Breaking News

ಬೆಳಗಾವಿ ಜಿಲ್ಲೆಯಲ್ಲಿ ಕ್ರಿಟಕಲ್ ಮತ್ತು ನಾನ್ ಕ್ರಿಟಿಕಲ್ ಮತಗಟ್ಟೆಗಳು ಎಷ್ಟು ಗೊತ್ತಾ..?

ಬೆಳಗಾವಿ ಜಿಲ್ಲೆಯಲ್ಲಿ 22.12.2020 ರಂದು ಹಾಗೂ 27.12.2020 ರಂದು ನಡೆಯಲಿರುವ ಪ್ರಥಮ
ಹಾಗೂ ದ್ವೀತಿಯ ಹಂತದ ಗ್ರಾಮ ಪಂಚಾಯತಿ ಚುನಾವಣೆಯ ಮತದಾನ ನಡೆಯಲಿದ್ದು,ಜಿಲ್ಲೆಯಲ್ಲಿ ಬಿಗಿ ಪೋಲೀಸ್ ಬಂದೋಬಸ್ತಿಯನ್ನು ನಿಯೋಜಿಸಲಾಗಿದೆ.

ಪ್ರಥಮ
ಹಂತದಲ್ಲಿ ಖಾನಾಪೂರ, ಹುಕ್ಕೇರಿ, ಬೈಲಹೊಂಗಲ, ಕಿತ್ತೂರ ಗೋಕಾಕ ಹಾಗೂ ಮೂಡಲಗಿ ತಾಲೂಕಾ
ವ್ಯಾಪ್ತಿಗಳಲ್ಲಿ, ಅದೇ ರೀತಿಯಾಗಿ ದ್ವಿತೀಯ ಹಂತದಲ್ಲಿ ಸವದತ್ತಿ, ರಾಮದುರ್ಗ, ಚಿಕ್ಕೋಡಿ, ನಿಪ್ಪಾಣಿ,
ಅಥಣಿ, ಕಾಗವಾಡ ಮತ್ತು ರಾಯಬಾಗ ತಾಲೂಕಾ ವ್ಯಾಪ್ತಿಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ
ನಡೆಯಲಿದ್ದು.ಅದಕ್ಕಾಗಿ ಬೆಳಗಾವಿ ತಾಲೂಕಾ ಹೊರತುಪಡಿಸಿ ಬೆಳಗಾವಿ ಜಿಲ್ಲಾ ಪೊಲೀಸ್
ವ್ಯಾಪ್ತಿಯಲ್ಲಿನ 06 ತಾಲೂಕುಗಳಲ್ಲಿ, ಪ್ರಥಮ ಹಂತದಲ್ಲಿ 1476 ಮತಗಟ್ಟೆಗಳಲ್ಲಿ 264 ಕ್ರಿಟಿಕಲ್ ಹಾಗೂ
1212 ನಾನ್ ಕ್ರಿಟಿಕಲ್ ಮತಗಟ್ಟೆಗಳನ್ನಾಗಿ ವಿಂಗಡಿಸಲಾಗಿದೆ. ಅದರಂತೆ ದ್ವಿತೀಯ ಹಂತದಲ್ಲಿ 07
ತಾಲೂಕುಗಳಲ್ಲಿನ 1789 ಮತಗಟ್ಟೆಗಳಲ್ಲಿ 234 ಕ್ರಿಟಿಕಲ್ ಹಾಗೂ 1554 ನಾನ್ ಕ್ರಿಟಿಕಲ್ ಮತಗಟ್ಟೆಗಳನ್ನಾಗಿ
ವಿಂಗಡಿಸಲಾಗಿರುತ್ತದೆ. ಹೀಗೆ ಒಟ್ಟು 3265 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

ಗ್ರಾಮ ಪಂಚಾಯತಿ ಚುನಾವಣೆ ಹಿನ್ನಲೆಯಲ್ಲಿ ಚುನಾವಣೆ ನೀತಿ ಸಂಹಿತೆಗೆ ಅನುಗುಣವಾಗಿ
ಪ್ರಥಮ ಹಂತದ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ದಿ:20.12.2020 ರ ಸಂಜೆ 5.00 ಗಂಟೆಯಿಂದ
ದಿ:22.12.2020 ರಂದು ಸಂಜೆ 5.00 ಗಂಟೆಯ ವರೆಗೆ ಹಾಗೂ ದ್ವಿತೀಯ ಹಂತದ ಗ್ರಾಮ
ಪಂಚಾಯತಿಗಳ ವ್ಯಾಪ್ತಿಯಲ್ಲಿ ದಿ:25.12.2020 ರ ಸಂಜೆ 5.00 ಗಂಟೆಯಿಂದ ದಿ:27.12.2020 ರಂದು
ಸಂಜೆ 5.00 ಗಂಟೆಯ ವರೆಗೆ ಮದ್ಯ ಮಾರಾಟ ನಿಷೇಧ ಹಾಗೂ ಕಲಂ 144 ಸಿಆರ್‌ಪಿಸಿ
ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಇಲ್ಲಿಯವರೆಗೆ 513 ರೌಡಿ ಜನರ ಮೇಲೆ ಮುಂಜಾಗ್ರತೆ
ಕ್ರಮದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅದರಂತೆ ಚುನಾವಣಾ ಅಕ್ರಮ ತಡೆಯುವ ಉದ್ದೇಶಕ್ಕಾಗಿ 28
ಚೆಕ್ಕಪೋಸ್ಟಗಳನ್ನು ರಚಿಸಲಾಗಿದೆ.ಎಂದು ಎಸ್ ಪಿ ನಿಂಬರಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬೆಳಗಾವಿ ತಾಲೂಕಾ ಹೊರತುಪಡಿಸಿ ಬೆಳಗಾವಿ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಬರುವ 13
ತಾಲೂಕುಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ ಕೈಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಪ್ರಥಮ ಹಾಗೂ ದ್ವಿತೀಯ
ಹಂತದ ಬಂದೋಬಸ್ತ ಕುರಿತು 01-ಎಸ್.ಪಿ, 01-ಹೆಚ್ಚುವರಿ ಎಸ್.ಪಿ, 07-ಡಿಎಸ್ಪಿ, 13-ಸಿಪಿಐ, 64ಪಿಎಸ್‌ಐ, 132-ಎಎಸ್‌ಐ, 2710 – ಹೆಚ್.ಸಿ ಮತ್ತು ಪಿ.ಸಿ, 555 ಹೋಮಗಾರ್ಡ ಸಿಬ್ಬಂದಿಯವರನ್ನು
ಹಾಗೂ 18 ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮತ್ತು 06 ರಾಜ್ಯ ಪೊಲೀಸ್‌ ಮೀಸಲು ಪಡೆಯನ್ನು
ನಿಯೋಜಿಸಲಾಗಿದೆ.
ಜಿಲ್ಲೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಹಂತದ ಚುನಾವಣೆಗೆ ತಲಾ 75 ಸೆಕ್ಟರ್‌ಗಳನ್ನು ಒಟ್ಟು 150
ಸೆಕ್ಟರ್ ಅಧಿಕಾರಿಗಳ ತಂಡವನ್ನು ರಚಿಸಿ ಆಯಾ ತಾಲೂಕುಗಳಲ್ಲಿ ಕರ್ತವ್ಯ ನಿರ್ವಹಿಸಲಿವೆ. ಮತ್ತು
ಪ್ರತಿಯೊಂದು ತಾಲೂಕಾ ಬಂದೋಬಸ್ತ ಉಸ್ತುವಾರಿಯಾಗಿ 07 ಡಿಎಸ್ಪಿ ದರ್ಜೆಯ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ. ಹೀಗೆ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಮತ್ತು
ಸುವ್ಯವಸ್ಥೆಗೆ ಧಕ್ಕೆ ಬರದಂತೆ ಕೈಕೊಳ್ಳಬೇಕಾದ ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *