Breaking News

ಸರ್ಕಾರಿ MSIL ಲಿಕ್ಕರ್ ಅಂಗಡಿಗಾಗಿ …ಕಾಗವಾಡದಲ್ಲಿ ಕದನ…!!!!

ಬೆಳಗಾವಿ- ನಮ್ಮೂರಿಗೆ ಸರಾಯಿ ಅಂಗಡಿ ಬೇಡವೇ ಬೇಡ ಎಂದು ಕೆಲವು ಗ್ರಾಮಗಳ ಮಹಿಳೆಯರು ಪ್ರತಿಭಟನೆ ಮಾಡಿದ್ದನ್ನು ನಾವು ಕೇಳಿದ್ದೇವೆ ನೋಡಿದ್ದೇವೆ ಓದಿದ್ದೇವೆ ಆದ್ರೆ ನಮ್ಮೂರಿಗೆ MSIL ಲಿಕ್ಕರ್ ಅಂಗಡಿ ಬೇಕೇ ಬೇಕು ಅಂತ ಕಾಗವಾಡ ನಗರದ ಮಹಿಳೆಯರು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿ ಎಲ್ಲರ ಗಮನ ಸೆಳೆದಿದ್ದಾರೆ

ಕಾಗವಾಡ ನಗರದಲ್ಲಿ ಖಾಸಗಿ ವೈನ್ ಶಾಪ್ ಇದೆ ಅವರೆಲ್ಲರೂ ದುಬಾರಿ ದರದಲ್ಲಿ ಲಿಕ್ಕರ್ ಸೇಲ್ ಮಾಡುವದರಿಂದ ನಮ್ಮ ಗಂಡಂಧೀರುಗಳಿಗೆ ಫುಲ್ ಲಾಸ್ ಆಗುತ್ತಿದೆ ಕಾಗವಾಡ ನಗರದಲ್ಲಿರುವ ಖಾಸಗಿ ವೈನ್ ಶಾಪ್ ನಲ್ಲಿ ಕಲಬೆರಕೆ ಲಿಕ್ಕರ್ ದುಬಾರಿ ಬೆಲೆಗೆ ಮಾರಾಟ ಆಗುತ್ತಿದೆ ಇದಕ್ಕೆ ಲಗಾಮು ಹಾಕಲು ಕಾಗವಾಡ ಗ್ರಾಮದಲ್ಲಿ MRP ದರದಲ್ಲಿ ಲಿಕ್ಕರ್ ಮಾರಾಟ ಮಾಟುವ MSIL ಮಳಿಗೆ ತೆರೆಯಲು ಅನುಮತಿ ಕೊಡಬೇಕು ಅಂತಾ ಕಾಗವಾಡ ನಗರದ ಮಹಿಳೆಯರು ಜಿಲ್ಲಾಧಿಕಾರಿ ಜಿಯಾವುಲ್ಲಾ ಅವರಿಗೆ ಮನವಿ ಅರ್ಪಿಸಿದ್ದಾರೆ

MSIL ಮಳಿಗೆ ತೆರೆಯಲು ಜಿಲ್ಲಾಡಳಿತ ಅನುಮತಿ ಕೊಡದಿದ್ದರೆ ಕಾಗವಾಡ ನಗರದಲ್ಲಿರುವ ವೈನ್ ಶಾಪ್ ಬಾರ್ ಎಲ್ಲವು ಬಂದ್ ಆಗಬೇಕು ಎನ್ನುವದು ಮಹಿಳೆಯರ ವಾದ ಮತ್ತು ಒತ್ತಾಯ

Check Also

ಯು.ಟಿ ಖಾದರ್ ಹೊಸ ಇತಿಹಾದ, ಬೆಳಗಾವಿ ಸುವರ್ಣಸೌಧದೊಳಗೆ “ಅನುಭವ ಮಂಟಪ.

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಸನ್ಮಾನ್ಯ ಶ್ರೀ ಯು. ಟಿ. ಖಾದರ್ ಅವರ ನೇತೃತ್ವದಲ್ಲಿ, ಜನಮಾನಸದಲ್ಲಿ ಸದಾ ಸ್ಮರಣೀಯವಾಗಿ ಉಳಿಯುವ ಮತ್ತೊಂದು …

Leave a Reply

Your email address will not be published. Required fields are marked *