Breaking News
Home / Breaking News / ಹಳ್ಳಿಗಳಲ್ಲಿ ಕುಡುಕರು ಎಸೆದ ಬಾಟಲ್ ಗಳನ್ನು ಸ್ವಚ್ಛ ಮಾಡ್ತಾರಂತೆ

ಹಳ್ಳಿಗಳಲ್ಲಿ ಕುಡುಕರು ಎಸೆದ ಬಾಟಲ್ ಗಳನ್ನು ಸ್ವಚ್ಛ ಮಾಡ್ತಾರಂತೆ

ಬೆಳಗಾವಿ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸೂಚನೆ ಮೇರೆಗೆ ದೇಶದ ಎಲ್ಲ ಕಡೆ ಸೆ.14 ರಿಂದ 20 ರವರೆಗೂ ಸೇವಾ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ವಕ್ತಾರ ಎಂ.ಜಿ.ಜೀರಲಿ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ‌ಮಾತನಾಡಿದರು. ಅಕ್ಟೋಬರ್ ನಲ್ಲಿ ಗಾಂಧಿ ಜಯಂತಿ, ದೇಶ ಕಂಡ ಅಪ್ರತಿಮ ನಾಯಕ ಪ್ರಧಾನಿ ನರೇಂದ್ರ ‌ಮೋದಿ ಅವರ ಜನ್ಮ ದಿನದ ಪ್ರಯುಕ್ತ ಈ ಸಪ್ತಾಹ ಸೇವಾ ಅಭಿಯಾನ ನಡೆಸಲಾಗುತ್ತಿದೆ. ಸೆ.17 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ಸೆ.17 ರಂದು ಸರಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಸ್ವಚ್ಚತಾ ಅಭಿಯಾನ, ವಯೋವೃದ್ದರಿಗೆ ಕನ್ನಡಕ ವಿತರಣೆ, ರಕ್ತಧಾನ ಶಿಬಿರವನ್ನು ಕೋವಿಡ್-19 ಮಾರ್ಗಸೂಚಿಯಂತೆ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಎಲ್ಲ ಬಾರ್ ಬಂದ ಆಗಿರುವುದರಿಂದ ಅಕ್ಕ ಪಕ್ಕದ ಹಳ್ಳಿಗಳಲ್ಲಿ ಕುಡುಕರು ಸರಾಯಿ ಬಾಟಲ್ ಗಳನ್ನು ಎಸೆದು ಬರುತ್ತಿದ್ದಾರೆ. ಅದನ್ನು ಶುಚಿಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಇಂಥ ಘಟನೆ ನಡೆಯದಂತೆ ನೋಡಿಕೊಳ್ಳಬೇಕೆಂದು ಮನವಿ ಸಲ್ಲಿಸಲಿದ್ದೇವೆ ಎಂದು ಹೇಳಿದರು.

ಸೆ.5 ಪಂಡಿತ ದೀನ ದಯಾಳ ಉಪಾಧ್ಯೆ ಅವರ ಜಯಂತಿ ಅಂಗವಾಗಿ ಸಾಕಷ್ಟು ಜನಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 2 ಗಾಂಧಿ ಜಯಂತಿ ಅಂಗವಾಗಿ ಸ್ವಚ್ಚತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ್ ಬೆನಕೆ, ಬಿಜೆಪಿ‌‌ ಮುಖಂಡರಾದ ಉಜ್ಬಲಾ ಬಡವನಾಚೆ, ಶಶಿಕಾಂತ ಪಾಟೀಲ, ದಾದಾಗೌಡಾ ಬಿರಾದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *