Breaking News
Home / Uncategorized / ಜೂನ್ 15 ರವರೆಗೆ ಅಂತರರಾಜ್ಯ ವಲಸೆಗರಿಗೆ ಪಾಸ್ ಇಲ್ಲ.

ಜೂನ್ 15 ರವರೆಗೆ ಅಂತರರಾಜ್ಯ ವಲಸೆಗರಿಗೆ ಪಾಸ್ ಇಲ್ಲ.

ಬೆಳಗಾವಿ- ಅಂತರರಾಜ್ಯ ವಲಸೆಗರಿಗೆ ಜೂನ್ 15 ರವರೆಗೆ ಪಾಸ್ ಇಲ್ಲ ಎಂದು ಬೆಳಗಾವಿಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ‌ ಹೇಳಿದ್ದಾರೆ.

ನಿಪ್ಪಾಣಿ ಭಾಗದಲ್ಲಿ ಕಳ್ಳದಾರಿಯಲ್ಲಿ ನುಗ್ಗುವ ವಿಚಾರವಾಗಿ ಗಡಿ ಭಾಗದಲ್ಲಿ ಹೆಚ್ಚಿನ ಚೆಕ್ ಪೋಸ್ಟ್ ನಿರ್ಮಾ ಮಾಡಲು ಸೂಚನೆ ನೀಡಿದ್ದೇನೆ.
ತಾಲ್ಲೂಕು, ಜಿಲ್ಲಾ ಚೆಕ್ ಪೋಸ್ಟ್ ಗಡಿ ಶಿಫ್ಟ್ ಮಾಡಲು ಸೂಚನೆ ನೀಡಲಾಗಿದೆ. ಲಾಕ್ ಡೌನ್ ಮುಗಿದ ಬಳಿಕ ಗಡಿಯಲ್ಲಿ ಹೆಚ್ಚಿನ ವಾಹನ ಓಡಾಟ ಶುರುವಾಗಿದ್ದು
ಇದೀಗ ಪೊಲೀಸರಿಗೆ ಹೆಚ್ಚಿನ ಸವಾಲ್ ಆಗಿದೆ ಎಂದರು.

ಕೊವಿಡ್, ಕ್ರೈಂ ನಿಯಂತ್ರಣಕ್ಕೆ ಆದ್ಯತೆ ಕೊಡಲು ಸೂಚಿಸಲಾಗಿದೆ. ಕೆಲವರು ಕಳ್ಳ ಮಾರ್ಗದಲ್ಲಿ ಬಂದಿದ್ದು ನಿಜ,ಆದರೇ ಸದ್ಯ ಕಳ್ಳ ಮಾರ್ಗ ಸಂಪೂರ್ಣ ಬಂದ್ ಆಗದೆ. ಕ್ವಾರಂಟೈನ್ ಸೌಲಭ್ಯ ನೋಡಿ ಅಂತರರಾಜ್ಯ ವಲಸಿಗರಿಗೆ ಪಾಸ್ ಕೊಡುತ್ತೇವೆ.
ಮುಂದಿನ ಜೂನ್ 15ರ ರವರೆಗೆ ಪಾಸ್ ಇಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಳಗಾವಿ ರಾಜಕಾರಣದ ಬೆಳವಣಿಗೆ ಕುರಿತು ಮಾದ್ಯಮ ಮಿತ್ರರು ಪ್ರಶ್ನಿಸಿದಾಗ ನಾನು ಬೆಳಗಾವಿ ರಾಜಕಾರಣ ಅದ್ಯಯನ ಮಾಡುವ ವಿದ್ಯಾರ್ಥಿ ನಾನಾಗಿದ್ದೇನೆ ಈ ಜಿಲ್ಲೆಯ ರಾಜಕಾರಣವನ್ನು ಈಗ ಅರ್ಥ ಮಾಡಿಕೊಳ್ಳುತ್ತಿದ್ದೇನೆ ಈಗ ಸದ್ಯಕ್ಕೆ ವಿದ್ಯಾರ್ಥಿ ನಾನು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ- ಅಭಯ ಪಾಟೀಲ

ಹಿರಿಯ ಶಾಸಕ ಉಮೇಶ್ ಕತ್ತಿ ಮನೆಯಲ್ಲಿ ಭೋಜನಕೂಟ ವಿಚಾರವಾಗಿ  ಬೆಳಗಾವಿಯಲ್ಲಿ ಶಾಸಕ ಅಭಯ್ ಪಾಟೀಲ್ ಹೇಳಿಕೆ ನೀಡಿದ್ದಾರೆ‌
ಕಳೆದ ಮೂರು ವಾರದಿಂದ ಉಮೇಶ್ ಕತ್ತಿ ಮನೆಯಲ್ಲಿ ಶಾಸಕರೆಲ್ಲರೂ ಊಟ ಮಾಡುತ್ತಿದ್ದೇವೆ, ಮಾಧ್ಯಮಗಳಿಗೆ ನಿನ್ನೆ ಗಮನಕ್ಕೆ ಬಂದಿದೆ.
ಮುಂದಿ‌ನ ಬುಧುವಾರ ಉಮೇಶ್ ಕತ್ತಿ ಮನೆಗೆ ಊಟಕ್ಕೆ ಹೋಗುತ್ತೇವೆ. ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕವಾಗಿ ಸಮಸ್ಯೆಗಳ ಕುರಿತು ಚರ್ಚೆ ಮಾಡಿದ್ದೇವೆ.
ರಮೇಶ್ ಕತ್ತಿ ರಾಜ್ಯಸಭಾ ಟಿಕೆಟ್ ನೀಡುವ ಕುರಿತು ಚರ್ಚೆಯಾಗಿಲ್ಲ. ಸಿಎಂ ಬದಲಾವಣೆ ಕುರಿತು ಹಿರಿಯ ಶಾಸಕರನ್ನ ಕೇಳಿ,ಎಂದು ಹೇೇಳಿದರು.

ಬೆಳಗಾವಿ ಜಿಲ್ಲೆಯಲ್ಲಿ 1990 ರಿಂದ ಬಿಜೆಪಿಯಲ್ಲಿದ್ದೇನೆ ಹೀಗಾಗಿ ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ.
ಪಕ್ಷ ನನಗೆ ಯಾವಗ ಗುರುತು ಮಾಡಿ ಅವಕಾಶ ಕೊಡುತ್ತೆ ಕೆಲಸ ಮಾಡುತ್ತೇನೆ. ನನ್ನ ಕ್ಷೇತ್ರಕ್ಕೂ ಅನುದಾನದ ಕೊರತೆ ಇದೆ ಸಾಕಷ್ಟು ಬಾರಿ ಶಾಸಕಾಂಗ ಸಭೆಯಲ್ಲಿ ಹೇಳಿದ್ದೇನೆ. ನಾಯಕತ್ವ ಬದಲಾವಣೆ ಕುರಿತು ಚರ್ಚೆಗೆ ಬಂದಿಲ್ಲ ಎಂದು  ಬೆಳಗಾವಿಯಲ್ಲಿ ಶಾಸಕ ಅಭಯ್ ಪಾಟೀಲ್ ಹೇಳಿದ್ದಾರೆ

Check Also

ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ಮುಖಕ್ಕೆ ಕಪ್ಪು ಮಸಿ ಎರಚಿದ್ರು…!!

ಬೆಳಗಾವಿ-ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರ ಮುಖಕ್ಕೆ ಮಸಿ ಬಳಿದ ಘಟನೆ ಇಂದು ಮಹಾರಾಷ್ಟ್ರದ ಪೂನೆಯಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *