ಬೆಳಗಾವಿ ಜಿಲ್ಲೆಯ ಕಡಬಿ ಶಿವಾಪೂರ ಬಳಿಯ ನಾಲೆಯಲ್ಲಿ ಕಾರು ಉರುಳಿ ಐವರು ಜನ ಜಲಸಮಾಧಿಯಾದ ಬೆನ್ನಲ್ಲಿಯೇ ಮೊತ್ತೊಂದು ದುರ್ಘಟನೆ ರಾಷ್ಟ್ರೀಯ ಹೆದ್ದಾರಿ 4 ರ ಮೇಲೆ ಸಂಭವಿಸಿದೆ ಬೆಳಗಾವಿ ಜಿಲ್ಲೆಯಲ್ಲಿ ಸಂಕ್ರಮಣದ ಸಂಕಟ ಮುಂದುವರೆದಿದೆ
ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಯಮನಾಪೂರದ ಬಳಿ ಭೀಕರ ಅಪಘಾತ ಸಂಭವಿಸಿದೆ ಹೆದ್ದಾರಿ ಮೇಲಿಂದ ಸರ್ವಿಸ್ ರಸ್ತೆಗೆ ಟ್ರಕ್ ಉರುಳಿ ಬಿದ್ದಿದೆ ಚಾಲಕನ ನಿಯಂತ್ರಣ ತಪ್ಪಿ ಅನಾಹುತ ಸಂಭವಿಸಿದ್ದು ಲಾರಿ ಚಾಲಕ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ ಕ್ಲಿನರ್ ಗಂಭೀರ ಗಾಯಗೊಂಡಿದ್ದಾನೆ
ಬೆಂಗಳೂರು ನಿಂದ ಮುಂಬೈ ಕಡೆ ಹೊರಟ್ಟಿದ್ದ ಲಾರಿ.
ಅದೃಷ್ಟವಶಾತ್ ಸರ್ವೀಸ್ ರಸ್ತೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಪಲ್ಟಿಯಾಗಿದ್ದರಿಂದ ಹೆಚ್ಚಿನ ಅನಾಹುತ ಆಗಿಲ್ಲ ಕಾಕತಿ ಪೋಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					