ಬೆ
ಬೆಳಗಾವಿ- ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಗಣಿಸುವಂತೆ ಆಗ್ರಹಿಸಿ ರಾಜಧಾನಿ ಬೆಂಗಳೂರಿನಲ್ಲಿ ಹೋರಾಟ ನಡೆದಿದ್ದು ಬೆಳಗಾವಿಯ ಸಾರಿಗೆ ನೌಕರರು ಈ ಹೋರಾಟಕ್ಕೆ ಬೆಂಬಲ ವ್ಯೆಕ್ತ ಪಡಿಸಿ ಇಂದು ಬೆಳ್ಳಂ ಬೆಳಗ್ಗೆ ಮುಷ್ಕರ ಆರಂಭಿಸಿದ್ದಾರೆ.
ಇಂದು ಬೆಳಗ್ಗೆ ಬೆಳಗಾವಿಯ ನಗರ ಸಾರಿಗೆ,ಮತ್ತು ಕೇಂದ್ರ ಬಸ್ ನಿಲ್ಧಾಣದಲ್ಲಿ ,ಹಾಗೂ ನಗರದ ಎಲ್ಲ ಡಿಪೋಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರಿಗೆ ನೌಕರರು ಧಿಢೀರ್ ಮುಷ್ಕರ ಆರಂಭಿಸಿದ್ದಾರೆ.
ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣದಲ್ಲಿ ಸಾವಿರಾರು ನೌಕರರು ಸೇರದ್ದು,ಸರ್ಕಾರ ಕೂಡಲೇ ಸಾರಿಗೆ ಇಲಾಖೆಯ ನೌಕರರನ್ನು ಸರ್ಕಾರಿ ಇಲಾಖೆಯ ನೌಕರರೆಂದು ಪರಗಣಿಸಿ ಎಲ್ಲ ಸವಲತ್ತುಗಳನ್ನು ನೀಡುವಂತೆ ಒತ್ತಾಯ ಮಾಡಿದ್ದಾರೆ.
ನೌಕರರ ಮುಷ್ಕರದಿಂದಾಗಿ ಸಿಟಿ ಬಸ್,ಮತ್ತು,ಬೆಳಗಾವಿಯಿಂದ ಹೊರಗಡೆ ಹೋಗುವ ಎಲ್ಲ ಬಸ್ ಸಂಚಾರ ಸ್ಥಗಿತಗೊಂಡಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ