Breaking News

ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಗಮನಕ್ಕೆ……!!!

 

ಬೆಳಗಾವಿ- ಶಿಕ್ಷಣ ಇಲಾಖೆಯ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ಸೋಮವಾರ(ಫೆ.8) ಖಾನಾಪುರದಲ್ಲಿ ಶಾಲೆಗಳಿಗೆ ಭೇಟಿ ನೀಡಿ ಗಡಿಭಾಗದ ಶಾಲೆಗಳ ಪರಿಸ್ಥಿತಿಯನ್ನು ಖುದ್ದಾಗಿ ಅವಲೋಕಿಸಲಿದ್ದಾರೆ.

ಬಳಿಕ 12.30 ಗಂಟೆಗೆ ಬಿಇಓ ಕಚೇರಿಯಲ್ಲಿ ಗಡಿಭಾಗದ ಶಾಲೆಗಳ ಅಭಿವೃದ್ಧಿ ಕುರಿತ ಪ್ರಗತಿ ಪರಿಶೀಲನೆ ನಡೆಸಲಿದ್ದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಗಡಿಭಾಗದ ಶಾಲೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು ಸಂತಸದ ಸಂಗತಿಯಾಗಿದೆ.

ಗಡಿಭಾಗದ ಶಾಲೆಗಳ ಸುಧಾರಣೆ ಆಗಬೇಕು ಈ ಶಾಲೆಗಳಿಗೆ ಆಕರ್ಷಣೆಯ ಹೊಸ ರೂಪ ಕೊಡಬೇಕು,ಎನ್ನುವದು ಗಡಿಭಾಗದ ಕನ್ನಡಿಗರ ಬಹುದಿನಗಳ ಬೇಡಿಕೆಯಾಗಿದೆ.ಶಾಲೆಗಳ ಏಳಿಗೆ ಮತ್ತು ಗುಣಮಟ್ಟದ ಶಿಕ್ಷಣ ಕೊಡಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತುಂಬಾ ಆಸಕ್ತಿಯಿಂದ ಶ್ರಮಿಸುತ್ತಿದ್ದಾರೆ. ಸೋಮವಾರ ಬೆಳಿಗ್ಗೆ ಗಡಿಭಾಗದ ಖಾನಾಪೂರ ಪಟ್ಟಣಕ್ಕೆ ಬಂದು ಗಡಿಭಾಗದ ಶಾಲೆಗಳಿಗೆ ಭೇಟಿ ನೀಡಿ ನಂತರ ಖಾನಾಪೂರದಲ್ಲಿಯೇ ಅಧಿಕಾರಿಗಳ ಸಭೆ ನಡೆಸುತ್ತಿರುವದು ಸ್ವಾಗತಾರ್ಹ ಸಂಗತಿಯಾಗಿದೆ.

ಮೊದಲ ಬಾರಿಗೆ ಗಡಿಭಾಗದ ಶಾಲೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಿರುವ ಶಿಕ್ಷಣ ಸಚಿವರ ಗಮನಕ್ಕೆ ಕೆಲವು ವಿಚಾರಗಳನ್ನು ಅವರ ಗಮನಕ್ಕೆ ತರಲು ಬೆಳಗಾವಿ ಸುದ್ಧಿ ಡಾಟ್ ಕಾಮ್ ಬಯಸುತ್ತದೆ.

ಸನ್ಮಾನ್ಯ ಶಿಕ್ಷಣ ಸಚಿವರೇ ಗಡಿ ಗಟ್ಟಿಯಾಗಬೇಕಾದ್ರೆ ಗಡಿ ಭಾಗದ ಶಾಲೆಗಳು ಗಟ್ಟಿಯಾಗಬೇಕು,ಗಡಿ ಭಾಗದ ಗ್ರಾಮಗಳಲ್ಲಿ ಹಾಜರಾತಿ ಕಡಿಮೆ ಇದೆ ಅಂತಾ ಕನ್ನಡ ಶಾಲೆಗಳನ್ನು ಮುಚ್ವುವದಾಗಲಿ,ಅಥವಾ ಒಂದು ಗ್ರಾಮದ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಅಂತಾ ಇನ್ನೊಂದು ಗ್ರಾಮದ ಶಾಲೆಯಲ್ಲಿ ಮರ್ಜ್ ಮಾಡುವ ಪ್ರಕ್ರಿಯೆಗೆ ಶಾಸ್ವತವಾಗಿ ಬ್ರೇಕ್ ಹಾಕಬೇಕು.

ಗಡಿಭಾಗದ ಪ್ರತಿಯೊಂದು ಗ್ರಾಮದಲ್ಲಿಯೂ ಕನ್ನಡ ಶಾಲೆ ಇರಲೇಬೇಕು, ಜೊತೆಗೆ ಗಡಿ ಭಾಗದ ಮರಾಠಿ ಮತ್ತು ಉರ್ದು ಶಾಲೆಗಳಲ್ಲಿ ಕನ್ನಡ ಕಲಿಸುವ ಶಿಕ್ಷಕರ ಕೊರತೆ ಇದೆ ,ಬಹುತೇಕ ಶಾಲೆಗಳಲ್ಲಿ ಕನ್ನಡ ಬೋಧಿಸು ಶಿಕ್ಷಕರೇ ಇಲ್ಲ,ಯಾವ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ಕೊರತೆ ಇದೆಯೋ ಆ ಶಾಲೆಗಳಿಗೆ ತಕ್ಷಣ ಕನ್ನಡ ಶಿಕ್ಷಕರನ್ನು ನೇಮಿಸಲು ತುರ್ತು ಕ್ರಮ ಕೈಗೊಳ್ಳಬೇಕು .

ಜೊತೆಗೆ ಕರ್ನಾಟಕದಲ್ಲಿ ಎಲ್ಲ ಆಂಗ್ಲ ಮಾದ್ಯಮದ ಶಾಲೆಗಳಲ್ಲಿ ಕನ್ನಡವನ್ನು ಒಂದು ವಿಷಯವನ್ನಾಗಿ ಬೋಧಿಸುತ್ತಿದ್ದು,ಆದ್ರೆ ಕೇಂದ್ರೀಯ ವಿದ್ಯಾಲಯಗಳಲ್ಲಿ ಕನ್ನಡವನ್ನು ಕಲಿಸುತ್ತಿಲ್ಲ,ಈ ಕುರಿತು ಕೂಡಲೇ ಕೇಂದ್ರ ಸರ್ಕಾರದ ಗಮನ ಸೆಳೆದು ಕರ್ನಾಟಕದ ಎಲ್ಲ ಕೇಂದ್ರೀಯ ವಿದ್ಯಾಲಯಗಳಲ್ಲಿ ಕನ್ನಡ ಬೋಧಿಸಲು,ಕನ್ನಡ ಕಲಿಸಲು ಕ್ರಮ ಕೈಗೊಳ್ಳಬೇಕು.

ಗಡಿಭಾಗದ ಬಹುತೇಕ ಮರಾಠಿ, ಉರ್ದು,ಮತ್ತು ಆಂಗ್ಲ ಮಾದ್ಯಮದ ಶಾಲೆಗಳ ಪ್ರಾರ್ಥನಾ ಅವಧಿಯಲ್ಲಿ ಕಡ್ಡಾಯವಾಗಿ ನಾಡಗೀತೆ ಹಾಡುವಂತೆ ಕ್ರಮಕೈಗೊಳ್ಳುವದರ ಜೊತೆಗೆ ಈ ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ರಾಜ್ಯೋತ್ಸವ ಆಚರಿಸುವಂತೆ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಬೇಕು

ನಾಡಗೀತೆಗೆ ಗೌರವ ಕೊಡದ,ಕರ್ಣಾಟಕ ರಾಜ್ಯೋತ್ಸವವನ್ನು ಆಚರಣೆ ಮಾಡದ ಶಾಲೆಗಳ ಮಾನ್ಯತೆ ರದ್ದು ಮಾಡುವ ಕಾನೂನು ರೂಪಿಸಬೇಕು ಎನ್ನುವದು ಗಡಿಭಾಗದ ಕನ್ನಡಿಗರ ಬಹು ದಶಕಗಳ ಬೇಡಿಕೆಯಾಗಿದ್ದು,ಸನ್ಮಾನ್ಯ ಸಚಿವರು ಸೋಮವಾರ ಖಾನಾಪೂರದಲ್ಲಿ ನಡೆಯುವ ಪ್ರಗತಿ ಪರಶೀಲನಾ ಸಭೆಯಲ್ಲಿ ಈ ಎಲ್ಲ ವಿಚಾರಗಳ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ.

ಗಡಿಭಾಗದಲ್ಲಿ ಕನ್ನಡ ಮರಾಠಿ ಭಾಷಿಕರು ಅತ್ಯಂತ ಸೌಹಾರ್ದತೆಯಿಂದ ಬದುಕುತ್ತಿದ್ದು ಶಾಲೆಗಳ ಅಭಿವೃದ್ಧಿಯ ವಿಚಾರದಲ್ಲಿ ಭಾಷಾ ಬೇಧ ಮಾಡದೇ ಗಡಿ ಭಾಗದ,ಕನ್ನಡ,ಮರಾಠಿ,ಮತ್ತು ಉರ್ದು ಶಾಲೆಗಳಿಗೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು.

ಧನ್ಯವಾದಗಳೊಂದಿಗೆ….

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *