ಬೆಳಗಾವಿ- ಬೆಳಗಾವಿ ಸ್ಮಾರ್ಟ ಸಿಟಿ ಯೋಜನೆಯ MD ಮುಲ್ಲಾಲಿ ಮೋಹಾಲೀನ್ ಅವರನ್ನು ರಾಜ್ಯ ಸರ್ಕಾರ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರನ್ನಾಗಿ ವರ್ಗಾಯಿಸಿದ್ದು ಬೆಳಗಾವಿ ಸ್ಮಾರ್ಟ ಸಿಟಿ ಯೋಜನೆಗೆ ಮತ್ತೆ ಗ್ರಹಣ ಹಿಡಿದಂತಾಗಿದೆ
ಗುರುವಾರ ರಾಜ್ಯಸರ್ಕಾರ ಎಂಟು ಜನ IAS ಅಧಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು ಮುಲ್ಲಾಲಿ ಮೋಹಾಲೀನ್ ಶಿವಮೊಗ್ಗ ಪಾಲಿಕೆಗೆ ಶಿಪ್ಟ ಆಗಿದ್ದು ಬೆಳಗಾವಿ ಸ್ಮಾರ್ಟ ಸಿಟಿ ಯೋಜನೆಯ MD ಹುದ್ದೆ ಈಗ ಖಾಲಿ ಉಳಿದಂತಾಗಿದೆ
ಗುರುವಾರ ಬೆಳಿಗ್ಗೆ ಸಂಸದ ಸುರೇಶ ಅಂಗಡಿ ಪತ್ರಿಕಾಗೋಷ್ಠಿ ನಡೆಸಿ 20 ದಿನದಲ್ಲಿ ಸ್ಮಾರ್ಟ ಸಿಟಿ ಕೆಲಸ ಶುರು ಆಗುತ್ತೆ ಅಂತ ಘೋಷಿಸಿದ್ದರು ಆದರೆ ಮಧ್ಯಾಹ್ನ ಸರ್ಕಾರ ಸ್ಮಾರ್ಟ ಸಿಟಿ ಅಧಕಾರಿಯನ್ನೇ ಎತ್ತಂಗಡಿ ಮಾಡಿದೆ
ಸ್ಮಾರ್ಟ ಸಿಟಿ ಪಟ್ಟಿಯಲ್ಲಿ ಬೆಳಗಾವಿ ನಗರ ಸೇರಿಕೊಂಡು ವರ್ಷ ಕಳೆದಿದೆ ಅಂದಿನಿಂದ ಒಂದರ ಮೇಲೆ ಇನ್ನೊಂದು ಎನ್ನುವ ರೀತಿಯಲ್ಲಿ ನೂರೆಂಟು ವಿಘ್ನಗಳು ಎದುರಾಗುತ್ತವೆ ಈಗ ಹೊಸ ಅಧಿಕಾರಿ ಬಂದು ಮತ್ತೆ ರಠ ಈಕ ಶುರು ಮಾಡುವಷ್ಟರಲ್ಲಿ ಮತ್ತೆ ಮಳೆಗಾಲ ಶುರು ಆಗಿ ಸ್ಮಾರ್ಟಸಿಟಿ ಕೇವಲ ಕಾಗದದಲ್ಲಿ ಉಳಿಯಬಹುದು ಎನ್ನುವ ಆತಂಕ ಎದುರಾಗಿದೆ