Breaking News
Home / Breaking News / ಸೆಂಟ್ ಜೋಸೆಫ್ ಕನ್ನಡ ಶಾಲೆಯ ಉಳಿವಿಗೆ ಆರು ಲಕ್ಷ ರೂ ದಾನ ಮಾಡಿದ ಶಂಕರ ಮುನವಳ್ಳಿ

ಸೆಂಟ್ ಜೋಸೆಫ್ ಕನ್ನಡ ಶಾಲೆಯ ಉಳಿವಿಗೆ ಆರು ಲಕ್ಷ ರೂ ದಾನ ಮಾಡಿದ ಶಂಕರ ಮುನವಳ್ಳಿ

ಬೆಳಗಾವಿ- ಬೆಳಗಾವಿ ಮಹಾ ನಗರದಲ್ಲಿರುವ ಶತಮಾನ ಕಂಡ ಸೆಂಟ್ ಜೋಸೆಫ್ ಕನ್ನಡ ಮಾದ್ಯಮ ಶಾಲೆ ಮುಚ್ಚಬಾರದು ಶತಮಾನ ಕಂಡ ಕನ್ನಡ ಶಾಲೆ ಉಳಿಯಬೇಕು ಎನ್ನುವ ಸದುದ್ದೇಶದಿಂದ ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಈ ಶಾಲೆಯ ಉಳಿವಿಗಾಗಿ ಆರು ಲಕ್ಷ ರೂ ದಾನ ಮಾಡುವದರ ಮೂಲಕ ತಮ್ಮ ಶಿಕ್ಷಣದ ಬಗೆಗಿನ ಕಾಳಜಿಯನ್ನು ಪ್ರದರ್ಶಿಸಿದ್ದಾರೆ

ಸೇಂಟ್ ಜೋಸೆಫ್ ಕನ್ನಡ ಶಾಲೆಯ ಶಿಕ್ಷಕರಿಗೆ ವೇತನಕೊಡಲು ಹಣವಿಲ್ಲ ಅದಕ್ಕಾಗಿ ಶತಮಾನ ಕಂಡ ಈ ಶಾಲೆಯನ್ನು ಮುಚ್ಚಲಾಗುತ್ತಿದೆ ಎನ್ನುವ ಸುದ್ದಿ ತಿಳಿದು ಅದಕ್ಕೆ ತತಕ್ಷಣ ಸ್ಪಂದಿಸಿರುವ ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಈ ಶಾಲೆಯ ಹಳೆಯ ವಿದ್ಯಾರ್ಥಿಗಳ ಮೂಲಕ ಶಾಲೆಗೆ ಆರು ಲಕ್ಷ ರೂ ದಾನ ಮಾಡಿದ್ದಾರೆ

ಈ ಕುರಿತು ಶಂಕರ ಮುನವಳ್ಳಿ ಅವರನ್ನು ವಿಚಾರಿಸಿದಾಗ ಎರಡು ತಿಂಗಳ ಹಿಂದೆ ಸೇಂಟ್ ಜೋಸೆಫ್ ಶಾಲೆಯ ಹಳೆಯ ವಿದ್ಯಾರ್ಥಿಗಳು ತಮ್ಮನ್ನು ಸಂಪರ್ಕಿಸಿ ಕನ್ನಡ ಶಾಲೆಯ ಪರಿಸ್ಥತಿ ಹೇಳಿಕೊಂಡಾಗ ಸ್ಥಳದಲ್ಲಿಯೇ ಆರು ಲಕ್ಷ ರೂ ಗಳ ಚೆಕ್ ಕೊಟ್ಟಿದ್ದೇನೆ ಹಣ ಕೊಟ್ಟು ಎರಡು ತಿಂಗಳಾಗಿದೆ ಶತಮಾನ ಕಂಡಿರುವ ಹಳೆಯದಾದ ಈ ಶಾಲೆ ಊಳಿಯಬೇಕು ಎನ್ನುವದೇ ನನ್ನ ಉದ್ದೇಶ ಈ ವಿಷಯದಲ್ಲಿ ನನಗೆ ಪ್ರಚಾರ ಬೇಡ ಹಣ ಕೊಟ್ಟು ಎರಡು ತಿಂಗಳಾಗಿದೆ ಈಗೇಕೆ ಆ ಸುದ್ದಿ ಎಂದರು

ಸದ್ದಿಲ್ಲದೆ ಶಂಕರ ಮುನವಳ್ಳಿ ಕನ್ನಡ ಶಾಲೆಯ ಉಳಿವಿಗೆ ಆರು ಲಕ್ಷ ರೂ ದಾನ ಮಾಡಿರುವ ಸಂಗತಿ ಬೆಳಗಾವಿಯ ಕೆಲವು ಕನ್ನಡ ಹೋರಾಟಗಾರರಿಗೆ ಗೊತ್ತಿದೆ ಆದರೆ ಎಲ್ಲಯೂ.ಯಾರೊಬ್ಬರೂ ಶಂಕರ ಮುನವಳ್ಳಿ ಕನ್ನಡ ಶಾಲೆಯ ಉಳಿವಿಗೆ ಆರು ಲಕ್ಷ ರೂ ದಾನ ಮಾಡಿದ್ದಾರೆ ಎಂದು ಹೇಳಿಕೊಂಡಿಲ್ಲ

ಶತಮಾನ ಕಂಡ ಕನ್ನಡ ಶಾಲೆಯ ಉಳಿವಿಗಾಗಿ ಆರು ಲಕ್ಷ ರೂ ದಾನ ಮಾಡುವದರ ಮೂಲಕ ಶಂಕರ ಮುನವಳ್ಳಿ ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ

ಶಂಕರ ಮುನವಳ್ಳಿ ಈ ರೀತಿಯ ಸೇವೆ ಮಾಡುತ್ತಿರುವದು ಹೊಸದೇನಲ್ಲ ಕಳೆದ ಬಾರಿ ಜಿಲ್ಕೆಯಲ್ಲಿ ಭೀಕರ ಬರಗಾಲದ ಪರಿಸ್ಥಿತಿಯಲ್ಲಿ ಹನ್ನೊಂದು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು ಈ ಸಂಧರ್ಭದಲ್ಲಿ ಶಂಕರ ಮುನವಳ್ಳಿ ಆತ್ಮಹತ್ಯೆ ಮಾಡಿಕೊಂಡ ಎಲ್ಲ ರೈತರ ಕುಟುಂಬಳಿಗೆ ತಲಾ ಐವತ್ತು ಸಾವಿರ ರೂ ಧನಸಹಾಯ ಮಾಡಿ ರಾಜ್ಯದ ಗಮನ ಸೆಳೆದಿದ್ದರು ಇವರು

ರೈತರಿಗೆ ಅಂವಿಕಲ ಕ್ರೀಡಾಪಟು ವಿಗೆ ವಿದೇಶಕ್ಕೆ ಹೋಗುವ ಕ್ರಿಡಪಟು ಗಳಿ ಇದೇ ಶಂಕರ ಮುನವಳ್ಳಿ ನಿರಂತರವಾಗಿ ಸಹಾಯ ಮಾಡುತ್ತಿರುವದು ಪ್ರಶಂಸಾರ್ಹ

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *