ಬೆಳಗಾವಿಯಲ್ಲಿ ನಾಯಿಗಳು ಹಸಿದಿವೆ ಹುಷಾರ್…..!!
ಬೆಳಗಾವಿ- ಲಾಕ್ ಡೌನ್ ಅವಧಿಯಲ್ಲಿ ಬೆಳಗಾವಿ ನಗರದ ನಾಯಿಗಳು ಈಗ ಡಾನ್ ಆಗಿವೆ.ಆಹಾರ ಸಿಗದೇ ಪರದಾಡುತ್ತಿರುವ ಬೀದಿ ನಾಯಿಗಳು ಈಗ ಕ್ರೂರಿಯಾಗಿವೆ.
ಇಂದು ಮದ್ಯಾಹ್ನ ಹಸಿದ ನಾಯಿಗಳು ಗುಂಪಾಗಿ ಕುರಿಗಳ ಹಿಂಡಿನ ಮೇಲೆ ದಾಳಿ ಮಾಡಿ ಎರಡು ಕುರಿಗಳನ್ನು ಬೇಟೆಯಾಡಿದ ಘಟನೆ ಬೆಳಗಾವಿಯ ಕಣಬರ್ಗಿ ರಸ್ತೆಯ ಶಿವತೀರ್ಥ ಅಪಾರ್ಟಮಡಂಟ್ ಹಿಂದುಗಡೆ ನಡೆದಿದೆ.
ಬೆಳಗಾವಿಯಲ್ಲಿ ಹಸಿದವರಿಗೆ ಉಳ್ಳವರು ಆಹಾರದ ಕಿಟ್ ಗಳನ್ನು ಕೊಡುತ್ತಿದ್ದಾರೆ. ಹೊಟೇಲ್ ಗಳ ನಾನ್ ವೇಜ್ ವೇಸ್ಟೇಜ್ ತಿಂದು ಹಾಯಾಗಿದ್ದ ಬೀದಿ ನಾಯಿಗಳಿಗೆ ಆಹಾರ ಸಿಗದೇ ಈ ನಾಯಿಗಳು ಕಂಗಾಲಾಗಿವೆ.
ಹಸಿದು ಕ್ರೂರಿಯಾಗಿರುವ ಬೆಳಗಾವಿ ನಗರದ ಬೀದಿ ನಾಯಿಗಳು ಈಗ ಕುರಿ ಕೋಳಿಗಳನ್ನು ಬೇಟೆಯಾಡಲು ಶುರು ಮಾಡಿವೆ. ಚಿಕ್ಕ ಮಕ್ಕಳು ಕಂಡರೆ ಅಡರ್ ಅಂತಾ ಬೊಗಳಿ ಮಕ್ಕಳ ಮೈಮೇಲೆ ಏರಿ ಹೋಗುತ್ತಿವೆ .
ಕ್ರೂರ ಸ್ವರೂಪ ತಾಳಿರುವ ಬೆಳಗಾವಿಯ ಬೀದಿ ನಾಯಿಗಳಿಗೆ ಬೆಳಗಾವಿ ಮಹಾನಗರ ಪಾಲಿಕೆಯಿಂದ ಆಹಾರ ಹಾಕಬೇಕು ಇಲ್ಲಾ ಅಂದ್ರೆ ಈ ಬೀದಿ ನಾಯಿಗಳಿಗೆ ಲಗಾಮು ಹಾಕದಿದ್ದರೆ ಈ ನಾಯಿಗಳು ಕಂಡ ಕಂಡವರ ಮೈಮೇಲೆ ಏರಿ ಹೋಗುವ ಕಾಲ ದೂರವಿಲ್ಲ
ಬೆಳಗಾವಿಯ ಬೀದಿ ನಾಯಿಗಳು ಹಸಿದಿವೆ ಹುಷಾರ್…..ಇಲ್ಲಾ ಅಂದ್ರೆ ಕುರಿ ಕೋಳಿ ಢಮಾರ್……!!
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ