ಬೆಳಗಾವಿ- ಇಂದು ಮಂಗಳವಾರ ಆದ್ರೆ ಇವತ್ತು ಕೊರೋನಾ ವೈರಸ್ ಗಿಂತ ವದಂತಿಗಳೇ ಜೋರಾಗಿ ಹರಡುತ್ತಿವೆ.
ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಚೆಲ್ಲಾಟ ನಡೆಸಿದೆ.ಶಾಸಕ ಅನೀಲ ಬೆನಕೆ ಅವರಿಗೂ ಕೊರೋನಾ ಲಕ್ಷಣಗಳು ಕಂಡು ಬಂದಿವೆ ಅವರನ್ನು ಕ್ವಾರಂಟೈನ್ ಮಾಡಲಾಗಿದೆ ಸುದ್ಧಿ ಹರಡಿದ್ದರೂ ಈ ಕುರಿತು ಅನೀಲ ಬೆನಕೆ ಯಾವುದೇ ರೀತಿಯ ರಿಸ್ಪಾನ್ಸ್ ಕೊಟ್ಟಿಲ್ಲ.
ಬೆಳಗಾವಿ ನಗರದಲ್ಲಿ ಕೆಲವು ಖ್ಯಾತ ವೈದ್ಯರಿಗೂ ಸೊಂಕು ತಗಲಿದೆ ಎನ್ನಲಾಗಿದೆ.ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ ಇಂದು ಮಂಗಳವಾರ 50 ಕ್ಕೂ ಹೆಚ್ವು ಸೊಂಕಿತರು ಪತ್ತೆಯಾಗುವ ಸಾದ್ಯತೆ ಇದೆ ಎಂದು ತಳಿದು ಬಂದಿದೆ.
ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸಕ್ಕೆ ಇಂದು ಮತ್ತೊಂದು ಬಲಿಯಾಗಿದೆ. ಚಿಂಚಲಿ ಪಟ್ಟಣದ 27 ವರ್ಷದ ಯುವಕ ಮಹಾಮಾರಿ ಕೊರೋನಾಗೆ ಬಲಿಯಾಗಿದ್ದಾನೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಯುವಕ ಬಲಿಯಾದ ಹಿನ್ನಲೆಯಲ್ಲಿ ಆತ ವಾಸುತಿದ್ದ ಗಲ್ಲಿ ಸೀಲ್ ಡೌನ್ ಮಾಡಲಾಗಿದೆ. ಚಿಂಚಲಿ ಪಟ್ಟಣವನ್ನು ಒಂದುವಾರ ಲಾಕ್ ಡೌನ್ ಮಾಡಲು ಗ್ರಾಮಸ್ಥರು ಮುಂದಾಗಿದ್ದಾರೆ.ಎಂದು ಚಿಂಚಲಿ ಪ.ಪಂ ಮುಖ್ಯಾಧಿಕಾರಿ ಎಸ್.ಜಿ ಪೂಜಾರಿ ಮಾಹಿತಿ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಮೃತರ 15 ಕ್ಕೆ ಎರಿಕೆ ಆಗಿದೆ.