Breaking News

ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಅವರ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು

ಬೆಳಗಾವಿಯಲ್ಗಿ ಜಗದೀಶ್ ಶೆಟ್ಟರ್ ಅವರ ಪತ್ರಿಕಾಗೋಷ್ಠಿಯ ಪ್ರಮುಖಾಂಶಗಳು

* ಜಿಲ್ಲೆಯ ಕೋವಿಡ್-೧೯ ನಿರ್ವಹಣೆ ಬಗ್ಗೆ ಚರ್ಚೆ

* 143 ಪ್ರಕರಣ 93 ಬಿಡುಗಡೆ

* 49 ಸಕ್ರಿಯ ಪ್ರಕರಣಗಳಿವೆ. ವಾರಾಂತ್ಯ ಇನ್ನಷ್ಟು ಜನರು ಗುಣಮುಖ

* ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ.

* ಹಿರೇಬಾಗೇವಾಡಿ, ಕುಡಚಿ ಸೇರಿದಂತೆ ಬಹುತೇಕ ಕಡೆ ಸ್ಥಳೀಯವಾಗಿ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗಿದೆ.

* ಬಹುತೇಕ ಕಂಟೈನ್ಮೆಂಟ್ ಝೋನ್ ಡಿನೋಟಿಫೈ ಮಾಡಲಾಗಿದೆ.

* ಸಮುದಾಯ ಹರಡುವಿಕೆಯನ್ನು ತಡೆಗಟ್ಟಲು ಜಿಲ್ಲಾಡಳಿತ, ಆರೋಗ್ಯ ಮತ್ತು ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.

* ಇಂದಿನ 13 ಹೊಸ ಪ್ರಕರಣಗಳು ಜಾರ್ಖಂಡ್ ನಿಂದ ಬಂದವರು.

* 4323 ಜನರು ಮಹಾರಾಷ್ಟ್ರದಿಂದ ಬಂದಿದ್ದು, 2000 ಜನರ ಗಂಟಲು ದ್ರವ ಪರೀಕ್ಷಿಸಲಾಗಿದ್ದು, ಬಹುತೇಕ ಮಾದರಿಯ ವರದಿ ನೆಗೆಟಿವ್ ಬಂದಿರುತ್ತದೆ.

* ಗ್ರಾಮ ಮಟ್ಟದಲ್ಲಿ ಪಿಡಿಓ, ಆಶಾ, ಅಂಗನವಾಡಿ, ಪೊಲೀಸ್, ಕಂದಾಯ ಮತ್ತಿತರ ಇಲಾಖೆಯವರು 24 ತಾಸು ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

* ಖಾಸಗಿ ಆಸ್ಪತ್ರೆಯವರು ಸವಾಲು ಸ್ವೀಕರಿಸಿ ಜನರಿಗೆ ಸೇವೆ ನೀಡಬೇಕಿತ್ತು. ಆದರೆ ಅವರು ಮುಂದೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

* ಪಾಲಿಕೆ ತೆರಿಗೆ ಹೆಚ್ಚಳ ಬೇಡ ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿತ್ತು.

* ಬೆಳಗಾವಿ ಜನರು ಸದ್ಯಕ್ಕೆ ಪರಿಷ್ಕೃತ ತೆರಿಗೆ ಪಾವತಿಸಲಿ ಮುಂಬರುವ ದಿನಗಳಲ್ಲಿ ಸರ್ಕಾರ ಕೈಗೊಳ್ಳುವ ನಿರ್ಧಾರದ ಮೇರೆ ಹೊಂದಾಣಿಕೆ ಮಾಡಲಾಗುವುದು.

* ಮಹಾರಾಷ್ಟ್ರದಿಂದ ಬರಲು ಇಚ್ಛಿಸುವವರನ್ನು ರಾಜ್ಯದೊಳಗೆ ಬಿಟ್ಟುಕೊಳ್ಳುವ ಬಗ್ಗೆ ಮುಖ್ಯ ಕಾರ್ಯದರ್ಶಿಗಳ ಜತೆ ಚರ್ಚೆ ನಡೆಸಿ ಕ್ರಮ.

* ಉತ್ತರ ಪ್ರದೇಶಕ್ಕೆ ಹೋಗಲು ಕಾರ್ಮಿಕರು ನೋಂದಣಿ ಮಾಡಿದವರನ್ನು ಕಳಿಸಲು ನಾವು ಸಿದ್ಧ. ಆದರೆ ಅಲ್ಲಿನ ಸರ್ಕಾರ ಒಪ್ಪಿಗೆ ನೀಡಬೇಕಿದೆ.

* ಉತ್ತರ ಪ್ರದೇಶದ ಕಾರ್ಮಿಕರಿಗೆ ಸೂಕ್ತ ವಸತಿ, ಊಟೋಪಹಾರದ ವ್ಯವಸ್ಥೆ ಮಾಡಲಾಗುವುದು.

* ರಾಜ್ಯದಲ್ಲಿ ಶೇ.80 ರಷ್ಟು ಕೈಗಾರಿಕೆಗಳು ಕಾರ್ಯಾರಂಭಿಸಿವೆ. ಕಟ್ಟಡ ನಿರ್ಮಾಣ ಮತ್ತಿತರ ಕ್ಷೇತ್ರದಲ್ಲಿ ಹೊರ ರಾಜ್ಯದವರು ಇರುವುದರಿಂದ ಸ್ವಲ್ಪ ಹಿನ್ನಡೆಯಾಗಿದೆ.

*

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *