ಬೆಳಗಾವಿ-ಅಳೆದು ತೂಗಿ,ಪರಿಷ್ಕರಣೆ ಮಾಡಿದ ಬಳಿಕ ಸಮೀಕ್ಷೆಯಲ್ಲಿ ಮೇಲುಗೈ ಸಾಧಿಸಿರುವ,ಗೆಲುವಿನ ಹೊಸ್ತಿಲಲ್ಲಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಬಿಜೆಪಿ ಹೈಕಮಾಂಡ್ ಇವತ್ತು ಯಾವುದೇ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಲಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ರಾಜ್ಯದ ಬಿಜೆಪಿ ನಾಯಕರು ಹೇಗಾದರೂ ಮಾಡಿ ಈ ಬಾರಿ ಪೂರ್ಣ ಬಹುಮತ ಸಾಧಿಸಲು ತಂತ್ರ ರೂಪಿಸಿದ್ದು 224 ಅಭ್ಯರ್ಥಿಗಳ ಪಟ್ಟಿಯನ್ನು ರೆಡಿ ಮಾಡಿಕೊಂಡು ದೆಹಲಿಗೆ ತೆರಳಿದ್ದು,ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಸಿಎಂ ಬಸವರಾಜ್ ಬೊಮ್ಮಾಯಿ,ನಳೀನ್ ಕುಮಾರ್ ಕಟೀಲು ಸೇರಿದಂತೆ ರಾಜ್ಯದ ಎಲ್ಲ ಬಿಜೆಪಿಯ ವರಿಷ್ಠರು ದೆಹಲಿಯಲ್ಲಿ ಧರ್ಮೇಂದ್ರ ಪ್ರಧಾನ ಅವರ ಮನೆಯಲ್ಲಿ ಸಮಾಲೋಚನೆ ನಡೆಸಿದ್ದು ನಂತರ ಬಿಜೆಪಿ ಅಧ್ಯಕ್ಷ ನಡ್ಡಾ ಅವರ ಜೊತೆ ಅಂತಿಮ ಹಂತದ ಚರ್ಚೆಯ ಬಳಿಕ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇವತ್ತು ಯಾವುದೇ ಕ್ಷಣದಲ್ಲಿ ರಿಸೀಸ್ ಆಗಲಿದೆ.
ಬಹಳಷ್ಟು ಜನ ಬಿಜೆಪಿ ಆಕಾಂಕ್ಷಿಗಳು ದೆಹಲಿಯಲ್ಲಿ ಟಿಕೆಟ್ ಗಾಗಿ ಅಂತಿಮ ಸುತ್ತಿನ ಕಸರತ್ತು ನಡೆಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ