ಬೆಳಗಾವಿ, – ನಗರ ಪ್ರದೇಶದ ನ್ಯಾಯಬೆಲೆ ಅಂಗಡಿ ಸಂಖ್ಯೆ 237 ವಿಲೇಜ ಕಮೀಟಿ ಅಲಾರವಾಡ ಇವರು ಎಪ್ರೀಲ್-2020ನೇ ತಿಂಗಳಲ್ಲಿ ಪಡಿತರ ಆಹಾರದಾನ ನಿಗದಿ ಪಡಿಸಿದ ಪ್ರಮಾಣದಂತ ವಿತರಣೆ ಮಾಡದೇ ಇರುವುದರಿಂದ ಮತ್ತು ಕಾರ್ಡುದಾರರೊಂದಿಗೆ ಸೌಜನ್ಯತೆಯಿಂದ ನಡೆದುಕೊಳ್ಳದೇ ಇರುವದು ನಿಗದಿಪಡಿಸಿದ ವೇಳೆಯಂತೆ ನ್ಯಾಯಬೆಲೆ ಅಂಗಡಿ ತೆರೆಯದೇ ಇರುವ ಬಗ್ಗೆ ಸದರ ನ್ಯಾಯಬೆಲೆ ಅಂಗಡಿ ಪಡಿತರ ಚೀಟಿದಾರರ ದೂರಿನ ಮರೆಗೆ ಸಹಾಯಕ ನಿರ್ದೇಶಕರು ಆಹಾರ ನಾಗರಿಕ ಸರಬರಾಜು ಮತ್ತು
ಗ್ರಾಹಕರ ವ್ಯವಹಾರಗಳ ಇಲಾಖೆ (ಆಪತ್ತೆ) ಬೆಳಗಾವಿ ಇವರು ಸದರ ನ್ಯಾಯಬೆಲೆ ಅಂಗಡಿ ತಪಾಸಣೆ ಮಾಡಿ
ವರದಿ ನೀಡಿದ್ದರಿಂದ ನ್ಯಾಯಬೆಲೆ ಅಂಗಡಿ ಸಂಖ್ಯೆ 237 ವಿಲೇಜ ಕಮೀಟಿ ಅಲಾರವಾಡ ಬೆಳಗಾವಿ ನಗರ
ದಿನಾಂಕ 10-04-2020ರಂದು ಅಮಾನತ್ತುಪಡಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶ ಚನ್ನಬಸಪ್ಪ ಕೊಡ್ಲಿ ಅವರು ತಿಳಿಸಿದ್ದಾರೆ.
ಅದರಂತೆ ಬೆಳಗಾವಿ ಜಿಲ್ಲೆಯಲ್ಲಿರುವ ಇನ್ನಿತರ ನ್ಯಾಯಬೆಲೆ ಅಂಗಡಿಕಾರರ ಮೇಲೆ ಕಡಿಮೆ ಪ್ರಮಾಣದಲ್ಲಿ ವಿತರಿಸುವುದು, ಪಡಿತರ ಕಾರ್ಡುದಾರರಿಂದ ಹಣಪಡೆಯುವದಾಗಲಿ, ನ್ಯಾಯಬೆಲೆ
ಅಂಗಡಿಯಲ್ಲಿ ಇಟ್ಟಿರುವ ಇತರೆ ಮುಕ್ತ ಮಾರುಕಟ್ಟೆ ವಸ್ತುಗಳನ್ನು ಕಡ್ಡಾಯವಾಗಿ ಪಡಿತರ ಚೀಟಿದಾರರಿಗೆ
ಪಡೆಯುವಂತೆ ಆಗ್ರಹಿಸುತ್ತಿರುವದಾಗಲಿ ನಿಗದಿಪಡಿಸಿದ ವೇಳೆಯಂತೆ ನ್ಯಾಯಬೆಲೆ ಅಂಗಡಿ ತೆರೆಯದ ಬಗ್ಗೆ
ಪಡಿತರ ಚೀಟಿದಾರರಿಂದ ದೂರುಗಳು ಸ್ವೀಕೃತವಾದಲ್ಲಿ ಅಂತಹ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕರ್ನಾಟಕ
ಅಗತ್ಯವಸ್ತುಗಳ ಸಾರ್ವಜನಿಕ ವಿತರಣಾ ಪದ್ದತಿ (ನಿ) ಆದೇಶ-2016ರನ್ವಯ ಸೂಕ್ತ ಕ್ರಮವಹಿಸ್ತಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
****