ಬೆಳಗಾವಿ ದಕ್ಷಿಣ ಮತಕ್ಷೇತ್ರದ ಮನೆ.ಮನೆಗೆ ಲಕ್ಷ್ಮೀ ನಾರಾಯಣ
ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರಕ್ಕೆ ವಿಧಾನ ಪರಿಷತ್ತ ಸದಸ್ಯ ಲಕ್ಷ್ಮೀ ನಾರಾಯಣ ಅವರಿಗೆ ಇಂಪೋರ್ಟ್ ಮಾಡುವದು ಬೇಡ ಎಂದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಮಾಡುತ್ತಿರುವ ವಿರೋಧದ ಮಧ್ಯೆಯೂ ಎಂಡಿ ಲಕ್ಷ್ಮೀ ನಾರಾಯಣ ದಕ್ಷಿಣ ಕ್ಷೇತ್ರದನೆ ಮನೆಗೆ ತೆರಳಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಿಗೆ ಸೆಡ್ಡು ಹೊಡೆದಿದ್ದಾರೆ
ಎಂಡಿ ಲಕ್ಷ್ಮೀ ನಾರಾಯಣ ಬೆಳಗಾವಿ ದಕ್ಷಿಣದಿಂದ ಸ್ಪರ್ದೆ ಮಾಡುವದು ಬೇಡ ಎಂದು ಮಾಜಿ ಮಂತ್ರಿ ಸತೀಶ ಜಾರಕಿಹೊಳಿ,ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಸೇರಿದಂತೆ ಹಲವಾರು ಜನ ಕಾಂಗ್ರೆಸ್ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಆದ್ರೆ ಇದಕ್ಕೆ ಡೋಂಟ್ ಕೇರ್ ಎಂದ ಎಂ ಡಿ ಲಕ್ಷ್ಮೀ ನಾರಾಯಣ ದಕ್ಷಿಣ ಕ್ಷೇತ್ರದ ಮನೆ ಮನೆಗೆ ತೆರಳಿ ಪ್ರಚಾರ ಶುರು ಮಾಡಿಕೊಂಡಿದ್ದಾರೆ
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಶಂಕರ ಮುನವಳ್ಳಿ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದಾರೆ ಜೊತೆಗೆ ನೇಕಾರ ಸಮಾಜದ ನಾಯಕ ಹಿರಿಯ ನಗರ ಸೇವಕ ಕನ್ನಡಪರ ಹೋರಾಟಗಾರ ರಮೇಶ ಸೊಂಟಕ್ಕಿ ತಾವೂ ಕೂಡಾ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ
ಆದ್ರೆ ದಕ್ಷಿಣ ಕರ್ನಾಟಕ ಪ್ರದೇಶದ ನೇಕಾರ ಸಮಾಜದ ನಾಯಕ ಲಕ್ಷ್ಮೀ ನಾರಾಯಣ ಉತ್ತರ ಕರ್ನಾಟಕದ ಬೆಳಗಾವಿ ದಕ್ಷಿಣ ಮತಕ್ಷೇತ್ರವನ್ನು ಹೈಜಾಕ್ ಮಾಡಿತ್ತಿರುವ ಕ್ರಮಕ್ಕೆ ಸ್ಥಳೀಯ ನೇಕಾರ ಸಮಾಜದ ಮುಖಂಡರೇ ಅದಕ್ಕೆ ವಿರೋಧ ವ್ಯೆಕ್ತಪಡಿಸಿದ್ದಾರೆ
ಕಾಂಗ್ರೆಸ್ ಸೇವಾ ದಳದ ಮೀನಾಕ್ಷಿ ನೆಲಂಗಳೆ ಸೇರಿದಂತೆ ಹಲವಾರು ಜನ ಸ್ಥಳೀಯ ಕಾಂಗ್ರೆಸ್ ನಾಯಕರು ಲಕ್ಷ್ಮೀ ನಾರಾಯಣ ಅವರಿಗೆ ಸಾಥ್ ನೀಡಿದ್ದು ಬೆಳಗಾವಿ ದಕ್ಷಿಣ ಕ್ಷೇತ್ರದ ಮನೆ ಮನೆಗೆ ತೆರಳಿ ಪ್ರಚಾರ ಶುರು ಮಾಡಿದ ಲಕ್ಷ್ಮೀ ನಾರಾಯಣ ಸ್ಥಳಿಯ ನಾಯಕರಿಗೆ ಮಜುಗರವನ್ನುಂಟು ಮಾಡಿದ್ದಾರೆ
ಚುನಾವಣೆಗೆ ಆರು ತಿಂಗಳು ಬಾಕಿ ಇರುವಾಗಲೇ ಬೆಳಗಾವಿ ದಕ್ಷಿಣದಲ್ಲಿ ಟಿಕೆಟ್ ಪಡೆಯಲು,ಟಿಕೆಟ್ ತಪ್ಪಿಸಲು ವಲಸಿಗರನ್ನು ತಡೆಯಲು ಜಂಗೀ ಕುಸ್ತಿ ಶುರುವಾಗಿದೆ