Breaking News

ತಾಳಿ ಕಟ್ಟುವ ಸಮಯದಲ್ಲೇ ಮದುವೆ ಮುರಿದು ಬಿತ್ತು…..!!!

ಬೆಳಗಾವಿ- ಮದುವೆಗಾಗಿ ಬೀಗರು ಕಲ್ಯಾಣ ಮಂಟಪಕ್ಕೆ ಆಗಮಿಸಿದ್ರು ಮಂಟಪದಲ್ಲಿ ಮದುವೆಯ ಮುನ್ನ ಹಳದಿ ಕಾರ್ಯಕ್ರಮ ನಡೆದಿತ್ತು.ವರ ವರದಕ್ಷಣೆಗಾಗಿ ಪಟ್ಟು ಹಿಡಿದ ಹಿನ್ನಲೆಯಲ್ಲಿ ತಾಳಿ ಕಟ್ಟುವ ಸಮಯದಲ್ಲೇ ಮದುವೆ ಮುರಿದು ಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪೂರದಲ್ಲಿ ನಡೆದಿದೆ.

ವರದಕ್ಷಣೆಗೆ ಡಿಮ್ಯಾಂಡ್ ಮಾಡಿದ ವರ ಸರ್ಕಾರಿ ನೌಕರ, ಹುಬ್ಬಳ್ಳಿ ಮೂಲದ ವರ ಸಚಿನ್ ಪಾಟೀಲ ಸರ್ಕಾರಿ ನೌಕರ ಬೆಳಗಾವಿ ಡಿಸಿ ಕಚೇರಿಯಲ್ಲಿ SDA ಆಗಿ ಕೆಲಸ ಮಾಡುತ್ತಿದ್ದಾನೆ. ಕೇಳಿದಷ್ಟು ವರದಕ್ಷಣೆ ಕೊಡಲೇ ಬೇಕು ಅಂದಾಗ ವಧುವಿನ ಕುಟುಂಬದವರು ವರನಿಗೆ ಥಳಿಸಿ ಪಾಠ ಕಲಿಸಿ ಪೋಲೀಸರಿಗೆ ದೂರು ನೀಡಿದ್ದಾರೆ.

ಖಾನಾಪೂರದ ಲೋಕಮಾನ್ಯ
ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದ್ದು ಘಡನೆಯ ಸಂಭಾಷಣೆ ಸಿಸಿಟಿವಿಯಲ್ಲಿ ಎಲ್ಲವೂ ಸೆರೆ‌ಯಾಗಿದೆ.100 ಗ್ರಾಂ ಚಿನ್ನ, 10 ಲಕ್ಷ ವರದಕ್ಷಿಣೆ ಡಿಮ್ಯಾಂಡ್ ಮಾಡಿದ ವರ‌ ಈಗ ಜೈಲು ಸೇರಿದ್ದಾನೆ.ವರದಕ್ಷಿಣೆ ಡಿಮ್ಯಾಂಡ್ ಮಾಡಿದ ಸರ್ಕಾರಿ ನೌಕರ ಅರೆಸ್ಟ್ ಆಗಿದ್ದಾನೆ.
ಖಾನಾಪುರ ಪಟ್ಟಣದ ಲೋಕಮಾನ್ಯ ಕಲ್ಯಾಣ ಮಂಟಪದಲ್ಲಿ ಮದುವೆ ಸ್ಥಗಿತಗೊಂಡಿದೆ.

ಮದುವೆ ನಿಶ್ಚಿತಾರ್ಥ ಸಂದರ್ಭದಲ್ಲಿ 50 ಗ್ರಾಂ ಬಂಗಾರ,‌ ಒಂದು ಲಕ್ಷ ವರೋಪಚಾರ ನೀಡುವ ಮಾತುಕತೆ.ಆಗಿತ್ತು.
30-12-2023ರ ಮದುವೆ ದಿನ 100 ಗ್ರಾಂ ಚಿನ್ನ, 10 ಲಕ್ಷ ವರದಕ್ಷಿಣೆ ನೀಡಲು ಬೇಡಿಕೆ ಇಟ್ಡ ಹಿನ್ನಲೆಯಲ್ಲಿ
‌ವರದಕ್ಷಿಣೆ ನೀಡದ ಹಿನ್ನೆಲೆಯಲ್ಲಿ ಮದುವೆ ಆಗಲ್ಲ ಎಂದಿದ್ದ ವರ.ಖಾನಾಪುರ ಪೊಲೀಸ ಠಾಣೆಯಲ್ಲಿ ವಧುವಿನಿಂದ ವರನ ವಿರುದ್ಧ ದೂರು ದಾಖಲಾಗಿದೆ.ಹುಬ್ಬಳ್ಳಿ ಮೂಲದ ವರ ಸಚಿನ್ ಪಾಟೀಲ್ ಬಂಧಿಸಿದ ಪೊಲೀಸರು.ವರಸದ್ಯ ಬೆಳಗಾವಿ ಡಿಸಿ ಕಚೇರಿಯಲ್ಲಿ ಎಸ.ಡಿ.ಎ ಆಗಿ ಕೆಲಸ ನಿರ್ವಹಣೆ ಮಾಡುತ್ತಿದ್ದಾನೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *