ಬೆಳಗಾವಿ- ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್ ಆರ್ ಪಾಟೀಲ್ ಹಿಂಡಲಗಾ ಜೈಲಿಗೆ ಹೋಗಿ ಮಾಜಿ ಮಂತ್ರಿ ವಿನಯ ಕುಲಕರ್ಣಿ ಅವರನ್ನು ಭೇಟಿಯಾಗುತ್ತೇನೆ ಎಂದು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಪ್ರವಾಹ ಪರಿಹಾರದ ಕುರಿತು ಮಾಹಿತಿ ಪಡೆದುಕೊಂಡ ಬಳಿಕ ಮಾದ್ಯಮ ಗಳ ಜೊತೆ ಮಾತನಾಡಿದ ಅವರು ಕೇಂದ್ರ ಸರ್ಕಾರ ಎಲ್ಲ ಸಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡೆಸಿಕೊಳ್ಳುತ್ತಿದೆ,ಸಿಬಿಐ,ಚುನಾವಣಾ ಆಯೋಗ ಸೇರಿದಂತೆ ಇತರ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ.ವಿನಯ ಕುಲಕರ್ಣಿ ಅವರ ಬಂಧನ ರಾಜಕೀಯ ಪ್ರೇರಿತವಾಗಿದೆ.ಎಂದು ಎಸ್ ಆರ್ ಪಾಟೀಲ ಆರೋಪಿಸಿದರು.
ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ಇದೆ ಎಂಬ ಬಿಜೆಪಿಗರ ಆರೋಪ ವಿಚಾರ,ಬಿಜೆಪಿಯಲ್ಲಿ ಸಿಎಂ ವಿರುದ್ಧ ಅವರ ಪಕ್ಷದ ಶಾಸಕರೇ ಹೇಳಿಕೆ ಕೊಡ್ತಾರೆ.ಒಡೆದ ಮನೆ ಅಂದ್ರೇ ಬಿಜೆಪಿ, ಕಾಂಗ್ರೆಸ್ ನವರು ಎಲ್ಲಾರು ಒಂದಾಗಿದ್ದೇವೆ.ಸಿಎಂ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ಆಗ್ತಾರೆ ಎಂಬ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ ಸಿದ್ದರಾಮಯ್ಯ ಅವರಿಗೆ ಮಾಹಿತಿ ಇರಬೇಕು ಅದಕ್ಕಾಗಿ ಅವರು ಸಿಎಂ ಬದಲಾಗ್ತಾರೆ ಅಂತಾ ಹೇಳಿದ್ದಾರೆ.ಎಂದರು ಎಸ್ ಆರ್ ಪಾಟೀಲ್.
ತೇರದಾಳದಲ್ಲಿ ಶಾಸಕ ಸಿದ್ದು ಸವದಿ ಪುರಸಭೆ ಸದಸ್ಯಯನ್ನ ಎಳೆದಾಡಿದ ವಿಚಾರ ಪ್ರಸ್ತಾಪಿಸಿದ ಅವರು, ಬಿಜೆಪಿಯವರು ಈ ದೇಶದ ಪರಂಪರೆ ಸಂಸ್ಕೃತಿ, ಮಹಿಳೆಯರ ಬಗ್ಗೆ ಮಾತನಾಡುತ್ತಾರೆ, ಆ ಪಕ್ಷದ ಹಿರಿಯ ಶಾಸಕ ಸಿದ್ದು ಸವದಿಯವರು ಮಾಡಿದ್ದು ಪೈಶಾಚಿಕ ಕೃತ್ಯ, ಅದು ಖಂಡನೀಯ ಇದಕ್ಕೆ ಪೊಲೀಸರು ಸಾಥ್ ನೀಡಿದ್ದಾರೆ, ಬಿಜೆಪಿಯ ಸಂಸ್ಕೃತಿ ಇದು ದೇಶದಲ್ಲಿ ಈ ರೀತಿ ಅನೇಕ ಘಟನೆ ಆಗಿವೆ, ಹೆಣ್ಣು ಮಕ್ಕಳಿಗೆ ಬಿಜೆಪಿಗರಿಗೆ ಅಸಡ್ಡೆ ಮನೋಭಾವ,ಇದೆ ಪ್ರಕರಣದ ಕುರಿತು ಈಗಾಗಲೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಹಸಿ ಸುಳ್ಳು ಹೇಳುವುದು ತಾವು ಮಾಡಿದ ತಪ್ಪು ಮತ್ತೊಬ್ಬರ ಮೇಲೆ ಹೊರೆಸುವ ಪ್ರವೃತ್ತಿ ಬಿಜೆಪಿಗರದ್ದು ಎಂದು ಬೆಳಗಾವಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಹೇಳಿದರು.
ರಾಜು ಸೇಠ,ಶ್ಯಾಮ ಘಾಟಗೆ,ವಿನಯ ನಾವಲಗಟ್ಟಿ ಉಪಸ್ಥಿತರಿದ್ದರು.