ಆತಂಕ ಬೇಡ, ಅದು ವಾತಾವರಣ ಸಂಶೋಧನಾ ಬಲೂನ್: ಎಸ್ಪಿ ಸಂಜೀವ ಪಾಟೀಲ
ಬೆಳಗಾವಿ:ಆತಂಕ & ಹಲವು ಅನುಮಾನಗಳಿಗೆ ಈಡು ಮಾಡಿದ್ದ, ಹೊಲವೊಂದರಲ್ಲಿ ಬಿದ್ದಿದ್ದ ಶುಭ್ರಬಿಳಿ ಬಲೂನ್ ಬಗ್ಗೆ ಎಸ್ಪಿ ಡಾ. ಸಂಜೀವ ಪಾಟೀಲ ಸ್ಪಷ್ಟನೆ ನೀಡಿದ್ದಾರೆ.
ಬೈಲಹೊಂಗಲ ತಾಲೂಕಿನ ಗದ್ದಿಕರವಿನಕೊಪ್ಪ ಗ್ರಾಮದ ಬಳಿಯ ಹೊಲವೊಂದರಲ್ಲಿ ಬಿದ್ದಿದ್ದ ಬಲೂನನ್ಬು ಪೊಲೀಸರು ಪರಿಶೀಲಿಸಿದ್ದು, ಅತಿ ಎತ್ತರದ ಹವಾಮಾನ ಅಧ್ಯಯನಮಾಡುವ ಉಪಕರಣ ಈ ಬಲೂನಿನಲ್ಲಿ ಅಳವಡಿಸಲಾಗಿತ್ತು ಎಂದು ಎಸ್ಪಿ ತಿಳಿಸಿದ್ದಾರೆ.
ಯಾವುದೇ ಆತಂಕ ಇಲ್ಲವೇ ಅನ್ಯ ವಿಚಾರ ಮಾಡುವ ಅವಶ್ಯಕತೆಯಿಲ್ಲ ಎಂದುಪೊಲೀಸರು ತಿಳಿಸಿದ್ದು, ಬಲೂನ್ ಹಾರಿಬಿಟ್ಟವರ ಮೂಲದ ಬಗ್ಗೆ ಕಂಡುಕೊಳ್ಳಲಾಗಿದ್ದು, ಬಲೂನ್ ಹಾರಿಬಿಟ್ಟವರ ಬಗ್ಗೆ ಸಂಪರ್ಕ ಸದ್ಯದಲ್ಲೇ ಮಾಡಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.
ಅತಿ ಎತ್ತರದ ವಾಯು ಪ್ರದೇಶದಲ್ಲಿ ವಾತಾವರಣ, ಆರ್ದ್ರತೆ, ಗಾಳಿಯ ವೇಗ ಹಾಗೂ ಒತ್ತಡ ಅರಿಯುವ ವೈಜ್ಞಾನಿಕವಾಗಿ ವಾಯು ಸಂಶೋಧನಾ ಬಲೂನ್ ಆಗಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					