ಬೆಳಗಾವಿ- ಎತ್ತಿನ ಜೋಡಿಯ ಕೊರಳಿಗೆ ಎತ್ತಿನ ಗಾಡಿ ಅದರಲ್ಲಿ ನಾಲ್ಕರಿಂದ ಐದು ಟನ್ ಕಬ್ಬು ಹೇರಿ ಕಬ್ಬಿನ ಗದ್ದೆಯಿಂದ ಕಾರ್ಖಾನೆಯ ವರೆಗೆ ಐದರಿಂದ ಆರು ಕಿ ಮೀ ವರೆಗೆ ಈ ಮೂಕ ಜೀವಗಳು ಕಬ್ಬು ಎಳೆಯ ಬೇಕಾದರೆ ಪರಿಸ್ಥಿತಿ ಏನಾಗಬಹುದೆಂದು ಉಹಿಸಲು ಸಾಧ್ಯವೇ ಇಲ್ಲ
ಕಿತ್ತೂರ ತಾಲ್ಲೂಕಿನ ಎಂ ಕೆ ಹುಬ್ಬಳ್ಳಿ ಗ್ರಾಮದಲ್ಲಿ ದಾಸ್ತಿಕೊಪ್ಪ ಗ್ರಾಮದ ಸಮೀಪ ಎತ್ತಿನ ಜೋಡಿಯೊಂದು ಕಬ್ಬು ತುಂಬಿದ ಎತ್ತಿನ ಗಾಡಿ ಎಳೆಯಲು ಪರದಾಡುತ್ತಿರುವಾಗ ಹೆಗಲ ಮೇಲೆ ನಾಲ್ಕರಿಂದ ಐದು ಟನ್ ಭಾರ ಹಿಂದಿನಿಂದ ಬಾರ್ ಕೋಲ್ ಏಟು ಗೋಣು ಕೆಳಗೆ ಹಾಕಿ ಈ ಎತ್ತಿನ ಜೋಡಿ ಪಡುತ್ತಿರುವ ವೇದನೆ ನೋಡಲಾಗಲಿಲ್ಲ
ಇದು ಕೇವಲ ಎಂಕೆ ಹುಬ್ಬಳ್ಳಿ ಗ್ರಾಮದ ಪರಿಸ್ಥಿತಿ ಇಲ್ಲ ಈ ಪರಿಸ್ಥಿತಿ ಬೆಳಗಾವಿ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆ ಗಳ ಪರಿಸರದಲ್ಲಿ ನೋಡಲು ಸಿಗುತ್ತದೆ
ಕೆಲವರು ಎತ್ತಿನಗಾಡಿಯಲ್ಲಿ ಮೂರು ಟನ್ ಕಬ್ನು ಹೇರ್ತಾರೆ ಇನ್ಮು ಕೆಲವರು ನಾಲ್ಕು ಟನ್ ಕಬ್ಬಿನಿಂದ ಗರಿಷ್ಠ ಐದು ಟನ್ ವರೆಗೆ ಕಬ್ಬು ಹೇರಿ ಎತ್ತಿನಗಾಡಿಯನ್ನು ಮೂಕ ಜೀವಗಳ ಕೊರಳಿಗೆ ಕಟ್ಟಿ ಎಳಿಸೋದು ಯಾವ ನ್ಯಾಯ ಸ್ವಾಮಿ
ಕಬ್ಬನ್ನು ಕೆಲವರು ಟ್ರ್ಯಾಕ್ಟರ್ ಮೂಲಕ ಅಥವಾ ಲಾರಿ ಮೂಲಕ ಕಾರ್ಖಾನೆಗೆ ಸಾಗಿಸುತ್ತಾರೆ ಲಾರಿ ಹಾಗು ಟ್ರ್ಯಾಕ್ಟರ್ ಮೂಲಕ ಕಬ್ಬು ಸಾಗಿಸಲು ಕಾರ್ಖಾನೆಯ ಅಧಿಕಾರಿಗಳು ಬೇಗ ಪರ್ಮಿಟ್ ಕೊಡೋದಿಲ್ಲ ಹೀಗಾಗಿ ಪರ್ಮಿಟ್ ಇಲ್ಲದೇ ಎತ್ತಿನ ಗಾಡಿಯ ಮೂಲಕ ಕಬ್ಬು ಸಾಗಿಸಲಾಗುತ್ತದೆ
ಒಂದು ಎತ್ತಿನ ಜೋಡಿ ಐದು ಟನ್ ಕಬ್ಬು ತುಂಬಿದ ಚಕ್ಕಡಿಯನ್ನು ಐದೋ.ಹತ್ತೋ ಕಿಮೀ ದೂರದವರೆಗೆ ಎಳೆದುಕೊಂಡು ಹೋಗುವದು ಸುಲಭದ ಮಾತಲ್ಲ
ಈ ಮೂಕ ವೇದನೆ ಇಂದು ನಿನ್ನೆಯದಲ್ಲ ಹಲವಾರು ದಶಕಗಳ ವೇದನೆ ಇದಾಗಿದೆ ಕಾರ್ಖಾನೆ ಮಾಲೀಕರು ಈ ಬಗ್ಗೆ ತೆಲೆಕೆಡಿಸಿಕೊಳ್ಳುವದಿಲ್ಲ ಹೇಗಾದ್ರು ಬರಲಿ ಕಬ್ಬು ಕಾರ್ಖಾನೆಗೆ ಬರಲಿ ಅಂತಾರೆ ಇನ್ನು ಕಬ್ಬು ಬೆಳೆಗಾರರು ಅಷ್ಟೇ ಹೇಗಾದ್ರು ಹೋಗಲಿ ಕಬ್ಬು ಕಾರ್ಖಾನೆಗೆ ಮುಟ್ಟಿದರೆ ಸಾಕು ಅಂತಾರೆ ಹೀಗಾಗಿ ಇವರಿಬ್ಬರ ನಡುವ ಈ ಮೂಕ ಜೀವಗಳು ದಿನನಿತ್ಯ ವೇದನೆ ಅನುಭವಿಸಬೇಕಾಗಿದೆ
ಒಬ್ಬ ಮಾನವನಾಗಿ ಮತ್ತೊಬ್ಬ ಮಾನವನ ಮೇಲೆ ಕರುಣೆ ತೋರಿದರೆ ಸಾಲದು ಮಾನವ ಸಕಲ ಜೀವ ಸಂಕುಲದ ಮೇಲೆ ಕರುಣೆ ತೋರುವದು ನಿಜವಾದ ಧರ್ಮ
ಈ ಮೂಕ ವೇದನೆಯನ್ನು ನಿಲ್ಲಿಸಲು ರಾಜ್ಯ ಸರ್ಕಾರ ಚಕ್ಕಡಿಯಲ್ಲಿ ಕಬ್ಬು ಸಾಗಾಣಿಕೆ ಮಾಡುವದನ್ನು ನಿಲ್ಲಿಸಬೇಕು ಅದನ್ನು ರಾಜ್ಯದಲ್ಲಿ ನಿಷೇಧಿಸುವ ಕಾನೂನು ಜಾರಿಗೆ ತರಬೇಕು ರಾಜ್ಯದಲ್ಲಿ ವ್ಯಾಪಕವಾಗಿರುವ ಈ ಮೂಕವೇದನೆಗೆ ಲಗಾಮು ಹಾಕುವದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜವಾಬ್ದಾರಿಯಾಗಿದೆ