Breaking News
Home / Breaking News / ಸಿಹಿ ಹಂಚಿದವರಿಗೆ ಟೆನಶ್ಯನ್…..ಬಿಡುಗಡೆ ಆದವರಿಗೆ ಮತ್ತೇ ಕ್ವಾರಂಟೈನ್……!!!

ಸಿಹಿ ಹಂಚಿದವರಿಗೆ ಟೆನಶ್ಯನ್…..ಬಿಡುಗಡೆ ಆದವರಿಗೆ ಮತ್ತೇ ಕ್ವಾರಂಟೈನ್……!!!

ಬೆಳಗಾವಿ- ಬೆಳಗಾವಿಯ ತಾಲ್ಲೂಕಿನ ಅಗಸಗಿ ಗ್ರಾಮದಲ್ಲಿ ವಿಚಿತ್ರ,ವಿಭಿನ್ನ ರೀತಿಯ ಪಾಲಿಟಿಕ್ಸ್ ನಡೆದಿದೆ. ಬೆಕ್ಕಿಗೆ ಚಲ್ಲಾಟ ಇಲಿಗೆ ಸಂಕಟ ಎನ್ನುವ ಗಾದೆ ಮಾತಿಗೆ ಹೇಳಿ ಮಾಡಿಸಿದಂತಹ ಘಟನೆ ಈ ಗ್ರಾಮದಲ್ಲಿ ನಡೆದಿದೆ.

ಮಹಾರಾಷ್ಟ್ರದಿಂದ ಅಗಸಗಿ ಗ್ರಾಮಕ್ಕೆ ಮರಳಿ ಬಂದ ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿತ್ತು ,ಎರಡು ದಿನಗಳ ಹಿಂದಷ್ಟೇ ಕ್ವಾರಂಟೈನ್ ಅವಧಿ ಮುಗಿದಿದೆ ಅಂತಾ ಈ ವಲಸೆ ಕಾರ್ಮಿಕರನ್ನು ಬಿಡುಗಡೆ ಮಾಡಲಾಗಿತ್ತು. ವಲಸೆ ಕಾರ್ಮಿಕರು ಬಿಡುಗಡೆ ಆಗಿದ್ದಾರೆ ಅಂತಾ ಕೆಲವು ಕಾಂಗ್ರೆಸ್ ನಾಯಕರು ಬಿಡುಗಡೆಯಾದ ಅಗಸಗಿ ಗ್ರಾಮದ ವಲಸೆ ಕಾರ್ಮಿಕರನ್ನು ಭೇಟಿಯಾಗಿ ಸಿಹಿ ಹಂಚಿ ಸಂಬ್ರಮಿಸಿದ್ದರು

ಕಾಂಗ್ರೆಸ್ ನಾಯಕರು ಸಿಹಿ ಹಂಚಿ ಹೋದ ಸುದ್ಧಿ ಬಿಜೆಪಿ ನಾಯಕರಿಗೆ,ಗೊತ್ತಾಗಿ ಅವರೂ ಅಗಸಗಿ ಗ್ರಾಮಕ್ಕೆ ಹೋಗಿ ಕ್ವಾರಂಟೈನ್ ನಿಂದ ಬಿಡುಗಡೆಯಾದ ಕಾರ್ಮಿಕರನ್ನು ಭೇಟಿಯಾಗಿ ಅವರೂ ಸಿಹಿ ಹಂಚಿದ್ರು

ಕ್ವಾರಂಟೈನ್ ನಿಂದ ಬಿಡುಗಡೆಯಾಗಿ ,ಖುಷಿಯಾಗಿದ್ದ ಕಾರ್ಮಿಕರು ಕಾಂಗ್ರೆಸ್ ಹಾಗು ಬಿಜೆಪಿ ನಾಯಕರ,ಸಿಹಿ ಹಂಚಿಕೆಯಿಂದ ಇನ್ನಷ್ಟು ಖುಷಿ ಪಟ್ಟಿದ್ದರು.

ಆದ್ರೆ ಇಂದು ಭಾನುವಾರ ರಿಲ್ಯಾಕ್ಸ್ ಮೂಡ್ ನಲ್ಲಿದ್ದ ,ಕ್ವಾರಂಟೈನ್ ನಿಂದ ಬಿಡುಗಡೆಯಾದ ಕೆಲವು ಕಾರ್ಮಿಕರನ್ನು ಆರೋಗ್ಯ ಇಲಾಖೆ ಇಂದು ಮತ್ತೆ ವಶಕ್ಕೆ ಪಡೆದು ಅವರನ್ನು ಐಸೋಲೇಟ್ ಮಾಡಿದೆ ಎನ್ನುವ ಸುದ್ಧಿ ಈಗ ಬೆಳಗಾವಿ ತಾಲ್ಲೂಕಿನಲ್ಲಿ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ.

ಅಗಸಗಿ ಗ್ರಾಮದಲ್ಲಿ ಕ್ವಾರಂಟೈನ್ ನಿಂದ ಬಿಡುಗಡೆಯಾದ ಕಾರ್ಮಿಕರನ್ನು ಭೇಟಿಯಾಗಿ,ಸಿಹಿ ಹಂಚಿಕೆ ಮಾಡಿದ ಕಾಂಗ್ರೆಸ್ ಹಾಗು ಬಿಜೆಪಿ ನಾಯಕರಿಗೂ ಈಗ ಆತಂಕ ಶುರುವಾಗಿದೆ. ಯಾಕಂದ್ರೆ ಕ್ವಾರಂಟೈನ್ ನಿಂದ ಬಿಡುಗಡೆಯಾದ ವಲಸೆ ಕಾರ್ಮಿಕರನ್ನು ಆರೋಗ್ಯ ಇಲಾಖೆ ಮತ್ತೆ ಕರೆದುಕೊಂಡು ಹೋಗಿದ್ದೇಕೆ ? ಎನ್ನುವ ಪ್ರಶ್ನೆ ಎದುರಾಗಿದೆ‌‌.

ಈ ಪ್ರಶ್ನೆಗೆ ಇಂದು ಸಂಜೆ ಬಿಡುಗಡೆಯಾಗುವ ರಾಜ್ಯ ಹೆಲ್ತ್ ಬುಲಿಟೀನ್ ನಲ್ಲಿ ಸ್ಪಷ್ಟ ಉತ್ತರ ಸಿಗಲಿದೆ.

About BGAdmin

Check Also

ಬೆಳಗಾವಿಯಲ್ಲಿ, 70 ಕೊರೊನಾ ಸೋಂಕಿತರ ಯಶಸ್ವಿ ಹೆರಿಗೆ

ಬೆಳಗಾವಿ-ಬೆಳಗಾವಿಯ ಭೀಮ್ಸ್ ಆಸ್ಪತ್ರೆಯಲ್ಲಿ, ಈವರೆಗೂ 70 ಕೊರೊನಾ ಸೋಂಕಿತರ ಯಶಸ್ವಿ ಹೆರಿಗೆ ಮಾಡಲಾಗಿದೆ ಎಂದು ಬಿಮ್ಸ್ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ