Breaking News

ಪವಿತ್ರ ರಂಜಾನ್ ಹಬ್ಬದ ನಿಮಿತ್ಯ ಮುಸ್ಲಿಂ ಮುಖಂಡರ ಜತೆ ಸಾಹುಕಾರ್ ಸಭೆ

 

*ರಂಜಾನ್ ಮಾಸ ಪ್ರಾರಂಭ ; ಮುಸ್ಲಿಂ ಮುಖಂಡರ ಸಭೆ ನಡೆಸಿದ ಸಚಿವ ರಮೇಶ್ ಜಾರಕಿಹೊಳಿ‌*

ಒಂದು ತಿಂಗಳು ಉಪವಾಸ ಆಚರಿಸುವ ರಂಜಾನ್ ‌ಮಾಸವು ಈಗ ಪ್ರಾರಂಭವಾಗಿದ್ದು, ತಾಳ್ಮೆ, ಶಾಂತಿ ಮತ್ತು ತ್ಯಾಗದ ಸಂಕೇತವಾದ *ರಂಜಾನ್ ಮಾಸ* ವನ್ನು ತಮ್ಮ‌ ತಮ್ಮ ಮನೆಗಳಲ್ಲಿಯೇ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸುವಂತೆ ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ‌* ಅವರು ಮನವಿ‌ ಮಾಡಿದರು.

ಗೋಕಾಕ್ ತಾಲ್ಲೂಕಿನ ಮುಸ್ಲಿಂ ಮುಖಂಡರ ಸಭೆಯಲ್ಲಿ ಮಾತನಾಡಿದ ಸಚಿವರು, ಜಗತ್ತಿನಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಅದನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ಎಲ್ಲಾ ಸರ್ಕಾರಗಳೂ ಯೋಜನೆ ರೂಪಿಸಿವೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು‌ ನೀಡಿರುವ ಸಲಹೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.

ಲಾಕ್ ಡೌನ್ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಮನೆಯಲ್ಲಿಯೇ ಇದ್ದು ಪ್ರಾರ್ಥನೆ ಸಲ್ಲಿಸಬೇಕು. ಸಾಮಾಜಿಕ ಅಂತರವನ್ನು ಪಾಲಿಸಬೇಕು. ದಿನನಿತ್ಯದ ಅಗತ್ಯವಾದ ವಸ್ತುಗಳನ್ನು ಮನೆ ಬಾಗಿಲಿಗೇ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಅನವಶ್ಯಕವಾಗಿ ಯಾರೂ ರಸ್ತೆಗಿಳಿಯದಂತೆ ಮುಸ್ಲಿಂ ಸಮುದಾಯದ ಮುಖಂಡರಲ್ಲಿ ಸಚಿವರು ಮನವಿ ಮಾಡಿದರು.

ಸಭೆಯ ನಂತರ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ‌* ಅವರು ಸಾಮಾಜಿಕ ಅಂತರದಲ್ಲಿಯೇ ಪರಸ್ಪರ *ರಂಜಾನ್ ಶುಭಾಶಯ* ವನ್ನು ವಿನಿಮಯ ಮಾಡಿಕೊಂಡರು. ಸರ್ಕಾರದ ನಿಯಮಗಳನ್ನು ಪಾಲಿಸಿ ಉಪವಾಸ ವ್ರತ ಆಚರಿಸುವುದಾಗಿ ಮುಸ್ಲಿಂ ಮುಖಂಡರು ತಿಳಿಸಿದರು.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *