Breaking News

ಗೋವಾ ಸರ್ಕಾರದಿಂದ ಪರಿಷ್ಕೃತ ಆದೇಶ,ರಾತ್ರಿ ಹೊತ್ತು ಭಾರಿ ವಾಹನಗಳ ಪ್ರವೇಶಕ್ಕೆ ಅನುಮತಿ…!!

ಬೆಳಗಾವಿ- ಕಮರ್ಷಿಯಲ್ ವಾಹನಗಳಿಗೆ ಪ್ರವೇಶ ನಿರ್ಭಂಧಿಸಿ,ಟೀಕೆಗೆ ಗುರಿಯಾಗಿದ್ದ ಗೋವಾ ಸರ್ಕಾರ ಕೊನೆಗೂ ಬೆಳಗಾವಿ ಲಾರಿ ಮಾಲೀಕರ ಸಂಘದ ಮನವಿಗೆ ಸ್ಪಂದಿಸಿ ವಾಹನಗಳ ಪ್ರವೇಶ ನಿರ್ಭಂಧದ ಕುರಿತು ಪರಿಷ್ಕೃತ ಆದೇಶ ಹೊರಡಿಸಿದೆ.

ಬೆಳಗಾವಿಯಿಂದ ಚೋರ್ಲಾ ಮಾರ್ಗವಾಗಿ ದಿನನಿತ್ಯ ನೂರಾರು ವಾಹನಗಳು ಗೋವಾ ಪ್ರವೇಶ ಮಾಡುತ್ತಿದ್ದವು ಆದ್ರೆ ಗೋವಾ ಉತ್ತರ ವಿಭಾಗದ ಜಿಲ್ಲಾಧಿಕಾರಿಗಳು ಭಾರಿ ವಾಹನಗಳ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದ್ದರು.ಹೀಗಾಗಿ ದಿನನಿತ್ಯ ನೂರಾರು ಲಾರಿಗಳನ್ನು ಗೋವಾದ ಕೇರಿ ಚೆಕ್ ಫೋಸ್ಟ್ ಬಳಿಯೇ ತಡೆಯಲಾಗುತ್ತಿತ್ತು.ಗೋವಾ ಸರ್ಕಾರದ ನಿರ್ಧಾರವನ್ನು ಖಂಡಿಸಿ ಬೆಳಗಾವಿ ಲಾರಿ ಮಾಲೀಕರ ಸಂಘ ಪ್ರತಿಭಟಿಸಿ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಅರ್ಪಿಸಿತ್ತು.

ಬೆಳಗಾವಿ ಎಸ್ಪಿ,ಹಾಗೂ ಡಿಸಿ ಅವರ ವಿಶೇಷ ಪ್ರಯತ್ನ ಮತ್ತು ಕಾಳಜಿಯಿಂದಾಗಿ ಗೋವಾ ಸರ್ಕಾರ ವಾಹನಗಳ ಪ್ರವೇಶ ನಿರ್ಬಂಧದ ಕುರಿತು ಪರಿಷ್ಕೃತ ಆದೇಶ ಹೊರಡಿದ್ದು,ರಾತ್ರಿ ಹತ್ತು ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಭಾರಿ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಟ್ಟಿದೆ.

Heavy commercial vehicles will be allowed between 10pm to 5am on Chorla Road

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *