ಬೆಳಗಾವಿ- ಹೋಮ ಹವನ ಮಾಡಿ,ಭಕ್ತರಿಗೆ ನಿಂಬೆಕಾಯಿ ಟೆಂಗಿನಕಾಯಿ ಕೊಟ್ಟು, ಆಶೀರ್ವಾದ ಮಾಡುವ ಸ್ವಾಮೀಜಿಗಳನ್ನು ನಾವು ನೋಡಿದ್ದೇವೆ.ಮಾಟ ಮಂತ್ರ ಅಂದಾಗ ತಾಯಿತ ಕಟ್ಟುವ ಬಾಬಾಗಳನ್ನೂ ನಾವು ನೋಡಿದ್ದೇವೆ.ಆದ್ರೆಸರ್ಕಾರಿ ನೌಕರಿ ಕೊಡಿಸುತ್ತೇನೆ ಎಂದು ಮೋಸ ಮಾಡಿ,ದುಡ್ಡು ವಾಪಸ್ ಕೇಳಿದಾಗ ಭಕ್ತನ ಮೇಲೆ ಹಲ್ಲೆ ಮಾಡಿದ ವಂಚಕ ಸ್ವಾಮೀಜಿಯೊಬ್ಬ ಈಗ ಪೋಲೀಸರ ಅತಿಥಿಯಾಗಿದ್ದಾನೆ.
ಮೂಡಲಗಿ ಠಾಣೆ ಪೊಲೀಸರು ಖತರ್ನಾಕ್ ವಂಚಕ ಸ್ವಾಮೀಜಿಯನ್ನು ಬಂಧಿಸಿದ್ದಾರೆ.ಸ್ವಾಮೀಜಿ ರೀತಿ ಪೋಸ್ ಕೊಟ್ಟು ಜನರನ್ನು ವಂಚಿಸುತ್ತಿದ್ದ ಆರೋಪಿ ಸ್ವಾಮಿ ಈಗ ಅರೆಸ್ಟ್ ಆಗಿದ್ದಾನೆ.ಹಳ್ಳೂರ ಗ್ರಾಮದ ಅಲ್ಲಮಪ್ರಭು ಹಿರೇಮಠ ಬಂಧಿತ ಆರೋಪಿಯಾಗಿದ್ದಾನೆ.ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮ ಬಂಧಿತ ಈ ಸ್ವಾಮೀಜಿ,ಎಸ್‌ಸಿ ಕೋಟಾದಡಿ ಡಿ ದರ್ಜೆ ಸರ್ಕಾರಿ ನೌಕರಿ ಕೊಡಿಸೋದಾಗಿ ಹಣ ಪಡೆದಿದ್ದ ಆರೋಪ ಈ ಸ್ವಾಮೀಜಿಯ ಮೇಲಿದೆ.
6 ತಿಂಗಳ ಹಿಂದೆ ಮೂಡಲಗಿಯ ಸಂತೋಷ ಹವಳೆವ್ವಗೋಳ ಎಂಬಾತನಿಂದ ಸರ್ಕಾರಿ ನೌಕರಿ ಕೊಡಿಸುವದಾಗಿ 4 ಲಕ್ಷ ರೂ. ಪಡೆದಿದ್ದ ಈ ಸ್ವಾಮಿ,ಬಳಿಕ ಹಣ ವಾಪಸ್ ಕೇಳಿದಾಗ ಅವಾಚ್ಯ ಶಬ್ದಗಳಿಂದ ಬೈಯ್ದು ಹಲ್ಲೆ ಮಾಡಿದ್ದಾನೆ.
ಆಗಸ್ಟ್ 15ರಂದು ಹಣ ಕೇಳಲು ಹೋದಾಗ ಸಂಗಡಿಗರ ಜೊತೆಗೂಡಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.ಸಂತೋಷ ಹವಳೆವ್ವಗೋಳ ಬೆನ್ನಿಗೆ, ಕಾಲಿಗೆ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿದ್ದಾನೆ.ಈ ಆರೋಪದ ಮೇಲೆ ಸ್ವಾಮೀಜಿ ಯನ್ನು ಈಗ ಅರೆಸ್ಟ್ ಮಾಡಲಾಗಿದೆ.
ಆರೋಪಿ ಅಲ್ಲಮಪ್ರಭು ಹಿರೇಮಠ ವಿರುದ್ಧ ಮತ್ತೊಂದು ವಂಚನೆ ದೂರು ಸಹ ದಾಖಲಾಗಿದೆ.ಬಿಬಿಎಂಪಿ ಚುನಾವಣೆಯಲ್ಲಿ ಇವಿಎಂ ಹ್ಯಾಕ್ ಮಾಡಿ ಗೆಲ್ಲಿಸಿಕೊಡುವುದಾಗಿ 5 ಲಕ್ಷ ಹಣ ಪಡೆದ ಆರೋಪವನ್ನು ಸಹ ಈ ಸ್ವಾಮೀಜಿ ಎದುರಿಸುತ್ತಿದ್ದು.ಬೆಂಗಳೂರು ನಿವಾಸಿ ಪ್ರಶಾಂತಕುಮಾರ ನೀಡಿದ ದೂರಿನ ಮೇರೆಗೆ ಅಲ್ಲಮಪ್ರಭು ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬೆಳಗಾವಿ ಜಿಲ್ಲೆ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.