ಬೆಳಗಾವಿ- ನಾಳೆ ಮತದಾನ ಅಂದ್ರೆ ಇವತ್ತಿನ ರಾತ್ರಿ ಖತ್ತಲ್ ರಾತ್ರಿ,ಆದ್ರೆ ಈ ಬೈ ಇಲೆಕ್ಷನ್ ನ ಖತ್ತಲ್ ರಾತ್ರಿಯ ಮಹೂರ್ತ ಸರಿಯಾಗಿಲ್ಲ ಯಾಕಂದ್ರೆ ಈ ರಾತ್ರಿಗೂ ಕೊರೋನಾ ಕಾಟ ಅಪ್ಪಳಿಸಿದ್ದರಿಂದ ಬಹಳಷ್ಟು ಜನ ಕಂಗಾಲು ಆಗಬೇಕಾದ ಪರಿಸ್ಥಿತಿ ಎದುರಾಯಿತು.
ಕೆಲವರು ಇವತ್ತು ಬೆಳಿಗ್ಗೆಯಿಂದಲೇ ಯಾರ ಹತ್ತಿರ ಹೋಗಬೇಕು,ಎಷ್ಟು ವಸೂಲಿ ಮಾಡಬೇಕು ಅಂತ ಪ್ಲ್ಯಾನ್ ಮಾಡಿಕೊಂಡಿದ್ದರು,ಆದ್ರೆ ಸಂಜೆಯಾಗುತ್ತಲೇ ಬಹಳಷ್ಟು ಜನರಿಗೆ ಕೊರೋನಾ ಸೊಂಕು ತಗಲಿದೆ ಅಂತಾ ಟ್ವೀಟ್ ಗಳು ಬರುತ್ತಿದ್ದಂತೆಯೇ ಖತ್ತಲ್ ರಾತ್ರಿಯ ಖಿಲಾಡಿಗಳಿಗೆ ಭಾರೀ ಶಾಕ್ ತಟ್ಟಿತು.
ಸಂಜೆಯಾಗುತ್ತಿದ್ದಂತೆ ಕೊರೋನಾ ಟ್ವೀಟ್ ಗಳು ಬರುತ್ತಿದ್ದಂತೆಯೇ ಖತ್ತಲ್ ರಾತ್ರಿಯ ಕನಸು ಭಗ್ನವಾಯಿತು.ಖತ್ತಲ್ ರಾತ್ರಿಯ ಕಾರ್ಗತ್ತಲು ಆವರಿಸಿತು,ಖತ್ತಲ್ ರಾತ್ರಿಯ ಜಾತ್ರೆಗೆ ಕೊರೋನಾ ಕಾಟ ಅಪ್ಪಳಿಸಿತು.
ಖತ್ತಲ್ ರಾತ್ರಿಯ ಖಿಲಾಡಿಗಳಿಗೆ ಕೊರೋನಾ ಕಾಟ,ಆದ್ರೆ ಇದೇ ಕೊರೋನಾ ಬಹಳಷ್ಟು ಜನರ ಖಜಾನೆ ರಕ್ಷಣೆ ಮಾಡಿತು ಒಟ್ಟಾರೆ ಇವತ್ತಿನ ಖತ್ತಲ್ ರಾತ್ರಿಯಲ್ಲಿ ಕತ್ತಲು ಬಿಟ್ರೆ ಏನೂ ಇರಲಿಲ್ಲ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ