ಬೆಳಗಾವಿ- ಬೆಳಗಾವಿ ಬಸ್ ನಿಲ್ಧಾಣಕ್ಕೆ ಬೆಳ್ಳಂ ಬೆಳಿಗ್ಗೆ, ಜಿಲ್ಲಾಧಿಕಾರಿ ಹಿರೇಮಠ, ನಗರ ಪೊಲೀಸ ಆಯುಕ್ತ ತ್ಯಾಗರಾಜನ್, ಎಸ್ಪಿ ಲಕ್ಷ್ಮಣ ನಿಂಬರಗಿ ಆಗಮಿಸಿದ್ದಾರೆ,ಬಿಗಿ ಪೋಲೀಸ್ ಬಂದೋಬಸ್ತಿಯಲ್ಲಿ ಬಸ್ ಸಂಚಾರ ಆರಂಭವಾಗಿದ್ದು ಪ್ರಯಾಣಿಕರು ನಿಶ್ಚಿಂತವಾಗಿ ಬಸ್ ಹತ್ತಬಹುದು ಯಾಕಂದ್ರೆ,ಪ್ರತಿಯೊಂದು ಬಸ್ ನಲ್ಲೂ ಪೋಲೀಸರು ಇದ್ದಾರೆ
ಬೆಳಗಾವಿಯಲ್ಲಿ ರಾತ್ರೋರಾತ್ರಿ ಪ್ರತಿಭಟನಾಕಾರರನ್ನು ಜಾಗ ಖಾಲಿ ಮಾಡಿಸಿದ ಪೋಲಿಸರು ತಡರಾತ್ರಿಯೇ
ಪ್ರತಿಭಟನಾ ಸ್ಥಳವನ್ನು ಖಾಲಿ ಮಾಡಿಸಿದ್ದರು ಪ್ರತಿಭಟನಾ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಿ ಪ್ರತಿಭಟನಾ ಸ್ಥಳಕ್ಕೆ ಯಾರೂ ಬಾರದಂತೆ ಹೆಚ್ಚಿನ ಭದ್ರತೆ ಮಾಡಿಕೊಂಡ ಬೆಳಗಾವಿ ಜಿಲ್ಲಾಡಳಿತ ಇಂದು ಬೆಳಗಿನ ಜಾವ ಎಲ್ಲ ರೂಟ್ ಗಳಲ್ಲಿ ಬಸ್ ಗಳನ್ನು ಬಿಡುತ್ತಿದೆ.
ಒತ್ತಾಯ ಪೂರ್ವಕವಾಗಿ ಪ್ರತಿಭಟನಾಕಾರರನ್ನು ಹೊರ ಹಾಕಿದ ಪೋಲಿಸರು. ಪೊಲೀಸ್ ಭದ್ರತೆಯಲ್ಲಿ ಬಸ್ ಸಂಚಾರ ಮಾಡಿಸಲು ನಿರ್ಧರಿಸಿ, ಪ್ರಯಾಣಿಕರ ಬಂದ್ರೆ ಪೊಲೀಸ್ ಭದ್ರತೆಯಲ್ಲಿ ಬಸ್ ಕಾರ್ಯಾಚರಣೆ ಮಾಡಲು ನಿರ್ಧರಿಸಿದ್ದು ಬೆಳಗಾವಿ ಜಿಲ್ಲೆಯ ರಾಮದುರ್ಗ ಡಿಪೊ ದಿಂದ ಬಸ್ ಗಳು ಬೆಳಗಾವಿಗೆ ಬಂದಿವೆ.
ಪ್ರತಿಭಟನೆ ಸ್ಥಳದಲ್ಲಿ ಹಾಕಿದ ಪೆಂಡಲ್ ವಶಕ್ಕೆ ಪಡೆದ ಪೊಲೀಸರು. ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಆಗಮಿಸುತ್ತಿದ್ದು ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲು ಸ್ವತಹ ಡಿಸಿ,ಎಸ್ಪಿ,ಮತ್ತು ಪೋಲೀಸ್ ಕಮಿಷನರ್ ಬಸ್ ನಿಲ್ಧಾಣಕ್ಕೆ ದೌಡಾಯಿಸಿದ್ದಾರೆ.
ಬೆಳಗಾವಿಯಿಂದ ವಿವಿಧ ಕಡೆ ಹೋಗಲು ಪ್ರಯಾಣಿಕರ ಆಗಮಿಸಿದ್ದು ಬಸ್ ನಿಲ್ದಾಣದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ ನಿತೋಜಿಸಲಾಗಿದೆ. ವಿವಿಧ ಕಡೆ ತೆರಳು ಆಗಮಿಸುತ್ತಿರೋ ಬಸ್ ಗಳು. ಡಿಪೋ ದಿಂದ ಬಸ್ ನಿಲ್ದಾಣಕ್ಕೆ ಬಸ್ ಗಳ ಓಡಾಟ ಆರಂಭವಾಗಿದೆ.
[