ಯಾಯವಾಗಿದೆ ಎಬಿಡಿ ಪ್ರದೇಶ ಬದಲಾಯಿಸಲು ಅವಕಾಶವೇ ಇಲ್ಲ ಎಂದ ಮೇಲೆ ನಾವು ಯಾಕೆ ಬರಬೇಕು. ಈ ರೀತಿ ತಾರತಮ್ಯ ಯಾಕೆ ಮಾಡಬೇಕು ಎಂದು ಪ್ರಶ್ನೆ.
ಶಾಸಕರು ಯಾರಿದ್ದರು ಎನ್ನುವುದು ಮುಖ್ಯವಲ್ಲ. ಶೇ. 80 ಉತ್ತರ. ಶೇ. 20 ದಕ್ಷಿಣಕ್ಕೆ. ಕೆಪಿಟಿಸಿಎಲ್ ರಸ್ತೆ ಸ್ಮಾರ್ಟ್ ಸಿಟಿಯೊಳಗೆ ತಗೊಂಡಿದ್ದು ಎಷ್ಟು ಅವೈಜ್ಞಾನಿಕ.
ಕನ್ಸಲ್ಟನ್ಸಿ ಕಂಪೆನಿಯೇ ಬೋಗಸ್. ಆಗಿದೆ ಎಂದು ಅಭಯ ಪಾಟೀಲ ಅಸಮಾಧಾನ ವ್ಯೆಕ್ತಪಡಿಸಿದರು
ಸ್ಮಾರ್ಟ್ ಸಿಟಿಯಲ್ಲಿ ತೆಗೆದುಕೊಂಡಿರುವ ಯೋಜನೆಗಳು ಅವೈಜ್ಞಾಣಿಕವಾಗಿವೆ ಇನ್ನು ಮುಂದೆ ತೆಗೆದುಕೊಳ್ಳುವ ಯೋಜನೆಗಳು ವೈಜ್ಞಾನಿಕ ವಾಗಿರಬೇಕು ಕ್ರಿಯಾಯೋಜನೆಗಳೇ ಸರಿ ಇಲ್ಲ.ಯೋಜನೆ ರೂಪಿಸುವಾಗ ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು
ಎಂದು ಶಾಸಕ ಅಭಯ ಪಾಟೀಲ ಆಕ್ರೋಶ ವ್ಯೆಕ್ತಪಡಿಸಿದರು
2016 ನಲ್ಲಿ ಕ್ರಿಯಾ ಯೋಜನೆ ಆಗಿದ್ದು. ಸಾಕಷ್ಟು ಜಿಜ್ಞಾಸಲ್ಲೇ ಇಲ್ಲಿವರೆಗೆ ಬಂದಿದೆ. ಮತ್ತೆ ಕ್ರಿಯಾಯೋಜನೆ ಬದಲಾದರೆ ಮತ್ತೆ ಸಮಸ್ಯೆ ಆಗತ್ತೆ. ಎಂದು ಆಯುಕ್ತ ಕುರೇರ ಸ್ಪಷ್ಟನೆ ನೀಡಿದರು
ಸಲಹೆ ಮತ್ತು ಆಕ್ಷೇಪವನ್ನು ಸಭೆ ಠರಾವಿನಲ್ಲಿ ಸೇರಿಸಿ ರಾಜ್ಯ ಸಮಿತಿಗೆ ಪ್ರಸ್ತಾವ ಕಳಿಸಿ. ಎಂದು ಡಿಸಿ ಸೂಚಿಸಿದರು
ಕ್ಯಾಂಪ ಪ್ರದೇಶದ ಜಾಗಕ್ಕಾಗಿ ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಿ. ಅಲ್ಲಿಂದ ಕೇಂದ್ರಕ್ಕೆ ಪ್ರಸ್ತಾವ ಹೋದರೆ ತಕ್ಷಣ ಸಮಸ್ಯೆ ಬಗೆಹರಿಸಬಹುದು. ಎಂದು ಸಂಸದ ಸುರೇಶ ಅಂಗಡಿ ಹೇಳಿದರು
ಮಾಜಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ ಅಧಿಕಾರಿಗಳು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಶಾಸಕರು ಸೂಚಿಸುವ ಕಾಮಗಾರಿಗಳು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸೆಟ್ ಆಗದಿದ್ದರೆ ಅವುಗಳನ್ನು ನೂರು ಕೋಟಿ ರೂ ಅನುದಾನದಲ್ಲಿ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ ಸ್ಮಾರ್ಟ್ ಸಿಟಿಯೋಜನೆಯಲ್ಲಿ ಗ್ರಾಮೀಣ ಕ್ಷೇತ್ರದ ಪಾಲಿಕೆ ವ್ಯಾಪ್ತಿಗೆ ಬರುವ ಪ್ರದೇಶವನ್ನು ಅಭಿವೃದ್ಧಿಪಡಿಸಬೇಕು ಕೇವಲ,ಉತ್ತರ ದಕ್ಷಿಣ ಕ್ಷೇತ್ರವನ್ನು ಪರಿಗಣಿಸಿ ಗ್ರಾಮೀಣ ಕ್ಷೇತ್ರವನ್ನು ಕೆಡೆಗಣಿಸಬೇಡಿ ತಮ್ಮ ಕ್ಷೇತ್ರಕ್ಕೂ ರಸ್ತೆ, ಮನೆ ,ಮತ್ತು ಕುಡಿಯುವ ನೀರಿನ ವ್ಯೆವಸ್ಥೆ ಮಾಡಿಸಿ ಕೊಡಿ ಎಂದು ಹೆಬ್ಬಾಳಕರ ಒತ್ತಾಯಿಸಿದರು