ಗುಜರಾತ ಹಿಮಾಚಲದಲ್ಲಿ ಮೋದಿ ಮ್ಯಾಜಿಕ್..ಬೆಳಗಾವಿಯಲ್ಲಿ ಬಲ್ಲೇ..ಬಲ್ಲೇ..!!!

ಬೆಳಗಾವಿ -ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಜಬರದಸ್ತ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಕಮಲ ಪಡೆಯಲ್ಲಿ ಸಂಭ್ರಮ ಮನೆ ಮಾಡಿದೆ

ಮಾಜಿ ಶಾಸಕ ಅಭಯ ಪಾಟೀಲ ನೇತ್ರತ್ವದಲ್ಲಿ ಬಣ್ಣದ ಹೊಳಿ ಆಡಿ ಸಂಭ್ರಮ ವ್ಯೆಕ್ತ ಪಡಿಸಿದ ಕಾರ್ಯಕರ್ತರು ಡೋಲು ಭಾರಿಸಿ, ಕುಣಿದು ಘೋಷಣೆ ಕೂಗಿ ಸಂಭ್ರಮ ವ್ಯೆಕ್ತಪಡಿಸಿದರು

ಪರಸ್ಪರ ಕೇಸರಿ ಬಣ್ಣ ಎರೆಚಿ ಸಿಹಿ ಹಂಚಿ ಡೋಲು ಬಾರಿಸಿ ಬಿಜೆಪಿ ಧ್ವಜ ಹಾರಿಸುತ್ತ ಹೆಜ್ಜೆ ಹಾಕಿದ ಬಿಜೆಪಿ ಕಾರ್ಯಕರ್ತರು ಮೋದಿ ಹಾಗು ಅಮೀತ ಷಾ ಅವರಿಗೆ ಜಯಘೋಷದ ಘೋಷಣೆ ಕೂಗುವ ಮೂಲಕ ವಿಜಯೋತ್ಸವ ಆಚರಿಸಿದರು

ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಮಾಜಿ ಶಾಸಕ ಅಭಯ ಪಾಟೀಲ ಗುಜರಾತ ಹಾಗೂ ಹಿಮಾಚಲ ಪ್ರದೇಶದ ಮತದಾರರು ಬಿಜೆಪಿಗೆ ಬೆಂಬಲ ನೀಡುವ ಮೂಲಕ ದೇಶದ ಅಭಿವೃದ್ಧಿಗೆ ಸಾಥ್ ಕೊಟ್ಟಿದ್ದಾರೆ ಪ್ರಧಾನಿ ನರೆಂದ್ರ ಮೋದಿ ಅವರ ಜನಪರ ಯೋಜನೆಗಳು ಮತ್ತು ಮೋದಿ ಅವರ ದೂರದೃಷ್ಠಿಯ ವಿಚಾರಗಳಿಗೆ ಜಯ ಸಿಕ್ಕಿದೆ ಈ ಗೆಲುವಿನಿಂದಾಗಿ ಬಿಜೆಪಿ ಕಾರ್ಯಕರ್ತರಲ್ಲಿ ಮತ್ತಷ್ಟು ಉತ್ಸಾಹ ಬಂದಿದೆ ಎಂದು ಹರ್ಷ ವ್ಯೆಕ್ತ ಪಡಿಸಿದರು

ಕರ್ನಾಟಕದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ಧೂಳಿಪಟವಾಗಲಿದ್ದು ಬಿಜೆಪಿ ಅಧಿಕಾರಕ್ಕೆ ಬರಲಿದೆ ಕಾಂಗ್ರೆಸ್ ಪಕ್ಷದ ಬ್ರಷ್ಟ ಆಡಳಿತದಿಂದ ದೇಶದ ಜನ ಬೇಸತ್ತು ಹೋಗಿದ್ದಾರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮುಕ್ತ ಭಾರತ ಆಗುವದರಲ್ಲಿ ಸಂಧೇಹವೇ ಇಲ್ಲ ಎಂದು ಅಭಯ ಪಾಟೀಲ ಹೇಳಿದರು

Check Also

ಉತ್ತರಾಖಂಡದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಜಸ್ಟ್ ಮಿಸ್….!!!

ಬೆಳಗಾವಿ- ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಪತ್ನಿ ಸಮೇತ ಡೆಹ್ರಾಡೂನ್ ಗೆ ಹೋಗಿದ್ರು, ಅಲ್ಲಿ ಮೀಟೀಂಗ್ ಮುಗಿಸಿ ಒಟ್ಟು ಎಂಟು …

Leave a Reply

Your email address will not be published. Required fields are marked *