ಬೆಳಗಾವಿ- ಬೆಳಗಾವಿಯಲ್ಲಿ ಮೂರು ಕೊರೋನಾ ಪಾಜಿಟೀವ್ ಪ್ರಕರಣ ಪತ್ತೆ ಹಿನ್ನೆಲೆಯಲ್ಲಿ
ಬೆಳಗಾವಿಯಲ್ಲಿ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್,ಬೆಳಗಾವಿಯಲ್ಲಿ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದರು.
ಸಭೆಯ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ 30 ನೆಗೆಟಿವ್ ಆಗಿವೆ
19 ಮಾದರಿ ಕಳುಹಿಸಲಾಗಿದೆ ವರದಿ ನಿರೀಕ್ಷಿಸಿದ್ದೇವೆ. ನಿಗಾ ವಹಿಸಲಾಗಿದೆ ಲಾಕ್ ಡೌನ್ ಗೆ ಜನರು ಸಂಪೂರ್ಣ ಸಹಕಾರ ಕೊಡಬೇಕು.
ಅನವಶ್ಯವಾಗಿ ಓಡಾಡಬಾರದು.
ಬಂದೋಬಸ್ತ್ ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಜನರು ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಜೀವ ರಕ್ಷಿಸುವ ಕೆಲಸಕ್ಕೆ ನಾಗರಿಕರ ಸಹಕಾರ ಅತ್ಯಗತ್ಯವಾಗಿದೆ. ಎಂದರು.
ಖಾಸಗಿ ಆಸ್ಪತ್ರೆಯವರು ಒಪಿಡಿ ಒಪನ್ ಮಾಡಿಡಬೇಕು. ಇಲ್ಲವಾದರೆ ಸರ್ಕಾರಿ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಬೆಳಿಗ್ಗೆ ಹಾಗೂ ಸಂಜೆ ಒಂದಿಷ್ಟು ಸಮಯ ತೆರೆಯಬೇಕು. ಇದನ್ನು ದೇಶ ಸೇವೆ ಹಾಗೂ ಸಮಾಜಸೇವೆ ಎಂದು ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ.
ಬೆಳಗಾವಿಯಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಕ್ರಮ ವಹಿಸಲಾಗಿದೆ. ಶೀಘ್ರವೇ ಅನುಮತಿ ಸಿಗುವ ನಿರೀಕ್ಷೆ ಇದೆ,ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.