ಬೆಳಗಾವಿ
ಬೆಳಗಾವಿ ತಾಲೂಕಿನ ಬಿಜಗರ್ಣಿ ಗ್ರಾಮದ ರಿಸನಂ ೨೦೨,೨೦೩,೨೦೧೪,೨೧೦ ರಿಂದ ೨೧೭ರವರೆಗೆ ಒಟ್ಟು ೭೨ ಎಕರೆ ಗೋಮಾಳ ಜಮೀನಿನಲ್ಲಿ ಬಿಜಗರ್ಣಿ ಗ್ರಾಮದ ಜಾನುವಾರುಗಳನ್ನು ಮೇಯಿಸಲು ನ್ಯಾಯಾಲಯದ ಆದೇಶದಂತೆ ಸಂರಕ್ಷಣೆ ನೀಡಬೇಕೆಂದು ಆಗ್ರಹಿಸಿ ಶುಕ್ರವಾರ ಬಿಜಗರ್ಣಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಬೆಳಗಾವಿ ತಾಲೂಕಿನ ಬಿಜಗರ್ಣಿ ಗ್ರಾಮದ ರಿಸನಂ ೨೦೨,೨೦೩,೨೦೧೪,೨೧೦ ರಿಂದ ೨೧೭ರವರೆಗೆ ಒಟ್ಟು ೭೨ ಎಕರೆ ಗೋಮಾಳ ಜಮೀನು ಆಗಿದೆ. ಸರಕಾರ ಕೇವಲ ಈ ಜಮೀನನ್ನು ಗ್ರಾಮದ ಜಾನುವಾರಗಳಿಗೆ ಮಾತ್ರ ಮೀಸಲಿಟ್ಟಿದ್ದಾರೆ, ಸ್ವಾತಂತ್ರö್ಯ ಪೂರ್ವದಿಂದಲೂ ಇಲ್ಲಿ ಜಾನುವಾರುಗಳನ್ನು ಮೇಯಿಸುತ್ತ ಬಂದಿದ್ದಾರೆ. ಆದರೆ ಕೆಲವರ ಕುತಂತ್ರದಿAದ ಇಲ್ಲಿ ಜಾನುವಾರುಗಳನ್ನು ಮೇಯಿಸಲು ತಡೆಯುತ್ತಿದ್ದಾರೆ. ಅಂಥವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ನ್ಯಾಯಾಲಯದಲ್ಲಿ ಸ್ಪಷ್ಟ ಆದೇಶ ಇದ್ದರೂ ಕೆಲವರು ಈ ಜಾಗೆಯನ್ನು ಅತೀಕ್ರಮಣ ಮಾಡಿಕೊಂಡು ಜಾನುವಾರುಗಳ ಮಾಲೀಕರ ಮೇಲೆ ದಬ್ಬಾಳಿಕೆ ಮಾಡಿಕೊಂಡು ಬರುತ್ತಿದ್ದಾರೆ. ಅಂಥವರ ಮೇಲೆ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಬಿಜಗರ್ಣಿ ಗ್ರಾಮಸ್ಥರು ಉಪಸ್ಥಿತರಿದ್ದರು.
—————
ಮೇಲ್ದರ್ಜೆಗೆ ಏರಿದ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಪೌರನೌಕರರೆಂದು ಪರಿಗಣಿಸುವಂತೆ ಆಗ್ರಹ
ಬೆಳಗಾವಿ
ಹೊಸದಾಗಿ ಮೇಲ್ದರ್ಜೆಗೆ ಏರಿಸಲಾಗಿರುವ ಪುರಸಭೆ,ಪಪಂ, ಗ್ರಾಪಂ ವತಿಯಿಂದ ಠರಾವ್ ಮೂಲಕ ನೇಮಕವಾಗಿ ಮುಂದುವರೆದು ಬಂದ ಸಿಬ್ಬಂದಿಗಳನ್ನು ಪೌರಸೇವಾ ನೌಕರರೆಂದು ಪರಿಗಣಿಸಬೇಕೆಂದು ಆಗ್ರಹಿಸಿ ಶುಕ್ರವಾರ ಗ್ರಾಪಂ ಹೊಸದಾಗಿ ಮೇಲ್ದರ್ಜೆಗೆ ಏರಿದ ನಗರ ಸ್ಥಳೀಯ ಸಂಸ್ಥೆಗಳ ರಾಜ್ಯ ನೌಕರರ ಸಂಘ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈಗಾಗಲೇ ಹೊಸದಾಗಿ ಮೇಲ್ದರ್ಜೆಗೆ ಏರಿಸಲಾಗಿರುವ ಪುರಸಭೆ, ಪಪಂ, ಗ್ರಾಪಂನಲ್ಲಿ ಹಳೆಯ ಸಿಬ್ಬಂದಿಗಳನ್ನೆ ಮುಂದುವರೆಸಿಕೊAಡು ಬಂದಿದ್ದಾರೆ. ಇದರಲ್ಲಿ ಕೆಲವರು ಜಿಪಂನಿAದ ಅನುಮೋದನೆಗೊಂಡಿದ್ದಾರೆ. ಕೆಲವರು ಗ್ರಾಪಂ ಠರಾವ್ ಮೂಲಕ ನೇಮಕಗೊಂಡು ಮುಂದುವರೆಸಿಕೊAಡು ಬಂದಿದ್ದಾರೆ. ಆದರೆ ಈಗಾಗಲೇ ಜಿಪಂನಿAದ ಅನುಮೋದನೆಗೊಂಡು ಸಿಬ್ಬಂದಿಗಳನ್ನು ಪೌರಾಡಳಿಯ ನಿರ್ದೇಶನಾಲಯ ಪೌರನೌಕರರು ಎಂದು ಪರಿಗಣಿಸಿದ್ದಾರೆ. ಅದರಂತೆ ಎಲ್ಲ ನೌಕರರನ್ನು ಪೌರನೌಕರರು ಎಂದು ಪರಿಗಣಿಸಬೇಕೆಂದು ಆಗ್ರಹಿಸಿದರು.
Check Also
ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??
ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …