ಬೆಳಗಾವಿ- ಏ,17ಕ್ಕೆ ಬೆಳಗಾವಿ ಲೋಕಸಭಾ ಉಪಚುನಾವಣೆ ರಂಗೇರಿದೆ. ಬೆಳಗಾವಿ ಸಾಂಬ್ರಾ ಗ್ರಾಮದಲ್ಲಿ ಕಾಂಗ್ರೆಸ್v ಅಭ್ಯರ್ಥಿ ಸತೀಶ್ ಜಾರಕಿಹೊಳಿ ಇಂದು ಭರ್ಜರಿ ಪ್ರಚಾರ ನಡೆಸಿದರು.
ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಕಾಂಗ್ರೆಸ್ ಪರವಾಗಿ ಕ್ಷೇತ್ರದಲ್ಲಿ ಉತ್ತಮ ವಾತಾವರಣ ಇದೆ, ಕಾರ್ಯಕರ್ತರು ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ.ಸೋಲಿನ ಭೀತಿಯಿಂದ ಸಿಎಂ ಬಿ ಎಸ್ ಯಡಿಯೂರಪ್ಪ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ.ಕಾಂಗ್ರೆಸ್ ಪರವಾಗಿ ನಾಳೆ ಯಾವುದೇ ನಾಯಕರು ಪ್ರಚಾರಕ್ಕೆ ಬರಲ್ಲ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಎಂಇಎಸ್ ಸ್ಪರ್ಧೆಯಿಂದ ಆಗೋ ಪರಿಣಾಮ ಗೊತ್ತಿಲ್ಲ.ಅರಬಾವಿ ಕ್ಷೇತ್ರದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಚಾರದ ವಿಚಾರ, ಬಾಲಚಂದ್ರ ಜಾರಕಿಹೊಳಿ ಬಿಜೆಪಿ ಪರ ಸಹಜವಾಗಿ ಕೆಲಸ ಮಾಡ್ತಾರೆ.ಅರಬಾವಿಯಲ್ಲಿ ನಮ್ಮ ಹಾಗೂ ಪಕ್ಷ ಮತ ಬ್ಯಾಂಕ್ ಇದೆ.ಬೆಲೆ ಏರಿಕೆಯಿಂದ ಸಾಮಾನ್ಯ ಜನ ಬೇಸತ್ತಿದ್ದಾರೆ. ಇದು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನಕೂಲ ಆಗಲಿದೆ ಎಂದರು.
ವಿಧಾನಸಭೆ ಸಭೆಯಲ್ಲಿ ಸತೀಶ್ ಒಮ್ಮೆಯೂ ಮಾತನಾಡಿಲ್ಲ.ಸಚಿವ ಜಗದೀಶ್ ಶೆಟ್ಟರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸತೀಶ್ ,ಸಚಿವ ಶೆಟ್ಟರ್ ಹೇಳುವುದರಲ್ಲಿ ಸತ್ಯಾಂಶವಿದೆ.ಬರೀ ಮಾತನಾಡೊದೆ ಸಾಧನೆ ಆಗಬಾರದು.ಶೆಟ್ಟರ್ ಮೂರು ಗಂಟೆ ವಿಧಾನಸಭೆಯಲ್ಲಿ ಮಾತನಾಡಿದ್ರೆ.ಮೂರು ಗ್ಲಾಸ್ ನೀರು ಕುಡಿದು ಮಾತನಾಡುತ್ತಾರೆ.ಯಾವುದೇ ಕಚೇರಿ ಶೆಟ್ಟರ್ ನೋಡಿಲ್ಲ. ಜನ ಸಾಮಾನ್ಯರ ಕಷ್ಟದ ಬಗ್ಗೆ ಶೆಟ್ಟರಗೆ ಗೊತ್ತಿಲ್ಲ.ಕೇವಲ ಭಾಷಣ ಮಾಡೊದು ಸಾಧನೆ ಎಂದು ಕೊಂಡಿದ್ದಾರೆ.ಎಂ ಎಸ್ ಬಿಲ್ಡಿಂಗ್ ಎಲ್ಲಿದೆ ಎಂದು ಗೊತ್ತಿಲ್ಲ..ಭಾಷಣ ಮಾಡುವುದರಲ್ಲಿ ಶೆಟ್ಟರ್ ಪ್ರವೀಣರು.ಭಾಷಣಕ್ಕೂ ಕೆಲಸಕ್ಕೂ ತುಂಬ ವ್ಯಾತ್ಯಾಸ ಇದೆ.ಭಾಷಣಕ್ಕಿಂತ ಹೆಚ್ಚು ಕೆಲಸ ಮಾಡಿದ್ದು ನಮಗೆ ತೃಪ್ತಿ ಇದೆ ಎಂದು ಸತೀಶ್ ಜಾರಕಿಹೊಳಿ ಜಗದೀಶ್ ಶೆಟ್ಟರ್ ಆರೋಪಕ್ಕೆ ತಿರಗೇಟು ನೀಡಿದರು.