Breaking News
Home / Breaking News / ಹೊಟ್ಟೆ ಹಸಿದಾಗ ಮಾ..ಮಾ.ನ ಅಂಗಡಿಗೆ ಓಡೋಡಿ ಬರುತ್ತೆ.‌..

ಹೊಟ್ಟೆ ಹಸಿದಾಗ ಮಾ..ಮಾ.ನ ಅಂಗಡಿಗೆ ಓಡೋಡಿ ಬರುತ್ತೆ.‌..

ಬೆಳಗಾವಿ- ಬೆಳಗಾವಿ ಭಡಕಲ್ ಗಲ್ಲಿಯ ವೃತ್ತದಲ್ಲಿರುವ ಪಾನ್ ಅಂಗಡಿಯತ್ತ ತಾವೂ ಯಾವಾಗಾದರು ಹೋದರೆ ಅಲ್ಲೊಂದು ಆಕಳು ನಿಮಗೆ ನೋಡಲು ಸಿಗುತ್ತದೆ. ಈ ಆಕಳು ತನ್ನ ಹೊಟ್ಟೆ ಹಸಿದಾಗ ಓಡೋಡಿ ಬಂದು ಮಾಮಾನ ಪಾನ್ ಅಂಗಡಿಯಲ್ಲಿ ಬಾಯಿ ಹಾಕಿಕೊಂಡು ನಿಂತೇ ಬಿಡುತ್ತದೆ.

ಈ ಆಕಳು ಪಾನ್ ಅಂಗಡಿಯಲ್ಲಿ ಬಾಯಿ ಹಾಕುತ್ತಿದ್ದಂತೆ ಪಾನ್ ಅಂಗಡಿ ಮಾಮಾ ಅದರ ಬಾಯಿಗೆ ಅರ್ಧ ಡಜನ್ ಬಾಳೆ ಹಣ್ಣು ಹಾಕುವುದು ಮಾಮೂಲಿಯಾಗಿಬಿಟ್ಟಿದೆ. ಹೀಗೆ ಒಂದು ದಿನದಲ್ಲಿ ಈ ಆಕಳು ಮಾಮಾನ ಅಂಗಡಿಗೆ ಮೂರ್ನಾಲ್ಕು ಬಾರಿ ಭೇಟಿ ಕೊಡುವುದು ಇದರ ಹ್ಯಾಬಿಟ್ ಆಗಿದೆ.

ಈ ಆಕಳು ದಿನಕ್ಕೆ ಎಷ್ಟೇ ಸಲ ಬಂದರೂ ಬಡಕಲಗಲ್ಲಿಯ ಪಾನ್ ಅಂಗಡಿಯ ಶಟ್ಟಿ ಮಾಮಾ ಹೊಡೆದೋಡಿಸದೇ ಬಂದಾಗ ಅದಕ್ಕೆ ಬಾಳೆ ಹಣ್ಣು ನೀಡುತ್ತಾರೆ.

ಬೆಳಗಾವಿ ನಗರದಲ್ಲಿ ದೇವರ ಹೆಸರಿನಲ್ಲಿ ಬಿಟ್ಟಿರುವ ನೂರಾರು ಬಿಡಾಡಿ ದನಗಳಿವೆ ಆದರೆ ಬಿಡಾಡಿ ದನಗಳು ನಗರದ ಕಾಯಿಪಲ್ಲೆ ತ್ಯಾಜ್ಯವನ್ನು ತಿಂದು ಬದುಕುತ್ತಿವೆ ಇನ್ನು ಕೆಲವು ಬಿಡಾಡಿ ದನಗಳು ಪ್ಲಾಸ್ಟೀಕ್ ಸೇವಿಸಿ ಸಾಯುತ್ತಿವೆ

ಬೆಳಗಾವಿ ಮಹಾನಗರ ಪಾಲಿಕೆ ನಗರದ ಬಿಡಾಡಿ ದನಗಳಿಗಾಗಿ ಕನಬರ್ಗಿ ಬಳಿ ಕ್ಯಾಟಲ್ ಪಾಂಡ್ ನಿರ್ಮಿಸುವ ಯೋಜನೆ ರೂಪಿಸಿ ಈ ಯೋಜನೆಯ ಫೈಲ್ ಟ್ರೇಝರಿಯಲ್ಲಿ ಭದ್ರವಾಗಿಟ್ಟಿದೆ ಹೀಗಾಗಿ ಬೆಳಗಾವಿಯ ಬಿಡಾಡಿ ದನಗಳು ಆಹಾರಕ್ಕಾಗಿ ಪರದಾಡಬೇಕಾಗಿದೆ

ರಾಜ್ಯದ ಎಲ್ಲ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕ್ಯಾಟಲ್ ಪೌಂಡ್ ಗಳಿವೆ ಆದರೆ ಬೆಳಗಾವಿಯ ಬಿಡಾಡಿ ದನಗಳ ಪರವಾಗಿ ಯಾರೊಬ್ಬರೂ ಧ್ವನಿ ಎತ್ತದೇ ಇರುವದರಿಂದ ಬಿಡಾಡಿ ದನಗಳು ಕ್ಯಾಟಲ್ ಪೌಂಡ ಇಲ್ಲದೇ ವೇದನೆ ಅನುಭವಿಸುತ್ತಿವೆ

Check Also

ಲಕ್ಷ್ಮಣ ಸವದಿಗೆ ಮುಖ್ಯಮಂತ್ರಿ ಆಗ್ರಿ ಅಂತಾ ಆಶೀರ್ವಾದ ಮಾಡಿದವರು ಯಾರು ಗೊತ್ತಾ.??

ಬೆಳಗಾವಿ-ಲಕ್ಷ್ಮಣ ಸವದಿಗೆ ಸಿಎಂ ಆಗುವಂತೆ ಜೈನ ಮುನಿಗಳು ಆಶೀರ್ವಾದ ಮಾಡಿದ್ದಾರೆ.ಮಾಜಿ ಡಿಸಿಎಂ‌ ಲಕ್ಷ್ಮಣ ಸವದಿಗೆ ಜೈನ್ ಮುನಿಗಳಿಂದ ಆಶೀರ್ವಾದ ಮಾಡಿರುವ …

Leave a Reply

Your email address will not be published. Required fields are marked *