ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಕಾಂಗ್ರೆಸ್ ಹಾಗೂ ಇತರ ರಾಜಕೀಯ ಪಕ್ಷಗಳು ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ಎದುರಿಸುತ್ತಿರುವ ಕಾರಣ,ಸಂಪೂರ್ಣವಾಗಿ ಕಂಗಾಲಾಗಿರುವ ಎಂಈಎಸ್ ನಾಯಕರು ಈಗ ಎಂ ಪ್ಲಸ್ ಎಂ ಅಂದ್ರೆ ಮರಾಠಿ ಪ್ಲಸ್ ಮುಸ್ಲೀಂ ಎನ್ನುವ ಹೊಸ ನಾಟಕ ಶುರು ಮಾಡಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ವಾರ್ಡ್ ನಂ 6 ನಗರದ ಫೋರ್ಟ್ ರಸ್ತೆ ಅರಳಿಕಟ್ಟಿ ದೇಶಪಾಂಡೆ ಗಲ್ಲಿ ( ಮಾಳಿ ಗಲ್ಲಿ) ಕಲೇಗಾರ ಗಲ್ಲಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ವ್ಯಾಪ್ತಿ ಹೊಂದಿರುವ ವಾರ್ಡ್ ನಂ 6 ರಂದ ಮುಜಮ್ಮಿಲ್ಲ್ (ಮುಜ್ಜೋ) ಹಕೀಂ ಎಂಬ ಮುಸ್ಲೀಂ ಅಭ್ಯರ್ಥಿಯನ್ನು ಎಂಈಎಸ್ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವದರ ಜೊತೆಗೆ ಎಂಈಎಸ್ ಯುವ ನಾಯಕ ಶುಭಂ ಶಿಳಕೆ ಮತ್ತು ಇತರ ಬಿಜೆಪಿ ನಾಯಕರು ಇಂದು ಸಜೆ ಮುಸ್ಲೀಂ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಿದ್ದಾರೆ.
ಚುನಾವಣಾ ಪ್ರಚಾರಾರ್ಥ ಫೋರ್ಟ್ ರಸ್ತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಎಂಈಎಸ್ ನಾಯಕ, ರಾಜಕೀಯ ನಾಯಕರು ಮುಸ್ಲೀಂ ಮತ್ತು ಮರಾಠಿ ಭಾಷಿಕರಲ್ಲಿ ಜಗಳ ಹಚ್ಚಿ ರಾಜಕೀಯ ಮಾಡುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ,ಮುಸ್ಲೀಂ ಪ್ಲಸ್ ಮರಾಠಿ ಸೂತ್ರದೊಂದಿಗೆ ಚುನಾವಣೆ ಎದುರಿಸೋಣ,ರಾಜಕೀಯ ನಾಯಕರನ್ನು ಸೆದೆ ಬಡಿಯೋಣ ಎಂದು ಬಹಿರಂಗ ಕರೆ ನೀಡಿದ್ದಾರೆ.
ಎಂಈಎಸ್ ನಾಯಕರು ಈಬಾರಿಯ ಚುನಾವಣೆಯಲ್ಲಿ ಎಂ…ಪ್ಲಸ್ ಎಂ ಎನ್ನುವ ಹೊಸ ನಾಟಕ ಶುರು ಮಾಡಿದ್ದು ಹಲವಾರು ದಶಕಗಳಿಂದ ಬೆಳಗಾವಿಯಲ್ಲಿ ನಡೆಯುತ್ತ ಬಂದಿರುವ ಕನ್ನಡ ಮತ್ತು ಉರ್ದು ಭಾಷಿಕರ ಸೌಹಾರ್ದತೆಗೆ ಭಾರೀ ಪೆಟ್ಟು ಬಿದ್ದಂತಾಗಿದೆ.ಇದು ಒಳ್ಳೆಯ ಬೆಳವಣಿಗೆ ಅಲ್ಲ.ಈ ಕುರಿತು ಬೆಳಗಾವಿಯ ಮುಸ್ಲೀಂ ಸಮಾಜದ ನಾಯಕರು ಚಿಂತನೆ ಮಾಡುವದು ಅಗತ್ಯ
ಫಜಲ್ ಅಲಿ ಆಯೋಗ ಬೆಳಗಾವಿಗೆ ಬಂದಾಗ ಬೆಳಗಾವಿಯ ಸಮಸ್ತ ಮುಸ್ಲೀಂ ಬಾಂಧವರು ನಾಡಿನ ಪರವಾಗಿ ನಿಂತು ಕನ್ನಡ ಮತ್ತು ಉರ್ದು ಭಾಷಿಕರ ನಡುವೆ ಸೌಹಾರ್ದತೆಯ ಸಂದೇಶ ಸಾರಿದ್ದರು.ಆದ್ರೆ ಈ ಬಾರಿಯ ಪಾಲಿಕೆ ಚುನಾವಣೆ ಹಲವಾರು ದಶಕಗಳ ಸಮಂಧ ಸಮಾಧಿ ಮಾಡಿದೆ.