ಬೆಳಗಾವಿ- ಬೆಳಗಾವಿ ಮಹಾನಗರ ಸ್ಮಾರ್ಟಸಿಟಿ ಪಟ್ಟಿಯಲ್ಲಿ ಸೇರಿ ಬರೋಬ್ಬರಿ ವರ್ಷ ಕಳೆದಿದೆ ಈ ಯೋಜನೆಯ 400 ಕೋಟಿ ಅನುದಾನ ಬಿಡುಗಡೆಯಾಗಿ ಅದಕ್ಕೆ 25 ಕೋಟಿ ಬಡ್ಡಿ ಜಮಾ ಆಗಿದೆ ಆದರೆ ಇನ್ನುವರೆಗೆ ಕಾಮಗಾರಿಗಳು ಶುರು ಆಗಿಲ್ಲ
ಗುರುವಾರ ಕಾಡಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಸದ ಸುರೇಶ ಅಂಗಡಿ ಇನ್ನು ಕೇವಲ ಇಪ್ಪತ್ತು ದಿನಗಳಲ್ಲಿ ಸ್ಮಾರ್ಟಸಿಟಿ ಕೆಲಸಗಳು ಶುರು ಆಗ್ತಾವೆ ಅಂತ ಹೇಳಿಕೆ ನೀಡಿ ಹೊಸ ಭರವಸೆ ಮೂಡಿಸಿದ್ದಾರೆ
ರಾಜ್ಯ ಮತ್ತು ಕೇಂದ್ರದ ಅಧಿಕಾರಿಗಳ ಸಮನ್ವಯದ ಕೊರತೆಯಿಂದಾಗಿ ಕಾಮಗಾರಿಗಳಿಗೆ ಚಾಲನೆ ನೀಡಲು ವಿಳಂಬವಾಗಿದೆ ಎಲ್ಲ ಇಲಾಖೆಗಳ ಅಧಿಕಾರಿಗಳು ಕೂಡಿ ಕೆಲಸ ಮಾಡುವಂತೆ ತಾಕೀತು ಮಾಡಿದ್ದೇವೆ ಯೋಜನೆಗೆ ಸಮಂಧಿಸಿದಂತೆ ಎಲ್ಲ DPR ಗಳನ್ನು ಸಿದ್ಧಪಡಿಸುವಂತೆ ಕಟ್ಟಪ್ಪಣೆ ಹೊರಡಿಸಿದ್ದೇವೆ ಎಂದು ಸಂಸದ ಸುರೇಶ ಅಂಗಡಿ ತಿಳಿಸಿದ್ದಾರೆ
ಬುಧವಾರ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಖೇಶ್ ಸಿಂಗ್ ಸಭೆ ನಡೆಸಿ ಬೆಳಗಾವಿಯ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದ್ದು ಶೀಘ್ರದಲ್ಲಿಯೇ ಜಿಲ್ಲಾ ಮಂತ್ರಿಗಳು ಬೆಳಗಾವಿಯಲ್ಲಿ ಸ್ಮಾರ್ಟಸಿಟಿ ಕುರಿತು ಸಭೆ ಮಾಡಲಿದ್ದಾರೆ ಎಂದು ಸಂಸದ ಅಂಗಡಿ ತಿಳಿಸಿದರು