ಬೆಳಗಾವಿ- ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕುಂದಾನಗರಿ ಬೆಳಗಾವಿಯನ್ನು ಇನ್ನಷ್ಟು ಸ್ಮಾರ್ಟ್ ಮಾಡಲು ವಿವಿಧ ಯೋಜನೆಗಳನ್ನು ರೂಪಿಸಲಾಗುತ್ತಿದೆ ಈ ಯೋಜನೆಯಲ್ಲಿ ಎರಡು ಸ್ಮಾರ್ಟ್ ಹೆರಿಗೆ ಆಸ್ಪತ್ರೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ
ಐದು ಕೋಟಿ ಇಪ್ಪತ್ತು ಲಕ್ಷ ರೂ ವೆಚ್ಚದಲ್ಲಿ ಮುತ್ಯಾನಟ್ಟಿ ಮತ್ತು ವಡಗಾಂವ ಪ್ರದೇಶದಲ್ಲಿ ಎರಡು ಸ್ಮಾರ್ಟ್ ಹೆರಿಗೆ ಆಸ್ಪತ್ರೆಗಳು ನಿರ್ಮಾಣ ಮಾಡುವ ಯೋಜನೆ ರೂಪಿಸಿ ನಗರಾಭಿವೃದ್ಧಿ ಇಲಾಖೆಯ ಮಂಜೂರಾತಿಗೆ ಪ್ರಸ್ತಾವಣೆ ಸಲ್ಲಿಸಲಾಗುದ್ದು ಈ ಯೋಜನೆಗೆ ಶೀಘ್ರದಲ್ಲಿಯೇ ಟೆಂಡರ್ ಕರೆಯುವ ದಾಗಿ ಸ್ಮಾರ್ಟ್ ಸಿಟಿ ವಿಶೇಷ ಅಧಿಕಾರಿ ಪಾಲಿಕೆ ಆಯುಕ್ತ ಶಶಿಧರ ಕುರೇರ ತಿಳಿಸಿದ್ದಾರೆ
ಜೊತೆಗೆ ಬೆಳಗಾವಿಯ ವ್ಯಾಕ್ಸೀನ್ ಡಿಪೋದಲ್ಲಿ ಒಂದು ಕೋಟಿ ರೂ ವೆಚ್ಚದಲ್ಲಿ ಸಿಸಿಗಳನ್ನು ನೆಟ್ಟು ಸ್ಮೃತಿ ವನ ವನ್ನು ಇಪ್ಪತ್ತು ಎಕರೆ ಜಾಗದಲ್ಲಿ ನಿರ್ಮಿಸಲು ಯೋಜನೆ ಸಿದ್ಧಗೊಂಡಿದೆ
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಈಗಾಗಲೇ ಮುಂಡೊಳ್ಳಿ ರಸ್ತೆ ಮತ್ತು ಕೆಪಿಟಿಸಿಎಲ್ ರಸ್ತೆಗಳು ಸ್ಮಾರ್ಟ್ ರಸ್ತೆ ಯಾಗಿ ಅಭಿವೃದ್ಧಿ ಯಾಗುತ್ತಿವೆ ವಿಶ್ವೇಶರಯ್ಯ ನಗರದಲ್ಲಿ ಕಮಾಂಡ್ ಸೆಂಟರ್ ನಗರದಲ್ಲಿ ಸ್ಮಾರ್ಟ್ ವಾಟರ್ ಕಿಯೋಸ್ಕ ಅಳವಡಿಸುವ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿವೆ
ಸ್ಮಾರ್ಟ್ ಸಿಟಿ ಯೀಜನೆಯಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾದ ಯೋಜನೆಗಳನ್ನು ರೂಪಿಸುತ್ತಿರುವದು ಸಂತಸದ ಸಂಗತಿಯಾಗಿದೆ