ಬೆಳಗಾವಿ – ಬೆಳಗಾವಿ ಪೋಲೀಸರು ಇಂದು ರವಿವಾರ ಖಾಕಿ ಖದರ್ ತೀರಿಸಿದ್ದಾರೆ ,ಕುಂದಾನಗರಿ ಬೆಳಗಾವಿ ಇಂದು ಅಕ್ಷರಶಃ ನಿಶ್ಯಬ್ದ ವಾಗಿತ್ತು ಬಹಳ ದಿನಗಳ ನಂತರ ಇಲ್ಲಿ ಖಡಕ್ ಲಾಕ್ ಡೌನ್ ನೋಡಲು ಸಿಕ್ಕಿತು
ಬೆಳಿಗ್ಗೆ ಸೂರ್ಯೋದಯದ ಮೊದಲೇ ಬೆಳಗಾವಿ ಪೋಲೀಸರು ಫೀಲ್ಡ್ ಗೆ ಬಂದಿದ್ದರು, ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು ಬೆಳ್ಳಂ ಬೆಳಿಗ್ಗೆ ಪೋಲೀಸರು ಲಾಠಿ ಬಿಸಿ ಮುಟ್ಟಿಸಿದ್ರು ಒಟ್ಟಾರೆ ಬೆಳಗಾವಿಯಲ್ಲಿ ಖಡಕ್ ಲಾಕ್ ಡೌನ್ ಅನುಷ್ಠಾನಗೊಳಿಸಿದರು
ಬೆಳಗಾವಿ ಬಸ್ ನಿಲ್ದಾಣ ಇಂದು ಬಿಕೋ ಎನ್ನುತ್ತಿತ್ತು, ಬೆಳಗಾವಿಯ ಗಲ್ಲಿ ಗಲ್ಲಿಗಳಲ್ಲಿ ಮೌನ ಆವರಿಸಿತ್ತು, ಪೋಲೀಸರು ಬಿಸಿಲಿನ ಧಗೆಯಲ್ಲೂ ಲಾಕ್ ಡೌನ್ ಬಿಗಿಗೊಳಿಸಲು ಶ್ರಮಿಸಿದರು.