ಬೆಳಗಾವಿ- ಬೆಳಗಾವಿ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮಕ್ಕಳ ಅಪಹರಣ ನಡೆಯುತ್ತಿದೆ ಎಂದು ಕೆಲವರು ಸುಳ್ಳು ವದಂತಿಗಳನ್ನು ಹರಡಿಸುತ್ತಿದ್ದು ಬೆಳಗಾವಿ ಜಿಲ್ಲೆಯಲ್ಲಿ ಮಕ್ಕಳನ್ನು ಅಪಹರಿಸುವ ಪ್ರಕರಣಗಳು ನಡೆದಿಲ್ಲ ಎಂದು ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಅವರು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಸಂಕೇಶ್ವರದಲ್ಲಿ ಮಾತ್ರ ಅಪಹರಣದ ಪ್ರಕರಣ ನಡೆದಿತ್ತು ಈ ಪ್ರಕರಣಕ್ಕೆ ಸಮಂಧಿಸಿದಂತೆ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಜಿಲ್ಲೆಯ ಬೇರೆ ಪ್ರದೇಶಗಳಲ್ಲಿ ಮಕ್ಕಳನ್ನು ಅಪಹರಿಸುವ ಪ್ರಕರಣಗಳು ನಡೆದಿಲ್ಲ.ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು,ಮಕ್ಕಳ ಅಪಹರಣದ ಲಕ್ಷಣಗಳು ಕಂಡು ಬಂದಲ್ಲಿ ಸಾರ್ವಜನಿಕರು ತಕ್ಷಣ 112 ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ನೀಡಬೇಕು,ಎಂದು ಬೆಳಗಾವಿ ಎಸ್ ಪಿ ಸಂಜೀವ ಪಾಟೀಲ ಮನವಿ ಮಾಡಿಕೊಂಡಿದ್ದಾರೆ.
ಘಟಪ್ರಭಾ ಪೋಲೀಸ್ ಠಾಣೆ ವ್ಯಾಪ್ತಿಯಲ್ಲೂ ಮಕ್ಕಳ ಅಪಹರಣದ ವದಂತಿ ಹರಡಿತ್ತು,ಘಟಪ್ರಭಾ ಪೋಲೀಸ್ ಠಾಣೆ ಇನಸ್ಪೆಕ್ಟರ್ ಈ ಬಗ್ಗೆ ತನಿಖೆ ಮಾಡಿದ್ದಾರೆ. ನಾಗಾ ಸಾಧುಗಳನ್ನು ವಿಚಾರಣೆ ಮಾಡಿದ್ದಾರೆ.ಪ್ರತಿ ಎರಡು,ಮೂರು ವರ್ಷಕ್ಕೊಮ್ಮೆ ನಾಗಾ ಸಾಧುಗಳು ಈ ಮಾರ್ಗದಲ್ಲಿ ಸಂಚರಿಸುತ್ತಾರೆ,ಅವರು ಉತ್ತರ ಪ್ರದೇಶದ ಅಲಿಘಡ ದವರಾಗಿದ್ದು ಅವರು ಉತ್ತರ ಪ್ರದೇಶಕ್ಕೆ ಮರಳಿದ್ದಾರೆ.ಮಕ್ಕಳ ಅಪಹರಣದ ಬಗ್ಗೆ ಸುಳ್ಳು ವದಂತಿಗಳ ಬಗ್ಗೆ ಕಿವಿಗೊಡಬಾರದು ಎಂದು ಎಸ್ ಪಿ ಸಂಜೀವ ಪಾಟೀಲ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.