ಬೆಳಗಾವಿ- ಅರವಿಂದ ಪಾಟೀಲ್ ರನ್ನು ಶೀಘ್ರದಲ್ಲೇ ಬಿಜೆಪಿ ಕರೆದುಕೊಂಡ ಬರ್ತಿವಿ,ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ರಾಜ್ಯೋತ್ಸವದ ಧ್ವಜಾರೋಹಣದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಮಹಾರಾಷ್ಟ್ರದ ಸಚಿವರು ಕರಾಳ ದಿನಾಚರಣೆ ಆಚರಣೆ ಮಾಡುವ ವಿಚಾರ. ಅವರು ಏನೇ ಕರಾಳ ದಿನಾಚರಣೆ ಆಚರಣೆ ಮಾಡಿದ್ರೆ ತಲೆ ಕೆಡಿಸಿಕೊಳ್ಳಬೇಡಿ, ಅದಕ್ಕೆ ಮಹತ್ವ ಕೊಡಬೇಕಿಲ್ಲ ಅದನ್ನ ದೊಡ್ಡದಾಗಿ ತೋರಿಸುವ ಅವಶಕತೆ ಇಲ್ಲಾ ಅಂದ್ರು ಸಾಹುಕಾರ್ ರಮೇಶ್ ಜಾರಕಿಹೊಳಿ
ಎಂಇಎಸ್ ಮಾಜಿ ಶಾಸಕ ಅರವಿಂದ ಪಾಟೀಲ್ ಗೆ ಬೆಂಬಲ ನೀಡೊ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅರವಿಂದ ಪಾಟೀಲ್ ಒಬ್ಬ ಪಕ್ಷೇತರ ಅಭ್ಯರ್ಥಿ.
ಅವನು ಈಗಾ ಎಂಇಎಸ್ ನಲ್ಲಿ ಇಲ್ಲಾ, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಪಕ್ಷಾತೀತವಾಗಿ ಬೆಂಬಲ ನೀಡಲಾಗುತ್ತೆ, ಎಂಇಎಸ್ ಮಾಜಿ ಶಾಸಕ ಅರವಿಂದ
ಪಾಟೀಲ್ ರನ್ನು ಶೀಘ್ರದಲ್ಲೇ ಬಿಜೆಪಿ ಕರೆದುಕೊಂಡ ಬರ್ತಿವಿ,ಹೀಗಾಗಿ ಅವರಿಗೆ ಬೆಂಬಲ ನೀಡುತ್ತಿದ್ದೇವೆ. ಅರವಿಂದ ಪಾಟೀಲ್ ಬಿಜೆಪಿ ಅಭ್ಯರ್ಥಿ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ರು.
ಡಿಸಿಸಿ ಬ್ಯಾಂಕ್ ನಲ್ಲಿ ಸತೀಶ್ ಜಾರಕಿಹೊಳಿ ಭಾಗಿಯಾಗಿಲ್ಲ ಅವರು ನನ್ನ ಜೊತೆಗೆ ಮಾತನಾಡಿಲ್ಲ, ಶಾಸಕಿ ಅಂಜಲಿ ನಿಂಬಾಳ್ಕರ್ ನನ್ನ ಜೊತೆಗೆ ಮಾತನಾಡಿದ್ದರು ಆದರೆ ಅವರಿಗೆ ಅರವಿಂದಗೆ ಬೆಂಬಲ ನೀಡುವುದಾಗಿ ಹೇಳಿದ್ದೆ ಎಂದರು.