ವಿಮಾನ ನಿಲ್ಧಾಣಕ್ಕೆ ಚೆನ್ನಮ್ಮ,ಬಸ್ ನಿಲ್ಧಾಣಕ್ಕೆ, ರಾಯಣ್ಣಾ,ರೈಲು ನಿಲ್ಧಾಣಕ್ಕೆ ಮಲ್ಲಮ್ಮನ ಹೆಸರಿಡಲು ಒತ್ತಾಯ….
ಬೆಳಗಾವಿ- ಬೆಳಗಾವಿಯ ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಬಳಿಕ,ಈಗ ಗಡಿನಾಡು ಗುಡಿ ಬೆಳಗಾವಿಯಲ್ಲಿ ನಾಮಕರಣದ ಪರ್ವ ಆರಂಭವಾಗಿದೆ.
ಬೆಳಗಾವಿಯ ವಿವಿಧ ಕನ್ನಡಪರ ಸಂಘಟನೆಗಳು ಒಟ್ಟಾಗಿ ಒಮ್ಮತದ ಬೇಡಿಕೆ ಇಟ್ಟಿದ್ದಾರೆ,ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ,ರಾಣಿ ಚೆನ್ನಮ್ಮ,ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣಕ್ಕೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರು,ಬೆಳಗಾವಿಯ ರೈಲು ನಿಲ್ಧಾಣಕ್ಕೆ,ಬೆಳವಡಿ ಮಲ್ಲಮ್ಮನ ಹೆಸರು ನಾಮಕರಣ ಮಾಡುವಂತೆ ಕನ್ನಡಪರ ಸಂಘಟನೆಗಳು ಆಗ್ರಹಪಡಿಸಿವೆ.
ಬೆಳಗಾವಿಯ ಕನ್ನಡಪರ ಹೋರಾಟಗಾರರು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ,ಮನವಿ ಅರ್ಪಿಸಿದ್ದಾರೆ.
ಕಿತ್ತೂರು ಉತ್ಸವದ ದಿನ ಮೂರು ನಿಲ್ಧಾಣಗಳಿಗೆ,ಮೂವರು ಮಹಾಪುರುಷರ ಹೆಸರುಗಳನ್ನು ನಾಮಕರಣ ಮಾಡುವಂತೆ ಒತ್ತಾಯಿಸಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ