Breaking News

ಹತ್ತು ದಿನದಲ್ಲಿ 2600 ರೈಲು ಬಿಡ್ತಾರಂತೆ…36 ಲಕ್ಷ ಕಾರ್ಮಿಕರನ್ನು, ತವರೂರಿಗೆ ಕಳಸ್ತಾರಂತೆ….!!!

ಬೆಳಗಾವಿ- ಮುಂದಿನ ಹತ್ತು ದಿನಗಳಲ್ಲಿ ದೇಶಾದ್ಯಂತ 2600 ರೈಲುಗಳ ಸಂಚಾರ ಮಾಡಲಿವೆ ಎಂದು, ಬೆಳಗಾವಿಯಲ್ಲಿ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ

ಬೆಳಗಾವಿಯ ಗೃಹ ಕಚೇರಿಯಲ್ಲಿ, ಮಾದ್ಯಮಗಳ ಜೊತೆ ಮಾತನಾಡಿದ ಅವರು 10 ದಿನಗಳಲ್ಲಿ 36 ಲಕ್ಷ ಶ್ರಮಿಕರನ್ನು ಅವರವರ ಸ್ಥಳಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ 31 ಲಕ್ಷ ಶ್ರಮಿಕರು ತಮ್ಮ ತಮ್ಮ ಊರುಗಳಿಗೆ ಕಳುಹಿಸಿಕೊಡಲಾಗಿದೆ,ರಾಜ್ಯಗಳು ಸಹಕಾರ ಕೇಳಿದ್ರೆ, ಸಮ್ಮತಿಸಿದ್ರೆ ಆಯಾ ರಾಜ್ಯದೊಳಗೆ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡುತ್ತೇವೆ
ಬರುವ ಹತ್ತು ದಿನಗಳಲ್ಲಿ ಇದರ ಲಾಭ ಪಡೆದು ಎಲ್ಲರೂ ತಮ್ಮ ತಮ್ಮ ಸ್ಥಳಗಳಿಗೆ ತೆರಳಬೇಕೆಂದು ಸಚಿವ ಸುರೇಶ ಅಂಗಡಿ ಮನವಿ ಮಾಡಿಕೊಂಡಿದ್ದಾರೆ.

ಈಗಾಗಲೇ ಬೆಂಗಳೂರು ಬೆಳಗಾವಿ, ಬೆಂಗಳೂರು ಮೈಸೂರು ರೈಲುಗಳ ಸಂಚಾರ ಆರಂಭವಾಗಿದೆ. ಜೂನ್ ಒಂದರಿಂದ ಮತ್ತಷ್ಟು ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಿದ್ದೇವೆ, ಇಂದು ಭಾನುವಾರ ಕಂಪ್ಲೀಟ್ ಲಾಕ್‌ಡೌನ್ ಯಶಸ್ವಿಯಾಗಿದೆ. ಕೊರೊನಾ ವಿರುದ್ಧ ಹೋರಾಡಲು ನಾವೆಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಇದನ್ನು ಪಾಲನೆ ಮಾಡಿದರೆ ಕೊರೊನಾ ವಿರುದ್ಧ ಜಯ ಸಾಧ್ಯವಾಗುತ್ತೆ, ಪ್ರಧಾನಿ ಮೋದಿ, ಸಿಎಂ ಬಿಎಸ್‌ವೈ, ಮಾಧ್ಯಮಗಳ ಸಲಹೆ ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದರು ಸುರೇಶ ಅಂಗಡಿ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *