Breaking News

ಸಚಿವನಾಗಿ ಪಂಚಮಸಾಲಿ ಪಾದಯಾತ್ರೆಗೆ ಹೋಗಲಾ…???

ಬೆಳಗಾವಿ-ಶಿವಮೊಗ್ಗ ತಾಲೂಕಿನ ಹುಣಸೋಡಿನಲ್ಲಿ ಸ್ಫೋಟ ಪ್ರಕರಣ,ಲೀಗಲ್, ಇಲ್‌ಲೀಗಲ್ ಅಂತಿಲ್ಲ ಎಲ್ಲಾ ಲೈಸೆನ್ಸ್‌ಗಳು ಲೀಗಲ್ ಇವೆ ಎಂದು ಬೆಳಗಾವಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ

ಬೆಳಗಾವಿಯಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಅವರು, ಡೀಮ್ಡ್ ಎಕ್ಸ್‌ಟೆನ್ಷನ್ ಅಂತಾ ಕೇಂದ್ರ ಸರ್ಕಾರ ಪರ್ಮಿಷನ್ ಕೊಟ್ಟಿದೆ. ಆದರೆ ಇಲ್ಲಿ ಅಕ್ರಮವಾಗಿ ಲಾರಿಗಳಲ್ಲಿ ಸಾಗಾಟವಾಗಿದೆ.ರಾಯಲ್ಟಿ ತುಂಬದೇ ಮಾರಾಟ ಮಾಡಿದ್ದು ಬೆಳಕಿಗೆ ಬಂದಿದೆ. ಸ್ಯಾಟ್‌ಲೈಟ್ ಮೂಲಕ‌ ಗೂಗಲ್ ಸರ್ವೇ ಮಾಡಿ ಪತ್ತೆ ಹಚ್ಚಿ ದಂಡವಿಧಿಸುತ್ತೇವೆ ಎಂದು ಸಚಿವರು ತಿಳಿಸಿದರು.

ಎಲ್ಲಾ ಗಣಿಗಾರಿಕೆಗಳನ್ನು ಸಕ್ರಮ ಮಾಡ್ತಿಲ್ಲ,ಕಾನೂನು ಬದ್ಧವಾಗಿ ಗಣಿಗಾರಿಕೆಗಳನ್ನು ಸಕ್ರಮ ಮಾಡ್ತೀವಿ,ಶಿವಮೊಗ್ಗ ದುರಂತದಲ್ಲಿ ಒಟ್ಟು ಆರು ಜನ ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ಸರ್ಕಾರದಿಂದ ಪರಿಹಾರ ನೀಡಿದ್ದೇವೆ., ಗಣಿಗಾರಿಕೆ ಮಾಲೀಕರಿಂದಲೂ ಪರಿಹಾರ ನೀಡುವಂತೆ ಸೂಚಿಸಿದ್ದೇವೆ. ಸ್ಫೋಟ ಪ್ರೊಡಕ್ಷನ್ ಮಾಡುವರು, ಟ್ರಾನ್ಸ್‌‌ಪೋರ್ಟ್ ಮಾಡುವವರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.ಈ ರೀತಿ ದುರ್ಘಟನೆ ಆಗಬಾರದೆಂಬ ದೃಷ್ಟಿಯಿಂದ ಉನ್ನತ ಮಟ್ಟದ ತನಿಖಾ ತಂಡ ರಚಿಸಿದ್ದೇವೆ.ಈ ಹಿಂದೆ ವವಡ್ಡರ ಸಮಾಜದವರು ಮಾಡ್ತಿದ್ರು, ಇದು ಅನ್‌ಸ್ಕಿಲ್ಡ್ ಸ್ಟ್ರಕ್ಚರ್
ಮೈನಿಂಗ್ ಬಗ್ಗೆ ತಿಳಿವಳಿಕೆ ನೀಡಲು ಮೈನಿಂಗ್ ಯೂನಿವರ್ಸಿಟಿ ಸ್ಥಾಪಿಸಲು‌ ಚಿಂತನೆ ನಡೆದಿದೆ.ಈ ಕುರಿತು ಸಭೆ ಕರೆದು ಅಭಿಪ್ರಾಯಗಳನ್ನು ಸಂಗ್ರಹ ಮಾಡಿ ಯುನಿವರ್ಸಿಟಿ ಸ್ಥಾಪನೆಯ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆಯುತ್ತೇವೆ.ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಪಾದಯಾತ್ರೆ ನಡೆತುತ್ತಿದೆ.ಪ್ರತಿಭಟನೆ ಹಿಂಪಡೆಯುವಂತೆ ನಾನು ಮನವಿ ಮಾಡ್ತೀನಿ, ಪಂಚಮಸಾಲಿ ಸಮಾಜದಲ್ಲಿ ಅತ್ಯಂತ ಕಡು ಬಡವರಿದ್ದಾರೆ.ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಸಿಗುತ್ತಿಲ್ಲ ಎಂದು ಬಹಳ ದಿನಗಳಿಂದ ಬೇಡಿಕೆ ಇದೆ,ಹಿಂದೆ ನಮ್ಮ ಸರ್ಕಾರ ಇದ್ದಾಗ 2ಎ ಮೀಸಲಾತಿ ಸಿಗಬೇಕೆಂದು ಸಬ್ ಕಮಿಟಿ ಮಾಡಿದ್ವಿ,ಆ ಕಮಿಟಿಯಲ್ಲಿ ನಾನು ಉದಾಸಿ, ಬೊಮ್ಮಾಯಿ ಸೇರಿ ಹಲವರಿದ್ದೆವು,ಇಂದು ಪ್ರತಿಭಟನೆ ಮಾಡುತ್ತಿರುವ ನಮ್ಮ ಸಹೋದರರು ತಮ್ಮ ಸರ್ಕಾರ ಅವಧಿಯಲ್ಲಿ ಮಾಡಬಹುದಿತ್ತು. ಪಂಚಮಸಾಲಿ ಸಮುದಾಯಕ್ಕೆ 2ಎ ಸೇರ್ಪಡೆಗೆ 10 ವರ್ಷದ ಹಿಂದೆ ಹೋರಾಟ ಆರಂಭಿಸಿದವನೇ ನಾನು, ಪಂಚಮಸಾಲಿ ಸಮಾಜದ ಶ್ರೀಗಳ ಮಧ್ಯೆ ಶೀತಲ ಸಮರ ಇದೆ ಎಂಬುದಕ್ಕೆ ನಾನು ಉತ್ತರಿಸಲ್ಲ, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಬೇಕು ಎಂದುಹೋರಾಟ ಆರಂಭಿಸಿದ್ದು ನಾನೇ ಎಂದು ಮುರುಗೇಶ ನಿರಾಣಿ ಹೇಳಿದರು.

ಬೇರೆ ಸಮುದಾಯಕ್ಕೆ ತೊಂದರೆಯೂ ಆಗಬಾರದು, ಈ ನಿರ್ಧಾರ ಕೈಗೊಳ್ಳಲು ಸಮಯ ಬೇಕು,ಸಿಎಂ ಗಮನಕ್ಕೂ ತಂದಿದ್ದೇನೆ, ಕೇಂದ್ರದ ಸಚಿವರಿಗೂ ಮನವಿ ಮಾಡಿದ್ದೇನೆ.ಈಗಾಗಲೇ ಸರ್ಕಾರದ ಗಮನಕ್ಕೆ ಬಂದಿದೆ, ಹೀಗಾಗಿ ಪಾದಯಾತ್ರೆ ಕೈ ಬಿಡಲು ಮನವಿ ಮಾಡುತ್ತೇನೆ. ಹೋರಾಟ, ಪಾದಯಾತ್ರೆ ಸ್ಥಗಿತಗೊಳಿಸಿ ಮಾತುಕತೆಗೆ ಬನ್ನಿ ಎಂದು ಸಚಿವರು ಮನವಿ ಮಾಡಿಕೊಂಡರು.

ಬಸನಗೌಡ ಪಾಟೀಲ್ ಯತ್ನಾಳ ನಮ್ಮ ವೈರಿನಾ, ಅವರು ನಮ್ಮ ಸಮಾಜದ ಹಿರಿಯರು,ಶಿವಶಂಕರ್, ಕಾಶಪ್ಪನವರ್, ಯತ್ನಾಳ್ ಎಲ್ಲರೂ ನಮ್ಮ ಸಹೋದರರು, ಬೇರೆ ಬೇರೆ ಪಕ್ಷದಲ್ಲಿರಬಹುದು ಆದ್ರೆ ಎಲ್ಲರೂ ಒಂದೇ ಸಮುದಾಯದವರು.ರಾಜಕೀಯವಾಗಿ ಈ ಹೋರಾಟ ವಿಷಯಾಂತರಆಗಬಾರದು,ದಯವಿಟ್ಟು ಪಾದಯಾತ್ರೆ ಕೈ ಬಿಡಿ ಎಂದು ಮನವಿ ಮಾಡ್ತೇನೆ.ಪಂಚಮಸಾಲಿ ಪೀಠದ ಇಬ್ಬರು ಶ್ರೀಗಳು
ನಮ್ಮ ಸಮುದಾಯದ ಎರಡು ಕಣ್ಣುಗಳು, ಹರಿಹರ ಪೀಠಕ್ಕೆ ಅನುದಾನ ವಿಚಾರ,ಹಿಂದೆ ನಮ್ಮ ಸರ್ಕಾರ ಇದ್ದಾಗ ಹರಿಹರ ಪೀಠಕ್ಕೆ 5 ಕೋಟಿ ನೀಡಿದ್ದೆವು.ಆಗ ಸ್ವಾಮೀಜಿ ನಮ್ಮ ವಂತಿಗೆ ಹಣ ಮೊದಲು ಕೂಡಿಸಿ ಬಳಿಕ‌ ಬೇಡ್ತೀವಿ ಎಂದ್ರು. ಈಗ ಅನುದಾನ ಕೇಳಿದ್ದು 10 ಕೋಟಿ ಅನುದಾನ ಪೈಕಿ ಎರಡು ಕೋಟಿ ರಿಲೀಸ್ ಆಗಿದೆ.ಅದೇ ರೀತಿ ಕೂಡಲಸಂಗಮ ಪೀಠ ನಮಗೆ ಬೇರೆಯದ್ದಲ್ಲ,ಅವರು ಒಂದ ಲೆವಲ್ ತಂದ್ರೆ 10 ಕೋಟಿಗೂ ಹೆಚ್ಚು ಅನುದಾನ ತರುವ ಪ್ರಯತ್ನ ಮಾಡ್ತೇನೆ. ಇದರಲ್ಲಿ ಬೇಧಭಾವ ಅಂತಾ ಏನಿಲ್ಲ. ಯತ್ನಾಳ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ, ಶ್ರೀಮಂತ ಇದ್ದವರು ಕೊಡಬಹುದು. ನಮಗೆ 2ಎ ಮೀಸಲಾತಿ ಸಿಗಬೇಕು ಎಂಬುದಕ್ಕೆ ಬೆಂಬಲ ಇದೆ.

ಸಿಎಂ ಯಡಿಯೂರಪ್ಪರಿಗೆ ವಿಷಯ ಅರ್ಥವಾಗಿದೆ, ಹೋರಾಟ ಕೈಬಿಡಿ,ಗಮನ ಸೆಳೆಯಲು ಪಾದಯಾತ್ರೆ ಮಾಡಿದ್ದು ಸರ್ಕಾರದ ಗಮನಕ್ಕೆ ಬಂದಿದೆ.ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿರುವ ವಿಚಾರ,ನಾವು ಶಾಂತಿಯುತವಾಗಿ ನಮ್ಮ ಬೇಡಿಕೆ ಈಡೇರಿಸಿಕೊಳ್ಳೋಣನಾನು ಅಧಿಕಾರದಲ್ಲಿರೋದ್ರಿಂದ ಯಾರ ಗಮನಕ್ಕೆ ತರಬೇಕೋ ತಂದಿದೀನಿ.ಎರಡು ಪೀಠ ಗಳು ನಮ್ಮ ಕಣ್ಣು ಇದ್ದಂತೆ, ಯಾರೂ ತಪ್ಪಾಗಿ ಅರ್ಥೈಸಿಕೊಳ್ಳಬಾರದು.ಎರಡು ಪೀಠಗಳು ಒಂದಾಗಬೇಕೆಂದು ಹೆಚ್ಚಿನ ಸಮಯ ಕೊಟ್ಟವನು ನಾನು,12 ವರ್ಷ ಸತತವಾಗಿ ಎಲ್ಲೆಲ್ಲಿ ಕರೆದಿದ್ದಾರೆ ಅಲ್ಲೆಲ್ಲಾ ಹೋಗಿದ್ದೇನೆ.ಇಂದು ಸಚಿವನಾಗಿ ನಾನು ಪಾದಯಾತ್ರೆಗೆ ಹೋಗಲಾ ? ಎಂದು ಸಚಿವ ಮುರುಗೇಶ್ ನಿರಾಣಿ ಪ್ರಶ್ನಿಸಿದರು.

ನನ್ನ‌ ವೇದಿಕೆಯಲ್ಲಿ ಇದನ್ನ ಇಂಪ್ಲಿಮೆಂಟ್ ಮಾಡಲು ಯಾರ್ಯಾರ ಮನವೊಲಿಸಬೇಕು ಅದನ್ನ ಮಾಡ್ತೀನಿ,ಯಡಿಯೂರಪ್ಪ, ಕೇಂದ್ರ ಸರ್ಕಾರಕ್ಕೆ ಈ ವಿಷಯ ಅರ್ಥ ಆಗಿದೆ.ದಯವಿಟ್ಟು ಪಾದಯಾತ್ರೆ ಸ್ಥಗಿತಗೊಳಿಸಿ ಮಾತುಕತೆಗೆ ಬನ್ನಿ ಎಂದುಬೆಳಗಾವಿಯಲ್ಲಿ ಸಚಿವ ಮುರುಗೇಶ್ ನಿರಾಣಿ ಮನವಿ ಮಾಡಿಕೊಂಡರು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *